ನಾಗರಾಳ : ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವಿದ್ದಲ್ಲಿ ಮುಂಬರುವ ದಿನಗಳಲ್ಲಿ ಅವರು ಉತ್ತಮ ಸಮಾಜ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮಂಜುಳಾ ಶಿವಪ್ಪ ಉಂಡಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಲಿಂಗಸಗೂರು, ಪೋಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವನಿಕ ಸಂಪರ್ಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ 29ರಂದು ಹಲ್ಕಾವಟಗಿ ಗ್ರಾಮ ಪಂಚಾಯತಿ ಎದುರ ಸಭಾಂಗಣದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ-2012ರ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅಧ್ಯಯನ ನಡೆಸಿ ಅರಿವು ಮೂಡಿಸಿಕೊಂಡು ಸಾರ್ವಜನಿಕರಿಗು ಸಹ ಕಾನೂನಿನ ಬಗ್ಗೆ ತಿಳಿ ಹೇಳಬೇಕು. ಗ್ರಾಮೀಣ ಭಾಗದಲ್ಲಿ ಅಕ್ಷರಸ್ಥರು ಕಡಿಮೆ ಇರುವುದರಿಂದ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಈ ಕಾಯ್ದೆಯ ಬಗ್ಗೆ ಅರಿತು ಸುತ್ತಲಿನ ಜನರಿಗೆ ಜಾಗೃತಿ ಮೂಡಿಸಬೇಕು.
ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ತಂದೆ, ತಾಯಿ, ಪೋಷಕರಿಗೆ ಅಥವಾ ಶಿಕ್ಷಕರಿಗೆ ತಿಳಿಸಬೇಕು. ಬಾಲ್ಯ ವಿವಾಹದ ಬಗ್ಗೆ ಮಕ್ಕಳಿಗೆ ತಿಳಿದು ಬಂದರೆ ಅದನ್ನು ತಿಳಿಸುವ ಕೆಲಸ ಆಗಬೇಕು. ಬೇರೆಯವರಿಂದ ತೊಂದರೆಯಾದರೆ ಕಾನೂನಿನ ಸಹಾಯ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಅಂಬಣ್ಣ.ಕೆ. ಪ್ರಧಾನ ಸಿವಿಲ್ ಕಿರಿಯ ಶ್ರೇಣಿ ನ್ಯಾಯಾಧೀಶರು ಲಿಂಗಸುಗೂರ ಮಾತನಾಡಿ, ಇಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ದಾಖಲಾಗುವರ ಪೈಕಿ ಶೇಕಡ 50ರಷ್ಟು ಹೆಣ್ಣು ಮಕ್ಕಳಿರುವುದು ಖುಷಿಯ ಸಂಗತಿ ಎಂದರು. ಮಕ್ಕಳು ಅಪರಿಚಿತರೊಂದಿಗೆ ಸಲಿಗೆಯಿಂದಿರಬಾರದು. ನಿಮ್ಮೊಂದಿಗೆ ಯಾರಾದರು ಅಸಭ್ಯವಾಗಿ ವರ್ತಿಸಿದರೆ ಮೊದಲು ಪೋಷಕರಿಗೆ ತಿಳಿಸಬೇಕು. ಮಕ್ಕಳು ಕಾನೂನಿನ ಬಗ್ಗೆ ತಿಳಿಯಲು ಇನ್ನಷ್ಟು ಪ್ರಯತ್ನ ಪಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾಣಿತ
ಶ್ರೀಮತಿ ಮಂಜುಳಾ ಶಿವಪ್ಪ ಉಂಡಿ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಲಿಂಗಸುಗೂರ. ಶ್ರೀ ಅಂಬಣ್ಣ.ಕೆ. ಪ್ರಧಾನ ಸಿವಿಲ್ ಕಿರಿಯ ಶ್ರೇಣಿ ನ್ಯಾಯಾಧೀಶರು ಲಿಂಗಸುಗೂರ. ಭೂಪನಗೌಡ ಪಾಟೀಲ್, ಅಧ್ಯಕ್ಷರು, ವಕೀಲರ ಸಂಘ ಲಿಂಗಸುಗೂರ. ಮೋಹಿನ್ ಪಟೇಲ್ ವಕೀಲರು, ವಿಶ್ವನಾಥ ಕರಡಕಲ್ ವಕೀಲರು, ಆಶಿಕ್ ಅಹ್ಮದ್ ವಕೀಲರು, ನಂದೀಶ್ ವಕೀಲರು, ಮುದಕಪ್ಪ ವಕೀಲರು,ಗಂಗನಗೌಡ ವಕೀಲರು, ಹಾಜಿಬಾಬು ವಕೀಲರು,ಶಶಿಧರ ವಕೀಲರು,ದೇವೆಂದ್ರ ನಾಯಕ ವಕೀಲರು,ಆದಪ್ಪ ಪಾಟೀಲ್ ವಕೀಲರು,ಕುಪ್ಪಣ್ಣ ಕೋಠಾ ವಕೀಲರು, ಮಲ್ಲಪ್ಪ ಭಗವತಿ, ಶೇಖರಪ್ಪ ಕೋರಿ, ಹುಲ್ಲಪ್ಪ ಗೌಂಡಿ, ಅಮರೇಶ ಪೋಲಿಸ ಪಾಟೀಲ್, ನ್ಯಾಯಾಂಗ ಸಿಬ್ಬಂದಿ ಗಳಾದ ಲಕ್ಷ್ಮೀ ಪುತ್ರ, ರಾಜಶೇಖರ್, ಶರಣಬಸವ, ಶಿವಕೂಮಾರ, ಮಾನಪ್ಪ ಪೋಲಿಸ್ , ಲಕ್ಷ್ಮೀದೇವಿ ಅಬಕಾರಿ ನೀರಕ್ಷಕರು, ಶಾಂತಮೂರ್ತಿ ಕಾರ್ಮಿಕ ನಿರಿಕ್ಷಕರು, ಮೌನೇಶ , ಹೈಸ್ಕೂಲ್ ದೈಹಿಕ ಶಿಕ್ಷಕರು ತೆಗ್ಗಿ ಗುರುಗಳು, ಮತ್ತು ಪ್ರಾಥಮಿಕ ಮತ್ತು ಹೈಸ್ಕೂಲು ಮುಖ್ಯಗುರುಗಳು, ಮತ್ತು ಮಕ್ಕಳು, ಹಾಗೂ ಹಲ್ಕಾವಟಗಿ ಗ್ರಾಮದ ಮಹಿಳೆಯರು ಮತ್ತು ಗುರು ಹಿರಿಯರು ಹಾಗೂ ಪತ್ರಿಕಾ ಮಾದ್ಯಮದ ಮಲ್ಲಿಕಾರ್ಜುನ ರಾಂಪುರ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕರು ಲಿಂಗಸಗೂರು ಮತ್ತು ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮ ವನ್ನು ಯಶಸ್ವಿಯಾಗಿ ನೆರವೇರಿಸಿದರು.
ಜಿಲ್ಲಾ ವರದಿಗಾರರು : ಶಿವು ರಾಠೋಡ್