Thursday, March 5, 2026
HomeUncategorizedಕಲಬುರಗಿ ಜನರ ಸಂಚಾರ ಸಂಕಷ್ಟಕ್ಕೆ ಮುಕ್ತಿ: ಬರಲಿದೆ 'ರಿಂಗ್ ರೋಡ್', ಬದಲಾಗಲಿದೆ ನಗರದ ಮುಖಪುಟ!

ಕಲಬುರಗಿ ಜನರ ಸಂಚಾರ ಸಂಕಷ್ಟಕ್ಕೆ ಮುಕ್ತಿ: ಬರಲಿದೆ ‘ರಿಂಗ್ ರೋಡ್’, ಬದಲಾಗಲಿದೆ ನಗರದ ಮುಖಪುಟ!

ಕಲಬುರಗಿ: ಇನ್ಮುಂದೆ ಕಲಬುರಗಿ ನಗರದ ಹೃದಯಭಾಗದಲ್ಲಿ ಹೆವಿ ವೆಹಿಕಲ್‌ಗಳ ಕಿರಿಕಿರಿ ಇರುವುದಿಲ್ಲ! ನಗರದ ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೊರ ವರ್ತುಲ ರಸ್ತೆ (ORR) ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಕೈಗಾರಿಕಾ ಮತ್ತು ವಸತಿ ಪ್ರದೇಶಗಳ ಬೆಳವಣಿಗೆಗೆ ಈ ಯೋಜನೆ ಪೂರಕವಾಗಲಿದೆ. ನಗರದ ಮಾಸ್ಟರ್ ಪ್ಲಾನ್ ಪರಿಶೀಲಿಸಿದ ಸಚಿವರು, ಕೇವಲ ರಸ್ತೆ ಮಾತ್ರವಲ್ಲದೆ ಸಮರ್ಪಕ ನೀರು ಸರಬರಾಜು ಮತ್ತು ಭೂಗತ ಚರಂಡಿ ವ್ಯವಸ್ಥೆಯ ಜೋಡಣೆಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಗೆ ಎಲ್ಲಾ ನಾಗರಿಕ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಪ್ಲಾನ್ ರೂಪಿಸಲಾಗುತ್ತಿದೆ.

ಹೆಚ್ಚಿನ ಸುದ್ದಿ