ಬೆಳಗಾವಿ: ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಇರತಕ್ಕಂತ ಸಮಸ್ಯೆಗಳನ್ನ ಮಾನ್ಯ ಉಪ ನಿರ್ದೇಶಕರಲ್ಲಿ ಇಂದು ಮನವಿ ಸಲ್ಲಿಸುವುದರ ಮೂಲಕ ಈ ಕೆಳಗಿನ ಸಮಸ್ಯೆಗಳನ್ನು ತಿಳಿಸಲಾಯಿತು.
1) Kaams ಹಾಜರಾತಿ app ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ವೇಳೆ 10 ರಿಂದ 4.30 ಶನಿವಾರ ಮುಂಜಾನೆ 8 ಗಂಟೆ ಇಂದ 11.45 ವೇಳೆ ಬದಲಾವಣೆಗಾಗಿ ಮನವಿ ಸಲ್ಲಿಸಲಾಯಿತು.
2) ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಬಿಸಿಯೂಟ ಮಾಡುವ ಕೇಂದ್ರಗಳಲ್ಲಿ ಹಳೆಯ ಒಲೆಗಳು ಹಾಳಾಗಿರುವುದರಿಂದ ಹೊಸದಾಗಿ ಅಡಿಗೆ ಒಲೆಗಳನ್ನು ವಿತರಿಸಲು ವಿನಂತಿಸಲಾಯಿತು.
3) MDM ನಲ್ಲಿ ಮೊಟ್ಟೆ ದರವನ್ನು ಹೆಚ್ಚಿಸಲು ವಿನಂತಿಸಲಾಯಿತು
4) ಅಡುಗೆ ಕೋಣೆಗಳು ಹಾಳಾಗಿದ್ದು ಹೊಸ ಅಡುಗೆ ಕೋಣೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ವಿನಂತಿಸಲಾಯಿತು.
5) ಮುಖ್ಯೋಪಾಧ್ಯಾಯರಿಗೆ ಇರುವ ಇನ್ನಿತರ ಸಮಸ್ಯೆಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ B. S.ಪಕ್ಕೀರಸ್ವಾಮಿಮಠ, ಕಿತ್ತೂರು ಅಧ್ಯಕ್ಷರಾದ ಶ್ರೀ ಕುಬೇರ ಜಯಕ್ಕನವರ್ ಬೈಲಹೊಂಗಲ್ ಅಧ್ಯಕ್ಷರಾದ ಎಮ್ ಆರ್ ಬೋವಿ. ಬೆಳಗಾವಿ ಅಧ್ಯಕ್ಷರಾದ ಶ್ರೀ B. B. ಹಟ್ಟಿಹೊಳಿ. ಶ್ರೀ ಸುರೇಶ್ ಕಾರಿಮನಿ ಶ್ರೀS.M. ಪಾಶ್ಚಾಪುರ. ಶ್ರೀ S.Y.ಮಾದಿಗರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ M.B.ಗಾಣಗಿ. ಮುಂತಾದವರು ಉಪಸ್ಥಿತರಿದ್ದರು.
