Monday, December 23, 2024
Homeರಾಜ್ಯ*ಕೂಡ್ಲಿಗಿ:ಅನಧಿಕೃತ ನಾಮ ಫಲಕ ಬಳಕೆಯ ವಾಹನಗಳಿಗೆ ಕಡಿವಾಣ ಯಾವಾಗ.!?*-

*ಕೂಡ್ಲಿಗಿ:ಅನಧಿಕೃತ ನಾಮ ಫಲಕ ಬಳಕೆಯ ವಾಹನಗಳಿಗೆ ಕಡಿವಾಣ ಯಾವಾಗ.!?*-

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಅನಧಿಕೃತ ನಾಮಫಲಕ ಉಳ್ಳ ಸಾಕಷ್ಟು ವಾಹನಗಳು ನಿತ್ಯವೂ ರಾಜಾರೋಷವಾಗಿ ಸಂಚರಿಸುತ್ತಿವೆ. ನಿಯಂತ್ರಿಸಬೇಕಾಗಿರುವ  ಸಂಬಂಧಿಸಿದ ಇಲಾಖೆಗಳು ನಿದ್ರೆಗೆ ಜಾರಿವೆ, PRESS PILICE ಸರ್ಕಾರಿ ಸೇವೆಯಲ್ಲಿ, ON DYUTY ELECHON DYUTY “ಭಾರತ ಸರ್ಕಾರ ಸೇವೆಯಲ್ಲಿ”  “ಕರ್ನಾಟಕ ಸರ್ಕಾರ”  “ರಾಜ್ಯ ಅಧ್ಯಕ್ಷರು” ಅಧ್ಯಕ್ಷರು. “EX ARMY”  “ARMY” “DOCTER”  ಮತ್ತು ಇತ್ಯಾದಿ ಪದನಾಮಾಂಕಿತಗಳನ್ನು. ಹಾಗೂ ಕೆಲವು ಇಲಾಖೆಗಳ ಪದನಾಮ ಪ್ರತಿನಿಧಿಸುವ, ಸಿಂಬಲ್ ಗಳನ್ನು ವಾಹನಕ್ಕೆ ಹಾಕಿಕೊಂಡು ಬೇಕಾ ಬಿಟ್ಟಿಯ‍ಾಗಿ ಅಲೆದಾಡುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲವು ಅನಿವಾರ್ಯ ಕಾರಣಕ್ಕೆ ಕೆಲವೊಂದು ಕ್ಷೇತ್ರದವರು  ಫಲಕಗಳನ್ನು  ಕರ್ಥವ್ಯ ನಿರತರಾಗಿದ್ದಾಗ ಮಾತ್ರ ಹಾಕಿ ಕೊಳ್ಳಬೇಕೆ ಹೊರತು, ಇನ್ನುಳಿದ ಸಂದರ್ಭದಲ್ಲಿ ಅನ್ವಹಿಸುವುದಿಲ್ಲ. ಉದಾ: PRESS ನಾಮಾಂಕಿತ ಪೇಪರ್ ಸಾಗಿಸುವ ಬಾಡಿಗೆ ವಾಹನ,    ಪೇಪರ್ ಸಾಗಿಸುವ ಅವಧಿ ಮುಗಿದಾಕ್ಷಣ ನಾಮ ಫಲಕ ತೆಗೆದಿರಿಸಬೇಕು.  ಹಾಗೇಯೆ ಬಾಡಿಗೆ ವಾಹನಗಳಿಗೆ ಯಾವುದೇ ನಾಮಫಲಕ ಹಾಕಬಾರದು. ಪೊಲೀಸ್ ಇಲಾಖೆ ಖಾಸಗೀ ವಾಹನವನ್ನು ಬಾಡಿಗೆ ಪಡೆದು,ಬ POLICE ಎಂಬ ನಾಮಫಲಕ ಹಾಕಿಕೊಂಡು ಬಳಸಿ. ಕರ್ಥವ್ಯದ  ನಂತರ ಅಂದರೆ  ಬಾಡಿಗೆ ಅವದಿ ಮುಗಿದ ಮೇಲೆ ವಾಹನಕ್ಕೆ ಅಳವಡಿಸಿದ್ದ, POLICE ನಾಮಫಲಕವನ್ನು ಮೊದಲು ತೆರವುಗೊಳಿಸಬೇಕಿದೆ. ಇದು ಕೇವಲ ಉದಾ: ಮಾತ್ರ.  