Monday, February 9, 2026
HomeUncategorizedಒನಕೆ ಓಬವ್ವ ಜಯಂತಿ' ಆಚರಿಸಿದ : ಆರ್ . ಮಂಜುನಾಥ

ಒನಕೆ ಓಬವ್ವ ಜಯಂತಿ’ ಆಚರಿಸಿದ : ಆರ್ . ಮಂಜುನಾಥ

.

ನಾರಾಯಣಪುರ :
ಪೌರಾಣಿಕ, ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಅವರು ಸಮಯೋಚಿತ ಯುಕ್ತಿ, ಧೈರ್ಯ ಮತ್ತು ಸ್ಥಿರತೆಯ ಮೂಲಕ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಜನ್ಮದಿನವನ್ನು ‘ಒನಕೆ ಓಬವ್ವ ಜಯಂತಿ’ ಎಂದು ಆಚರಿಸಲು ಸರ್ಕಾರ ನಿರ್ಧರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಮತ್ತು ಸಂತಸದ ಸಂಗತಿ ಎಂದು ಹೇಳಿದ್ದಾರೆ.

ಒನಕೆ ಓಬವ್ವರ್ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ ಹೆಸರಾಗಿದೆ, ಅವರ ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ರಹನುಮಪ್ಪನವರ ಹೆಂಡತಿಯಾಗಿದ್ದರು. ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಹಠಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದರು. ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಜಜ್ಜಿ, ಹೊಡೆದು ಕೊಂದಿದ್ದರು. ಕೊನೆಯಲ್ಲಿ ಎದುರಾಳಿಯು ಬೆನ್ನ ಹಿಂದೆ ಬಂದದ್ದನ್ನು ಗಮನಿಸಲಾಗದೇ ಶತ್ರುವಿನ ಕತ್ತಿಗೆ ಬಲಿಯಾಗಿದ್ದರು.

ಪ್ರಸ್ತುತ ಆ ಕಿಂಡಿಯನ್ನು ಒನಕೆ ಒಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತಿದೆ. ಎಂದು ಆರ್ . ಮಂಜುನಾಥ . ಮುಖ್ಯ ಇಂಜಿನಿಯರ್, ಕೃಭಜನಿನಿಯಮಿತ ಕಾರ್ಯಾಚರಣೆ ಮತ್ತು ನಿರ್ವಹಣೆ ವಲಯ ನಾರಾಯಣಪುರ, ಎಸ್.ಇ ರಮೇಶ ರಾಠೋಡ್, ಕಾನಿ ಬಿ ಕೊಣ್ಣೂರ್, ಸ.ಕಾ.ನಿ. ವಿದ್ಯಾಧರ್, ಆದಮ ಶಫಿ ಸಹಾಯಕ ಆಡಳಿತಾಧಿಕಾರಿ, ಆದಪ್ಪ ಕುಂಬಾರ, ಅಮರೇಶ್ ರಾಠೋಡ ಅಧಿಕಾರಿಗಳು, ಎಂ. ಕೆ. ಪತ್ತಾರ ಆಪ್ತ ಸಹಾಯಕರು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು .

ವರದಿಗಾರರು : ಶಿವು ರಾಠೋಡ್ ಯಾದಗಿರಿ

ಹೆಚ್ಚಿನ ಸುದ್ದಿ