Saturday, June 13, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಉತ್ತರ ಕನ್ನಡ ಜಿಲ್ಲೆಯ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ...

ಉತ್ತರ ಕನ್ನಡ ಜಿಲ್ಲೆಯ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು….

ಯಲ್ಲಾಪುರ : ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಉತ್ತರ ಕನ್ನಡದಲ್ಲಿ ಇತಿಹಾಸ ನಿರ್ಮಿಸಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ,ನಿವೃತ್ತ ಆಯ್ ಪಿ ಎಸ್ ಅಧಿಕಾರಿ ಶಂಕರ ಬಿದರಿ ಹೇಳಿದರು. ಅವರು ಶನಿವಾರ ಪಟ್ಟಣದ
ಅಡಿಕೆ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ ನೂತನ ಜಿಲ್ಲಾಧ್ಯಕ್ಷ ವಿ ಎಸ್ ಪಾಟೀಲ ಹಾಗೂ ಅವರ ತಂಡ ನಿಮ್ಮೆಲ್ಲರ ಸಂಪೂರ್ಣ ಸಹಕಾರದಲ್ಲಿ ಜಿಲ್ಲೆಯಲ್ಲಿ ಸಮಾಜ ಸಂಘಟನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸವಿದೆ.
ಎಂದರಲ್ಲದೆ ಶತಶತಮಾನಗಳಿಂದ ಕೂಡಿಕೊಂಡು ಇರುವ ನಮ್ಮ ಸಮಾಜದಲ್ಲಿ ಯಾವದೇ ಮೂಲಭೂತ ಭಿನ್ನಾಭಿಪ್ರಾಯವಿಲ್ಲ ಎಲ್ಲ ಮಠಾಧೀಶರಲ್ಲಿ ವೀರಶೈವ ಹಾಗೂ ಲಿಂಗಾಯತರು ಒಂದೇ ಎಂಬಅಭಿಪ್ರಾಯವಿದೆ. ಎಲ್ಲಿ ಒಗ್ಗಟ್ಟಿದೆಯೋ ಅಲ್ಲಿ ಶಕ್ತಿ ಇದೆ ಎಂಬುದನ್ನು ಅರಿಯಬೇಕು.
ಪ್ರತ್ಯೇಕವಾಗಿ ಉಪಪಂಗಡದಿಂದ ಗುರುತಿಸಿಕೊಳ್ಳದೆ ವೀರಶೈವ ಲಿಂಗಾಯತ ಒಂದೇ ಸಮಾಜದಿಂದ ಗುರುತಿಸಿಕೊಂಡರೆ ರಾಜಕೀಯವಾಗಿ ಹೆಚ್ಚಿನ ಸ್ಥಾನ ಮಾನ, ಸೌಲಭ್ಯ ನಮ್ಮ ಸಮಾಜದವರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ವೀರಶೈವ ಮಹಾಸಭಾ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಅದರ ಪ್ರಯೋಜನ ಪಡೆದು ಕೊಳ್ಳಿ ಎಂದರು.ಮಹಾಸಭಾ ದ
ನೂತನ ಜಿಲ್ಲಾಧ್ಯಕ್ಷ ವಿ ಎಸ್ ಪಾಟೀಲ ಅಧ್ಯಕ್ಷತೆವಹಿಸಿ
ಮಾತನಾಡಿ ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬ ಭಾವನೆ ಎಲ್ಲರಲ್ಲಿಯೂ ಬಂದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಸಮಾಜದಲ್ಲಿ ಇದ್ದವರೆಲ್ಲರೂ ಒಳ್ಳೆಯವರೇ ಸಮಾಜದ ಬಗ್ಗೆ ಕಳಕಳಿಯಿಂದ ಕೆಲಸ ಮಾಡಬೇಕು ನಿಮ್ಮೆಲ್ಲರ ಸಹಕಾರದಿಂದ ನನಗೆ ನೀಡಿದ ಜವಾಬ್ದಾರಿಗೆ ನ್ಯಾಯ ಒದಗಿಸುತ್ತೇನೆ ಎಂದರು.
ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಜ್ಯೋತಿ ಪಾಟೀಲ,ರಾಜ್ಯ ಖಜಾಂಚಿ ಗಿರೀಶ ಗೌಡ ದ್ಯಾವನಹಳ್ಳಿ, ರಾಜ್ಯ ಉಪಾಧ್ಯಕ್ಷ ಗುರು ಮೆಟಗುಡ್ಡ, ಇತರರು ವೇದಿಕೆಯಲ್ಲಿದ್ದರು.
ಇದೆ ವೇಳೆ ಜಿಲ್ಲೆಯ ನೂತನ ಅಧ್ಯಕ್ಷರಿಗೆ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು. ಹಾಗೂ ಎಸ್ ಎಸ್ ಎಲ್ ಸಿ, ಪಿ ಯುಸಿ ಯಲ್ಲಿ 90ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಯಿತು
ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರ ಮಠ ಪ್ರಸ್ತಾವಿಕ ಮಾತನಾಡಿದರು.
ಶಿರಸಿ ಬಸವ ಬಳಗ ಮಹಾಸಭಾದ ಗೀತೆ ಹಾಡಿದರು
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕುಮಾರ ದಾವಣಗೇರಿ ಸ್ವಾಗತಿಸಿದರು ,
ಕಾರ್ಯದರ್ಶಿ ಮಂಜುನಾಥ ಹಿರೇಮಠ, ಜಿಲ್ಲಾ ಸಮಿತಿ ಸದಸ್ಯೆ ಚೇತನಾ ಗೌಡರ್ ನಿರ್ವಹಿಸಿದರು.
ಜಿಲ್ಲಾ ಸಮಿತಿ ಸದಸ್ಯ ಪ್ರವೀಣ ತೆಪ್ಪಾರ ವಂದಿಸಿದರು.
ಶಿರಸಿ ಸಿದ್ದಾಪುರ, ಹಳಿಯಾಳ ದಾಂಡೇಲಿ, ಮುಂಡಗೋಡ ಸೇರಿದಂತೆ ವಿವಿಧ ತಾಲೂಕಿನಿಂದ ವೀರಶೈವ ಲಿಂಗಾಯತ ಸಮಾಜದವರು ಅಪಾರ ಸಂಖ್ಯೆ ಯಲ್ಲಿ ಆಗಮಿಸಿದ್ದರು.

ಹೆಚ್ಚಿನ ಸುದ್ದಿ