ಮುಂಡಗೋಡ : ಕಡ್ಲಿಕಟ್ಟೆ ಕೆರೆಯ ಪಕ್ಕದಲ್ಲಿ ಮೃತಪಟ್ಟ ನನ್ನ ತಮ್ಮನಾದ ಸುನೀಲ ಮ್ಯಾಗಡಿ ಅವರ ಸಾವಿನ ಬಗ್ಗೆ ನಮಗೆ ಸಂಶಯವಿದೆ ಎಂದು ಮೃತನ ಅಣ್ಣನಾದ ಅನಿಲ ಮ್ಯಾಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುನೀಲ ಮ್ಯಾಗಡಿ (40 ವರ್ಷ) ಮಹಾಲಿಂಗಪುರ (ತಾ.ಮುಧೋಳ) ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈತ ಎಂದು ತಿಳಿದು ಬಂದಿದೆ, ಹಾಗೂ
ಈತನಿಗೆ ಸರಾಯಿ ಕುಡಿಯುವ ಚಟವಿತ್ತು ಎಂದು ಅಣ್ಣ ಅನಿಲ ತಿಳಿಸಿದ್ದಾರೆ.
ಆತನಿಗೆ ಕುಟುಂಬದವರು ಸರಾಯಿ ಕುಡಿಯಬೇಡ ಎಂದು ಹಲವಾರು ಬಾರಿ ಹೇಳಿದರು ಸಹ ಆತನು ಯಾರ ಮಾತು ಕೇಳದೆ ದಿನಾಂಕ.12ರಂದು ಬೆಳಗ್ಗೆ 10ಗಂಟೆಯಿಂದ ದಿನಾಂಕ.13ರ ಬೆಳಗ್ಗೆ 10ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಕೆಇಬಿ ಕಚೇರಿಯ ಮುಂದೆ ಕಡ್ಲಿಕಟ್ಟೆ ಕೆರೆಯ ಪಕ್ಕದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ..
ಆತನ ಮರಣದಲ್ಲಿ ನಮಗೆ ಸಂಶಯವಿದೆ ಎಂದು ಪೊಲೀಸ ಠಾಣೆಗೆ ನೀಡಿದ ದೂರಿನಲ್ಲಿ ಅಣ್ಣ ಅನಿಲ ಮ್ಯಾಗಡಿ ತಿಳಿಸಿದ್ದಾರೆ.
ವರದಿ: ಬಸಯ್ಯ ತೋಟಯ್ಯನವರ
