ಚನ್ನಮ್ಮ ಕಿತ್ತೂರು: ಕಿತ್ತೂರು ತಾಲೂಕು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ‘ಕಾರ್ಯನಿರತ ಪತ್ರಕರ್ತರ ಧ್ವನಿ’ ಸಂಘಕ್ಕೆ ನೂತನ ಸದಸ್ಯರುಗಳಾಗಿ 1. ನಾಗರಾಜ ಜೋರಾಪೂರ, 2. ರಾಜಶೇಖರ ಕೋಟಿ, 3. ರಾಜಪ್ಪ ಸಂಗೊಳ್ಳಿ, 4. ರಾಮಚಂದ್ರಪ್ಪ ಪೂಜೇರ ಹಾಗೂ 4. ಸಿದ್ದಪ್ಪ ಹದ್ದನ್ನವರ ಅವರುಗಳು ಅಧಿಕೃತವಾಗಿ ಸೇರ್ಪಡೆಗೊಂಡರು. ಸಂಘದ ವತಿಯಿಂದ ಆತ್ಮೀಯವಾಗಿ ನೂತನ ಎಲ್ಲಾ ಸದಸ್ಯರುಗಳನ್ನು ಬರಮಾಡಿಕೊಳ್ಳಲಾಯಿತು…
ಈ ಸದಸ್ಯರು ಸೇರ್ಪಡೆಗೊಂಡಿದರಿಂದ ತಾಲ್ಲೂಕಿನ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ್ದಂತಾಗಿದೆ, ನಮ್ಮ ಸಂಘದ ಶಕ್ತಿಯು ವೃದ್ಧಿಸಿದೆ, ಮುಂಬರುವ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಚಿನಗುಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷರಾದ ಬಸವರಾಜ ಚಿನಗುಡಿ ಅವರು ಮಾತನಾಡಿ ಈ ಸದಸ್ಯರು ಸೇರ್ಪಡೆಗೊಂಡಿದರಿಂದ ತಾಲ್ಲೂಕಿನ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ್ದಂತಾಗಿದೆ, ನಮ್ಮ ಸಂಘದ ಶಕ್ತಿಯು ವೃದ್ಧಿಸಿದೆ, ಮುಂಬರುವ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘಟನೆಯ ಬೆಳವಣಿಗೆಯ ಕುರಿತು ಹರ್ಷ ವ್ಯಕ್ತಪಡಿಸಿದ ಅವರು, ಹೊಸ ತಲೆಮಾರಿನ ಮತ್ತು ಅನುಭವಿ ಪತ್ರಕರ್ತರು ನಮ್ಮ ಸಂಘಕ್ಕೆ ಸೇರ್ಪಡೆಯಾಗಿರುವುದು ಒಕ್ಕೂಟಕ್ಕೆ ಆನೆಬಲ ಬಂದಂತಾಗಿ ಸಂಘಟನೆಯು ಈಗ ಮತ್ತಷ್ಟು ಬಲಿಷ್ಠವಾಗಿದೆ ಎಂದು ಹೇಳಿದರು.
ಪತ್ರಕರ್ತರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಬೇಕು, ಪತ್ರಿಕೋದ್ಯಮದ ಮೂಲ ಉದ್ದೇಶವಾದ ಸಮಾಜಮುಖಿ ಕಾರ್ಯಗಳಿಗೆ ನಾವೆಲ್ಲರೂ ಬದ್ಧರಾಗಿರಬೇಕು ಎಂಬುದೇ ನಮ್ಮ ಸಂಘಟನೆಯ ಉದ್ದೇಶವಾಗಿದ್ದು ಪತ್ರಕರ್ತರ ಸಹಕಾರದೊಂದಿಗೆ ಜನರಿಗೆ ಅನುಕೂಲವಾಗುವಂತಹ ವಿವಿಧ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪರಿಸರ ಸಂರಕ್ಷಣೆ, ಆರೋಗ್ಯ, ಶೈಕ್ಷಣಿಕ ಅರಿವು ಮತ್ತು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘವು ಕಾರ್ಯಪ್ರವೃತ್ತವಾಗಲಿದೆ ಎಂದು ವಿವರಿಸಿದರು.
ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ. ನಮ್ಮ ನಡುವಿನ ಒಗ್ಗಟ್ಟು ಕೇವಲ ಸಂಘದ ಅಭಿವೃದ್ಧಿಗಲ್ಲ, ಬದಲಾಗಿ ಇಡೀ ಸಮಾಜದ ಹಿತದೃಷ್ಟಿಯಿಂದ ಪ್ರಮುಖವಾಗಿದೆ ಎಂದೂ ಅವರು ಕಳಕಳಿ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರು ನೂತನ ಸದಸ್ಯರುಗಳು ಉಪಸ್ಥಿತರಿದ್ದರು,
