ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯರ ಹೆಮ್ಮೆಯನ್ನು ನೂರ್ಮಡಿಗೊಳಿಸಿದೆ. ಪದಕ ವಿಜೇತ ತಂಡದ ಆಟಗಾರರೆಲ್ಲರಿಗೂ ಅಭಿನಂದನೆಗಳು. ಭಾರತ ತಂಡದ ಸಾಧನೆ ಅತ್ಯಂತ ಖುಷಿ ಕೊಟ್ಟಿದೆ.
ಹರ್ಮನ್ ಪ್ರೀತ್ ಸಿಂಗ್ ಅವರ ನಿಖರ ಗುರಿಯ ಹೊಡೆತಗಳು, ಎದುರಾಳಿ ಆಟಗಾರರ ಹೊಡೆತಗಳಿಗೆ ತಡೆಗೋಡೆಯಂತೆ ನಿಂತ ಶ್ರೀಜೇಶ್ ಹಾಗೂ ತಂಡದ ಇತರೆ ಎಲ್ಲಾ ಆಟಗಾರರ ಸಂಘಟಿತ ಹೋರಾಟಕ್ಕೆ ಸಂದ ಈ ಜಯ ಹೊಸ ಇತಿಹಾಸ ಸೃಷ್ಟಿಸಿದೆ.
ಈ ಒಲಿಂಪಿಕ್‌ನಲ್ಲಿ ಭಾರತ ಮತ್ತಷ್ಟು ಪದಕಗಳನ್ನು ಗೆದ್ದು ಬರಲಿ ಎಂದು ಹಾರೈಸುತ್ತೇನೆ.