ನರೇಂದ್ರ ಮೋದಿಜೀ ಅವರ ಸಂದೇಶ ವಾಚಿಸಿದ ಪ್ರಲ್ಹಾದ್ ಜೋಶಿ

ಚಿತ್ರದುರ್ಗ: ಬಿಎಸ್‍ವೈ ಅವರ ಜೀವನದಲ್ಲಿ ಜನರಿಗೆ ನೀಡಿದ ಸೇವೆಯ ಕುರಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರ ಸಂದೇಶವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ವಾಚಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ಅವರ ತ್ಯಾಗ, ಬೆವರಿನ ದುಡಿಮೆಯ ಕುರಿತು ಸಂದೇಶದಲ್ಲಿ ಮಾಹಿತಿ ನೀಡಿದ್ದನ್ನು ವಿವರಿಸಿದರು. ಕರ್ನಾಟಕದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾದುದು, ಪ್ರತ್ಯೇಕ ಕೃಷಿ ಬಜೆಟ್ ನೀಡಿದ್ದನ್ನು ಮೋದಿ ಜೀ ಅವರು ವಿವರಿಸಿದ್ದನ್ನು ತಿಳಿಸಿದರು.
ಯಡಿಯೂರಪ್ಪ ಅವರ ಸರಳತೆ, ಕಠಿಣ ಪರಿಶ್ರಮ, ಜನರ ಕಡೆ ಅವರ ಪ್ರೀತಿ, ರಾಜ್ಯದ ಏಳಿಗೆಗಾಗಿ ಅವರ ಶ್ರಮವನ್ನು ಮೋದಿಜೀ ಅವರು ತಮ್ಮ ಸಂದೇಶದಲ್ಲಿ ವಿವರಿಸಿದ್ದನ್ನು ತಿಳಿಸಿದರು. ಕಾರ್ಯಕರ್ತರಿಗೆ ಮತ್ತು ಜನಪ್ರತಿನಿಧಿಗಳಿಗೆ ಅವರ ಮಾರ್ಗದರ್ಶನ ಇರಲಿ ಎಂದು ತಿಳಿಸಿದ್ದನ್ನು ಗಮನಕ್ಕೆ ತಂದರು.
ಮೋದಿಜೀ ಅವರು ಅತ್ಯಂತ ವಿಶ್ವಾಸಾರ್ಹ ಜಗತ್ತಿನ ನಾಯಕ. ಅವರು ಯಡಿಯೂರಪ್ಪನವರ ಬಗ್ಗೆ ಅತ್ಯಂತ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಅಧಿಕಾರ ಪಡೆದಿದೆ. ಎನ್‍ಡಿಎ 21 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲೂ ಯಡಿಯೂರಪ್ಪನವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
