Friday, February 20, 2026
Homeಧಾರ್ಮಿಕಇಂಡಿ ತಾಲೂಕಿನ ಸುಕ್ಷೇತ್ರ ಬಂಥನಾಳದಲ್ಲಿದ್ವೀತಿಯ ಕನ್ನಡ ಜಾನಪದ ಸಮ್ಮೇಳನ ಸಮಾರಂಭ..ಇಂಡಿ

ಇಂಡಿ ತಾಲೂಕಿನ ಸುಕ್ಷೇತ್ರ ಬಂಥನಾಳದಲ್ಲಿದ್ವೀತಿಯ ಕನ್ನಡ ಜಾನಪದ ಸಮ್ಮೇಳನ ಸಮಾರಂಭ..ಇಂಡಿ

ಇಂಡಿ :: ತಾಲೂಕಿನ ಬಂತನಾಳ ವೃಷಭಲಿಂಗೇಶ್ವರ ಮಠದಲ್ಲಿ ದ್ವೀತಿಯ ಕನ್ನಡ ಜಾನಪದ ಸಮ್ಮೇಳನ ಅದ್ದೂರಿಯಾಗಿ ಜರುಗಿತು
ರಾಜ್ಯಾ ಜನಪದ ಕಾರ್ಯದರ್ಶಿಗಳಾದ ಪ್ರೋ ಕೆ.ಎಸ್ ಕೌಜಲಗಿ ಸಮ್ಮೇಳನದ ಮೆರವಣಿ ಉದ್ಘಾಟಿಸಿದರು ಸರ್ವಾಧ್ಯಕ್ಷರಾದ ಚಿದಾನಂದ ಗೌಡಗಾವಿ ಹಾಗೂ ರಾಜ್ಯಾಧ್ಯಕ್ಷ ಡಾ| ಎಸ್ ಬಾಲಾಜಿ ಅವರ ಎತ್ತುಗಳ ಬಂಡಿಯ ಮೇಲೆ ಮೆರವಣಿಗೆಯನ್ನು ಅರ್ಜುಣಗಿ ಆಲಮೇಲ ಹಾಗೂ ಮಾಶ್ಯಾಳ ಕೌಂಸಾಳೆ ಮತ್ತು ತಮಟೆ ವಾದ್ಯ ಸಂಗೋಗಿ ಡೊಳ್ಳು ವಾದ್ಯ ಸಾಗರ ಮಾನೆಸಂಗಮೇಶ ಹೂಗಾರ ಅವರ ಕರಡಿ ಮಜಲು ಭಜನಾಮಂಡಳಿ ಸಿದ್ದಮ್ಮ ಗೌಡತಿ ಮನಗೊಳಿ ಅವರ ಜೋಗತಿ ನೃತ್ಯ ಮಹಾಲಕ್ಮೀ ವಾ ಲಗಮೇಳ ಹೀಗೆ ಅನೇಕ ಕಲಾ ತಂಡಗಳು ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಠದವರೆಗೆ ಅದ್ದೂರಿ ಮೆರವಣಿಗೆ ನಡೆಯುವ ಮೂಲಕ ಮುಂಜಾನೆ 9 ಬೆಳಿಗ್ಗೆ ರಾಷ್ಟ್ರದ್ವಜ ಅಶೋಕ ಮನಗೂಳಿ ನೆರವೇರಿಸಿದರು ಚಾನ ಕೊಟಗಿ ಗೌಡರು ನಾಡ ದ್ವಜ ಮತ್ತು ಪರಿಷತ್ ದ್ವಜ ರಾಜ್ಯಾಧ್ಯಕ್ಷ ಎಸ್ ಬಾಲಾಜಿ ನೆರವೇರಿಸಿದರೂ ನಂತರ ಸಮ್ಮಳನದ ಉದ್ಘಾಟನೆಯನ್ನು ಡಾ|| ಎಸ್ ಬಾಲಾಜಿ ನಡೆಸಿದರು.

