ಉತ್ತರ ಕನ್ನಡ : ಜಿಲ್ಲೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಮಹಾಸಭೆಯ ಅಧ್ಯಕ್ಷರಾದ ಶ್ರೀ ವಿ.ಎಸ್.ಪಾಟೀಲರವರ ಅನುಮತಿ ಮೇರೆಗೆ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ 90% ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವೀರಶೈವ-ಲಿಂಗಾಯತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ದಿನಾಂಕ 06.06.2026ರ ಯಲ್ಲಾಪುರ ಕಾರ್ಯಕ್ರಮದ ಸಮಾರಂಭದಲ್ಲಿ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ (ಮಾತ್ರ) ಪುರಸ್ಕರಿಸಿ-ಅಭಿನಂದಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗಮನಿಸಿ:
*ಅರ್ಜಿ ಸಲ್ಲಿಸುವ ವಿಧಾನ: ಅಂಕಪಟ್ಟಿ ನಕಲು ಪ್ರತಿಯನ್ನು ಸಂಪೂರ್ಣ ಸಂಪರ್ಕ ಮೋಬೈಲ್ ವಿವರಗಳ ಸಹಿತ ಸ್ಥಳೀಯ ಮಹಾಸಭಾದ ಪದಾಧಿಕಾರಿಗಳಿಗೆ ಮೂಲಕ ಕೊನೆಯ ದಿನಾಂಕ: 04-06-2026 ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು*
1.ಅತ್ಯಂತ ಕಡಿಮೆ ಅವಧಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಮಯಾವಕಾಶ ಕಡಿಮೆಯಾಗಿದೆ. ಹಾಗಾಗಿ ಸಮಾಜದ ಸಹಕಾರ ಅಗತ್ಯವಾಗಿದೆ. *ಪ್ರತಿಭಾ ಪುರಸ್ಕಾರ ಯಾವುದೇ ಅರ್ಜಿನಮೂನೆ ಇರುವುದಿಲ್ಲ*.
2. ಮಹಾಸಭೆ ಸದಸ್ಯtva ಕಡ್ಡಾಯವಲ್ಲ, ಆದರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದು ಸ್ಥಳೀಯ ಮಹಾಸಭಾದ ಪದಾಧಿಕಾರಿಗಳಿಗೆ ಧ್ರಡಿಕರಿಸಿವುದು. ವಿದ್ಯಾರ್ಥಿ/ನೀ ಜಿಲ್ಲೆಯ ವಾಸ್ತವ್ಯ ಇರುವ ಕುಟುಂಬದವರಾಗಿರಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳ ಘಟಕದ ಪದಾಧಿಕಾರಿಗಳ ಮೂಲಕ ಮೂಲ ಅಂಕಪಟ್ಟಿ (Original Marks Card) ಧ್ರಡಿಕರಿಸಲ್ಫಟ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
3.ಖುದ್ದಾಗಿ ವಿದ್ಯಾರ್ಥಿ/ನಿಯರಿಗೆ ಪುರಸ್ಕಾರ ಸ್ವೀಕರಿಸಲು ಸಾಧ್ಯವಾಗದಿದ್ದರೆ, ಕನಿಷ್ಟ ಒಬ್ಬ ಪೋಷಕರು ದಿನಾಂಕ 6 ರಂದು ಯಲ್ಲಾಪುರದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
4. (ಅಂಚೆ, ಕೊರಿಯರ ಮೂಲಕ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ)
5.ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಹತ್ತಿರದ ಪದಾಧಿಕಾರಿಗಳನ್ನು ಸಂಪರ್ಕಿಸಿ.
6.ಈಮಾಹಿತಿಯನ್ನು ನಿಮ್ಮ ಕುಟುಂಬದವರು, ಬಂಧು-ಬಳಗ, ಸ್ನೇಹಿತರು ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸಿ, ಅರ್ಹವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆಯಲು ಸಹಕರಿಸಿ.
ಡಿ.ಕೆ.ಮಹೇಶಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉತ್ತರಕನ್ನಡ ಜಿಲ್ಲಾಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
ವರದಿಗಾರ : ಬಸಯ್ಯ ತೋಟಯ್ಯನವರ
ಸಂಪಾದಕರು: ರಾಮಚಂದ್ರಪ್ಪ ಪೂಜೇರ
