ಚನ್ನಮ್ಮನ ಕಿತ್ತೂರು : ಕಿತ್ತೂರು ಪಟ್ಟಣದಲ್ಲಿರು ಹಲವಾರು ಓಣಿಯಲ್ಲಿ ಸಾರ್ವಜನಿಕ ನಳಗಳು ಇದ್ದು ನೀರು ಬಂದಾಗ ನೀರು ತುಂಬುವ ಸಮಯದಲ್ಲಿ ನೀರಿಗಾಗಿ ಹಲವರು ಜಗಳ ಮಾಡುತ್ತಾರೆ ಇದ್ದರಿಂದ ಅಲ್ಲಿರುವ ಜನರಿಗೆ ಇವರ ಜಗಳ ಮಾಡುವಾಗ ಅವರು ಬೈಯುವ ಅವಾಚ್ಯ ಶಬ್ದಗಳಿಂದ ಕಿವಿ ಮುಚ್ಚಿಕ್ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಪಟ್ಟಣದಲ್ಲಿ ಹಲವಾರು ಓಣಿಗಳಲ್ಲಿ ಇರುವವರು ಬಡವರು, ಮಧ್ಯದ ವರ್ಗದ ಜನರು ಇರುವ ಕಾರಣ ಸ್ವಂತ ನಳವನ್ನು ಪಡೆದುಕೊಳ್ಳುವಷ್ಟು ಶಕ್ತರಿಲ್ಲ.
ಗುರುವಾರ ಪೇಟೆಯಲ್ಲಿ ಕೊಂಡವಾಡ ಚೌಕ್ ಸುತ್ತ ಮುತ್ತಲಿನ ಓಣಿ, ಸೋಮವಾರ ಪೇಟೆಯಲ್ಲಿ ಕೆಲ ಓಣಿಗಳಲ್ಲಿ ಪಟ್ಟಣ ಪಂಚಾಯಿತಿಯವರು ಇಲ್ಲಿರುವ ಪ್ರತಿ ಮನೆಗೆ ಉಚಿತವಾಗಿ ಸ್ವಂತ ಮನೆ ನಳವನ್ನು ಒದಗಿಸಿ ಕೊಡಬೇಕು, ಆ ನಳಗಳಿಗೆ ಈಗಿರುವ ನೀರಿನ ಮೂಲ ಇರುವ ಬೋರವೆಲ್ ಗಳಿಗೆ ಸಂಪರ್ಕ ಕಲ್ಪಿಸಬೇಕು ಎಂದು ಅಲ್ಲಿರುವವರು ಸಾರ್ವಜನಿಕರು ಅಧಿಕಾರಿಗಳಿಗೆ ಮತ್ತು ಪಟ್ಟಣ ಪಂಚಾಯಿತಿಯವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪಟ್ಟಣದಲ್ಲಿ ಇರುವ ಹಲವಾರು ಓಣಿಯಲ್ಲಿ ಇದೇ ಪರಿಸ್ಥಿತಿ –
ಈ ಪರಿಸ್ಥಿತಿ ಕೇವಲ ಈ ಒಂದು ಓಣಿಗೆ ಸಿಮಿತವಾಗಿಲ್ಲ ನೀರಿಗಾಗಿ ಕಿತ್ತೂರು ಪಟ್ಟಣದಲ್ಲಿರು ಹಲವಾರು ಓಣಿ/ನಗರದಲ್ಲಿ ನೀರಿಗಾಗಿ ದಿನನಿತ್ಯ ಪರಿದಾಟದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆ ಕಾಲ ಇರುವುದರಿಂದ ಕೆಲವು ಕಡೆ ನೀರು ಸರಿಯಾಗಿ ಬರುವುದಿಲ್ಲ ಅಲ್ಲಿ ಇರುವ ಹಲವಾರು ಬೋರವೆಲ್ ಬತ್ತಿ ಹೋಗಿವೆ ಕೆಲವು ಬೋರವೆಲ್ ನಲ್ಲಿ ನೀರು ಕಡಿಮೆ ಆಗಿವೆ. ಪಟ್ಟಣ ಪಂಚಾಯಿತಿಯವರು ಕಿತ್ತೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಎಲ್ಲಾ ವಾರ್ಡ್ ಗಳಲ್ಲಿಯೂ ನೀರು ಒದಗಿಸಬೇಕು ಹಾಗೂ ನೀರಿನ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
ಜಲ ಮಿಷನ್ ಯೋಜನೆಯಲ್ಲಿ ನಿರ್ಮಿಸಿರುವ ನಳವಿದ್ದರು ಪ್ರಯೋಜನವಿಲ್ಲ-
ಸರ್ಕಾರ ಯೋಜನೆಯಲ್ಲಿ ನಿರ್ಮಿಸಿರುವ ನಳಗಳು ಇದ್ದರು ಯಾವುದೇ ಪ್ರಯೋಜನ ಇಲ್ಲ. ಇನ್ನು ಕೆಲವು ಕಡೆ ಅರ್ಧಂಬರ್ಧ ಅಳವಡಿಸಿರುವ ನಳಗಳು ಇವೆ ಗುತ್ತಿಗೆದಾರರು ಇದನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು ಅದರಿಂದ ನೀರು ಒದಗಿಸುವ ಕಾರ್ಯ ಮಾಡಬೇಕು.
ನೀರಿಗಾಗಿ ದಿನನಿತ್ಯ ಪರಿದಾಟದ ಜೀವನ ನಡೆಸುವವರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ…..
ಸಂಪಾದಕರು: ರಾಮಚಂದ್ರಪ್ಪ ಪೂಜೇರ