ಕೆಲ  ಇಲಾಖೆಯವರು ಖಾಸಗಿ ವಾಹನಗಳನ್ನು ಬಾಡಿಗೆ ಪಡೆದು ನಾಮಫಲಕ ಅಳವಡಿಸಿ, ಕರ್ಥವ್ಯ ಮುಗಿದ ನಂತರ ನಾಮಫಲಕ ತೆರೆಯದೇ ಖಾಯಂ ಆಗಿ ಬಿಟ್ಟು ಬಿಡುತ್ತಾರೆ. ಇಂತಹ ಹಲವು ವಾಹನಗಳು ಕೂಡ್ಲಿಗಿ ಪಟ್ಟಣದಲ್ಲಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಯಾವುದೇ ಅಗತ್ಯ ಕ್ರಮ ಜರುಗಿಸುತ್ತಿಲ್ಲ. ಅವು ಸರ್ಕಾರಿ ಕರ್ಥವ್ಯ ಸಮಯದಲ್ಲಿ ಮಾತ್ರವಲ್ಲ, ಹಗಲು ರಾತ್ರಿ ಖಾಸಗೀ ಸೇವೆಯಲ್ಲಿ ನಿರತವಾಗಿರುತ್ತವೆ. ಬಾರುಗಳ ಮುಂದೆಯೋ ಇಸ್ಪೇಟ್ ಅಡ್ಡೆಗಳ ಬಳಿಯೋ ಕೆಲವೊಮ್ಮೆ ರಾತ್ರಿ ಹೊತ್ತಲ್ಲೂ ಡಾಬಾ ಹೊಟೆಲ್ ಗಳ ಬಳಿ ಇರೋದು ಕಾಣಬಹುದಾಗಿದೆ. ಕೂಡ್ಲಿಗಿ ಪಟ್ಟಣದಲ್ಲಿ PRRESS POLICE ನಾಮ ಫಲಕಗಳುಳ್ಳ ವಾನಗಳ ದಂಖ್ಯೆ, ಮಿತಿ ಮೀರಿದ್ದು ಸಂಖ್ಯೇ ಎಲ್ಲೆ ಮೀರಿದೆ ಎನ್ನಲಾಗುತ್ತಿದೆ. ಅನಧಿಕೃತ ಅನಧೀಕೃತ ಎಂಬುದನ್ನು ಸಂಬಂಧಿಸಿದ ಇಲಾಖಾಧಿಕಾರಿಗಳೇ ತಪಾಸಣೆ ಮಾಡಬೇಕಿದೆ, ಪೇಪರ್ ಸರಬರಾಜು ಮಾಡುವ ಬಾಡಿಗೆ ವಾಹನಗಳು ಅವದಿ ಮುಗಿದ ಮೇಲೆಯೂ, PRESS ನಾಮ ಫಲಕ ಹೊಂದಿ ನಿಯಮಗಳನ್ನು ಗಾಳಿಗೆ ತೂರಿ ವಾಹನ ಬಾಡಿಗೆಗೆ ಬಳಸಲಾಗುತ್ತಿದೆ. ಆ ವಾಹನಗಳನ್ನು ಕೆಲವೊಮ್ಮೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ  ಎಂಬ ಆರೊಪವಿದೆ, ಕಾರಣ ಪೇಪರ್ ಸರಬರಾಜು ಸಮಯದಲ್ಲಿ ಮಾತ್ರ ವಾನಕ್ಕೆ PRESS ನಾಮ ಫಲಕ ಹಾಕಿಕೊಳ್ಳಬೇಕಿದೆ. ಸಮಯದ ನಂತರ ನಾಮಪಲಕವನ್ನು ತೆರವು ಗೊಳಿಸಬೇಕಿದೆ, ಅದಕ್ಕಾಗಿ ವಾಹನಕ್ಕೆ ತಾತ್ಕಾಲೊಕ ನಾಮ ಫಲಕ ಬಳಸುವಂತೆ ಸೂಚಿಸಬೇಕಿದೆ. ಮೊದಲು ಬಾಡಿಗೆ ವಾಹನಗಳಿಗೆ ಅಂಟಿಸಿರುವ PRESS ಸ್ಟಿಕರ್ ಅನ್ನು ಕೂಡಲೇ ತೆರವುಗೊಳಿಸಬೇಕಿದೆ, ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಬಾಡಿಗೆ ವಾಹನದ ಮಾಲೀಕರಿಗೆ. ಅಗತ್ಯ ಸೂಚನೆಗಳನ್ನು ನಿರ್ಧೇಶನವನ್ನು ಪಾಲಿಸುವಂತೆ ಆದೇಶಿಸಬೇಕಿದೆ, ತಾತ್ಕಾಲಿಕ ನಾಮಫಲಕ ಬಳಸುವಂತೆ  ನೀಡಬೇಕಿದೆ. ಕೆಲ ನಾಮಲಾವಸ್ಥೆಯ  ವರದಿಗಾರರು PRESS ಮ‍ಮಫಲಕ ಹಾಕಿಕೊಂಡು ತಿರುಗಾಡುವುದು ಸಾಮಾನ್ಯವಾಗಿದೆ, ಪತ್ರಿಕಾಲಯದಿಂದ ಅಧೀಕೃತವಾಗಿ ಪರವಾನಗಿ ಅಥವಾ ಗುರುತಿನ ಚೀಟಿ ಹೊಂದಿರುವವರು ಮಾತ್ರ, PRESS ನಾಮಫಲಕ ಹೊಂದಿರುವ ವಾಹನ ಚಲಾಯಿಸುತ್ತಿರಬೇಕಿದೆ. ಪತ್ರಿಕೆ ಅಥವಾ ಮಾಧ್ಯಮ  ರಂಗದ ಪರಿಚಯವೇ ಇಲ್ಲದೇ ಇರೋರು ಕೂಡ,ಯಾವುದೋ ಕಾರಣಕ್ಕೆ PRESS ನ‍ಾಮ ಫಲಕ ಉಳ್ಳ ವಾನ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಹಲವು