ಚನ್ನಮ್ಮನ ಕಿತ್ತೂರು: ಎಂ.ಕೆ. ಹುಬ್ಬಳ್ಳಿ ಪಟ್ಟಣದ ಅನುಭವ ಮಂಟಪದಲ್ಲಿ ಡಿ.18ರಂದು ಚನಮನ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಜರುಗಲಿದೆ. ನಾಡು-ನುಡಿ ಮೇಲಿನ ಅಭಿಮಾನ, ಸಾಹಿತ್ಯದ ಸೃಜನಶೀಲತೆ, ಸಾಂಸ್ಕೃತಿಕ ಚೇತನ ಒಟ್ಟುಗೂಡಿಸುವ ಈ. ಸಮ್ಮೇಳನ ಕಿತ್ತೂರು ನೆಲಕ್ಕೆ ಹೊಸ ಸಾಹಿತ್ಯ ಕಳೆ ಬೆಳಗ್ಗೆ 8 ಗಂಟೆಗೆ ಮುಖ್ಯ ವೇದಿಕೆಯ ಮುಂಭಾಗದಲ್ಲಿ ರಾಷ್ಟ್ರದ ಪರಿಷತ್ ಧ್ವಜ ಹಾಗೂ ನಾಡ ಧ್ವಜಗಳ ಧ್ವಜಾರೋಹಣ ನೆರವೇರಲಿದೆ. 9 ಗಂಟೆಗೆ ಪಟ್ಟಣದ ಕಲ್ಲೇಶ್ವರ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಶ್ರೀ ಭುವನೇಶ್ವರಿ ದೇವಿ, ಸರ್ವಾಧ್ಯಕ್ಷರಾದ ಕಾದರವಳ್ಳಿ ಸೀಮಿಮಠದ ಶ್ರೀ ಡಾ| ಪಾಲಾಕ್ಷ ಶಿವಯೋಗಿಗಳ ಭವ್ಯ ಮೆರವಣಿಗೆ ಜರುಗಲಿದೆ. ಮೆರವಣಿಗೆಗೆ ಪ.ಪಂ ಅಧ್ಯಕ್ಷ ಪ್ರಕಾಶ ಕೊಡ್ಲಿ ಚಾಲನೆ ನೀಡಲಿದ್ದಾರೆ.
11.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಕಾದರವಳ್ಳಿ ಸೀಮಿಮಠದ ಶ್ರೀ ಡಾ। ಪಾಲಾಕ್ಷ ಶಿವಯೋಗಿಗಳು ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಲಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಲಿದ್ದು ನಿಕಟಪೂರ್ವ ಸರ್ವಾಧ್ಯಕ್ಷರಾದ ಎಂ.ಎಂ. ಸಂಗಣ್ಣವರ ಧ್ವಜ ಹಸ್ತಾಂತರೆ ಮಾಡಲಿದ್ದಾರೆ. ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಆಶಯ ನುಡಿ ಆಡುವರು. ಈ ವೇಳೆ ಸ್ಮರಣ ಸಂಚಿಕೆ ಹಾಗೂ ಹೊಸ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಮಧ್ಯಾಹ್ನ 1 ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ. ನಿವೃತ್ತ ಪ್ರಾಚಾರ್ಯ ಗಂಗಾಧರ ಕೋಟಗಿ ಅಧ್ಯಕ್ಷತೆ ವಹಿಸಲಿದ್ದು ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಆಶಯ ನುಡಿ ಆಡುವರು ಜಾನಪದ ವಿದ್ವಾಂಸ ಡಾ। ಸಿ.ಕೆ. ನಾವಲಗಿ ಕೃಷಿ ತಜ್ಞಡಾ। ಬಿ.ಎಂ. ನಾಗಭೂಷಣ ಉಪನ್ಯಾಸ ನೀಡಲಿದ್ದಾರೆ. ಕಸಾಪ ಬೆಳಗಾವಿ ಜಿಲ್ಲಾ ಪ್ರತಿನಿಧಿ ಡಾ| ಜಗದೀಶ ಹಾರುಗೊಪ್ಪ ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ಕವಿ ಗೋಷ್ಠಿ ನಡೆಯಲಿದ್ದು ಸ್ಥಳೀಯ-ಜಿಲ್ಲಾಮಟ್ಟದ ಕವಿಗಳು ತಮ್ಮ ಕಾವ್ಯ ವಾಚನ ಮಾಡಲಿದ್ದಾರೆ. ಮುಖ್ಯಾಧ್ಯಾಪಕ ಷಣ್ಮುಖ ಗಣಾಚಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಸಮಾರೋಪ-ಸನ್ಮಾನ ಸಮಾರಂಭದಲ್ಲಿ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರಯ್ಯ ಶಾಸ್ತ್ರಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸರ್ವಾಧ್ಯಕ್ಷ ಶ್ರೀ ಡಾ| ಪಾಲಾಕ್ಷ ಶಿವಯೋಗಿಗಳು ಅಧ್ಯಕ್ಷಿಯ ನುಡಿ ಆಡಲಿದ್ದಾರೆ.
ವರದಿಗಾರರು : ಹನಮಂತ ಬಿರಾದಾರಪಾಟೀಲ
ವರದಿಗಾರರು ಬೇಕಾಗಿದ್ದಾರೆ.
ಆಸಕ್ತಿ ಹೊಂದಿರುವ ಪ್ರಾಮಾಣಿಕ ವರದಿಗಾರರು ನಮ್ಮನ್ನು ಸಂಪರ್ಕಿಸಿ
kolinewstv.com@gmail.com
www.kolinewstv.com
ಮೋ.ನಂಬರ್ –9035262956
(ಸುದ್ದಿ ಮತ್ತು ಜಾಹಿರಾತುಗಳಿಗೆ ನಮ್ಮನ್ನು ಸಂಪರ್ಕಿಸಿ.)