ಸಾನಿಧ್ಯ ವೃಷಭಲಿಂಗ ಶಿವಯೋಗಿಗಳು ಮತ್ತು ಅಭಿನವ ಮುರುಗೇಂದ್ರ ಶಿವಾಚಾರ್ಯರು ಶಿರಶ್ಯಾಡ ಪೂಜ್ಯರು ಮಹಿಸಿದ್ದರೂ ಅಧ್ಯಕ್ಷತೆಯನ್ನು ಪ್ರೊ ಕೆ. ಎಸ್ ಕೌಜಲಗಿ ವಹಿಸಿದ್ದರೂ ಮುಖ್ಯ ಅತಿಥಿಗಳಾಗಿ ಶೈಲಜಾತೆಲ್ಲೂರ ಬಿ ಸಿ ಗೌಡರ ಜೆ. ಎಸ್ ಬೆಣ್ಣಿ ಧಾನಮ್ಮ ಹಿರೇ ಪಟ್ಟ ಜ್ಯೋತಿ ಬೆಳಗಿಸಿದರೂ ಜಾನ ಪದ ಅಳಿದರೆ ಮಾನವ ಜನಾಂಗ ಉಳಿಯದು ಆದ್ದರಿಂದ ಪಠ್ಯ ಪುಸ್ತಕ ರಚನಾ ಸಭೆಯಲ್ಲಿ ಜನಪದ ಹಾಡುಕಥೆಗಳು ಅಳವಡಿಸಿಕೊಳ್ಳಬೇಕು ಎಂದು ರಾಜ್ಯಾದ್ಯಕ್ಷ ರಾದ ಎಸ್ ಬಾಲಾಜಿ ಮಾತನಾಡಿದರು ಪ್ರೊ ಕೆ. ಎಸ್ ಕೌಜಲಗಿ ಅವರು ಜನಪದ ಸಾಹಿತ್ಯ ಹುಟ್ಟಿನಿಂದ ಸಾಯುವವರೆಗೂ ಹಾಸುಹೊಕ್ಕಾಗಿದೆ ಜನಪದ ಸೌಂದರ್ಯ ಜನಪದರ ಜೀವನ ಕೃಷಿ ಮದುವೆ ಶೋಭಾನೆ ಜನನ ತೊಟ್ಟಿಲು ತೂಗುವ ಕೈ ಜಗತ್ತನ್ನೇ ಗೆಲ್ಲಬಹುದು ಎಂದು ಹೇಳಿದರು ಸಾನಿಧ್ಯ ವಹಿಸಿದ ಅಭಿನವ ಮರುಗೇಂದ್ರ ಶಿವಾಚಾರ್ಯರು ಜನಪದರ ಜೀವನ ಸುಖ ದುಃಖಗಳ ಮಿಶ್ರಣ ಜಾನಪದ ಉಳಿಸುವ ನಿಟ್ಟಿನಲ್ಲಿ ಪರಿಷತ್ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಲ್ಲರೂ ಸಹಕರಿಸಿ ಬೇಕು ಎಂದುಹೇಳಿದರೂ ಜಾನಪದ ಗೋಷ್ಠಿಯಲ್ಲಿ ಅದ್ಯಕ್ಷತೆ ಡಾ|| ರಮೇಶ ಕತ್ತಿ ವಹಿಸಿದ್ದರೂ ಪ್ರೊ ಎಸ್ ಎಮ್.ಉಪ್ಪಾರ ಜಾನಪದ ಮಹಿಳೆಯ ಜೀವನ ಕುರಿತು ಮಾತನಾಡಿದರು ಎರಡನೆ ಮಹಿಳಾ ಗೋಷ್ಠಿ ಅಧ್ಯಕ್ಷತೆ ಶೈಲಜಾತೆಲ್ಲೂರ ವಹಿಸಿದ್ದರೂ ಮುಕ್ತಾಯಕ್ಕೆ ಕತ್ತೆ ಜನಪದದಲ್ಲಿ ಹಬ್ಬಗಳು ಕುರಿತು ಮಾತನಾಡಿದರೂ ಹೇಮಾ ಹಿರೇವರು ಜಾನಪದದಲ್ಲಿ ಮದುವೆ ಸಮಾರಂಭಗಳ ಕುರಿತು ಮಾತನಾಡಿದರು ಬಹಿರಂಗ ಅಧಿವೇಶನದಲ್ಲಿ ತಾಲೂಕು ಅಧ್ಯಕ್ಷ ಪಂಡಿತ ಅವಜಿ ಅವರ ಅಧ್ಯಕ್ಷತೆ ಯಲ್ಲಿ ಪ್ರಧಾನ ಕಾರ್ಯದರ್ಶಿ ಜಟ್ಟೆಪ್ಪಾ ಮಾದರ 10 ನಿರ್ಣಯ ಕೈಗೊಂಡರು ಸರ್ಧಾರ್ ಮುಲ್ಲಾ ಸಿದ್ಧಾರೂಢಕೊಳ್ಳರ ಸುಭಾಶ್ಚಂದ್ರ ನಾವಿ ಸಾಗರ ಮಾನೆ ಇದ್ದರೂ ಸುಮಾರು 54 ತಲಾ ತಂಡಗಳು ತಮ್ಮ ಕಲಾ ಪ್ರದರ್ಶ ಮಾಡಿದರು ಸರಸಂ ಬಿ ಶಿಕ್ಷಕರೂ ನಿರೂಪಿಸಿದರೂ ಪಂಡಿತ ಅವಜಿ ಸ್ವಾಗತಿಸಿದರು. ಜಟ್ಟೆಪ್ಪಾ ಮಾದರ ವಂಧಿಸಿದರೂ

ಹೆಚ್ಚಿನ ಸುದ್ದಿ