ಸಂದರ್ಭದಲ್ಲಿ  ಪೊಲೀಸ್ ಇಲಾಖೆಗೆ ಸಂಬಂಧಿಸದ ವ್ಯಕ್ತಿಗಳು, POLICE ನಾಮಫಲಕ ಹೊಂದಿರುವ ವಾಹನಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇಂತಹ ನಾಮಫಲಕ ಉಳ್ಳ ವಾಹನಗಳ ಬಳಕೆ ಇತ್ತೀವೆಗೆ,  ಪಟ್ಟಣದಲ್ಲಿ ಎಗ್ಗಿಲ್ಲದೇ ಸಂಚರಿಸುತ್ತಿವೆ ಎಂದು ಪ್ರಜ್ಞಾವಂತರು ಕೆಲ ಹೋರಾಟಗಾರರು ದೂರಿದ್ದಾರೆ. “ಕರ್ನಾಟಕ ಸರ್ಕಾರ” “ಸರ್ಕಾರಿ ಸೇವೆಯಲ್ಲಿ” ಇತ್ಯಾದಿ ನಾಮಫಲಕ ಗಳುಳ್ಳ,  ಕೆಲ ಲಘವಾಹನ ಮತ್ತು ಕೆಲ ಕಾರುಗಳು ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಗಳಲ್ಲಿ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಸಮಯದ ಪರಿವಿಲ್ಲದೇ, ಯಾವುದೇ ಅಡೆ ತಡೆಯಿಲ್ಲದೇ ಸಂಚರಿಸುತ್ತಿವೆ ಎಂಬ ದೂರುಗಳಿವೆ. ಇದೆಲ್ಲವೂ ನಾಮಪಲಕ ದುರುಪಯೋಗವನ್ನು ಸಾಬೀತು ಪಡಿಸುತ್ತದ್ದು, ಸಂಬಂಧಿಸಿದ ಆರ್
ಟಿಒ ಹಾಗೂ ಪೊಲೀಸ್ ಇಲಾಖಾಧಿಕಾರಿಗಳು ಇಂತಹ ವಾಹನಗಳನ್ನು ತೀವ್ರ ತಪಾಣೆಗೊಳಪಡಿಸಬೆಕಿದೆ. ಪತ್ರಿಕೆ ಸರಬರಾಜು ಮಾಡುವ ಬಾಡಿಗೆ ವಾಹನಗಳಲ್ಲಿರುವ  PRESS ಸ್ಟಿಕರ್ ನ್ನು ಅಥವಾ ಖಾಯಂ ನಾಮಫಲಕ ತೆರವುಗೊಳಸಬೇಕಿದೆ, ನಾಮಫಲಕ  ತಾತ್ಕಾಲಿಕಗೊಳಿಸಬೇಕಿದೆ ಮತ್ತು ಕರ್ಥವ್ಯ ಅವಧಿಯಲ್ಲಿ ಮಾತ್ರ ಬಳಸುವಂತೆ ಸೀಮಿತಗೊಳಿಸಿ ಅಗತ್ಯ ಕ್ರಮ ಜರುಗಿಸಬೇಕಿದೆ. ಬಾಡಿಗೆ ವಾನಗಳಿಗೆ ಅನಧಿಕೃತವಾಗಿ ನಾಮಫಲಕ ಅಳವಡಿಕೆ,  ಕರ್ಥವ್ಯದಲ್ಲಿರದವರು  ನಾಮಫಲಕ ಇರೋ ವಾಹನ ಬಳಕೆ ನಿಷೇಧ ಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖಾಧಿಕಾರಿಗಳು ಮತ್ತು ಆರ್ ಟಿ ಒ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅನಧಿಕೃತವಾಗಿ ನಾಮಫಲಕ ಉಳ್ಳ ವಾಹನಗಳನ್ನು, ವಾಹನಗಳ ಸವಾರರು ಮತ್ತು ಮಾಲೀಕರನ್ನು ತಪಾಸಣೆ ಹಾಗೂ ವಿಚಾರಣಗೊಳಪಡಿಸಿ ಖಾತರಿಪಡಿಸ ಕೊಳ್ಳಬೇಕಿದೆ.ಈ ಮೂಲಕ ನಾಮಫಲಕ ಉಳ್ಳ ವಾಹನಗಳ ದರುಪಯೋಗ ನಿಲ್ಲಬೇಕಿದೆ ಎಂದು, ನಾಗರೀಕರು ಹಾಗೂ ಕೆಲ ಸಂಘಟನೆಗಳ ಹೋರಾಟಗಾರರು ಈ ಮೂಲಕ ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