Monday, January 6, 2025
HomeUncategorizedಆರ್‌.ಟಿ.ಜೆ ಚಾಲೆಂಜರ್ಸ್ ವಿನ್ನರ್ಸ್ ಟ್ರೋಫಿ : ಪ್ರತೀಕ್ ಲೆವನ್ ಸಿಂಧನೂರ ತಂಡಕ್ಕೆ

ಆರ್‌.ಟಿ.ಜೆ ಚಾಲೆಂಜರ್ಸ್ ವಿನ್ನರ್ಸ್ ಟ್ರೋಫಿ : ಪ್ರತೀಕ್ ಲೆವನ್ ಸಿಂಧನೂರ ತಂಡಕ್ಕೆ

ಹುಣಸಗಿ : ನಾರಾಯಣಪುರಿನಲ್ಲಿ ನಡೆದ ಎ.ಎನ್.ಸಿ.ಸಿ ಮೈದಾನದಲ್ಲಿ ಶುಕ್ರವಾರ ಸ್ಥಳೀಯ ರಾಜುಗೌಡ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಚಿವ ರಾಜುಗೌಡ ಹಾಗೂ ಅವರ ಸಹೋದರ ಬಬ್ಲುಗೌಡ ಅವರ ಜನ್ಮ ದಿನ ನಿಮಿತ್ತ ನಡೆದ ಟೂರ್ನಿಯ ಪ್ರಶಸ್ತಿ ಪ್ರಧಾನ ಕಾರ್ಯ ಕ್ರಮದಲ್ಲಿ ಮಾಜಿ ಸಚಿವ ರಾಜುಗೌಡ ಹಾಗೂ ಆಯೋಜಕರು ಆರ್‌ಟಿಜೆ ಚಾಲೆಂಜರ್ಸ್ ವಿನ್ನರ್ಸ್ ಟ್ರೋಫಿ ಹಾಗೆ 2.80.000 ನಗದನ್ನು ಹಣ ಪ್ರತೀಕ್ ಲೆವನ್ ಸಿಂಧನೂರ ತಂಡದ ಪ್ರಾಂಚೈಸಿ ರಾಮನಗೌಡ ಪ್ರಥಮ ಬಹುಮಾನ ಕೊಡಿಗೆ ಎಸ್.ಪಿ. ದಯಾನಂದ ಮಾಲೀಕರು ಡಿ.ಎಸ್. ಮ್ಯಾಕ್ಸ್ ಬೆಂಗರೂರು ನೀಡಿದರು. ಹಾಗೂ

ದ್ವಿತೀಯ ಬಹುಮಾನವನ್ನು ಬಿ.ಎಸ್ ಹಳ್ಳಿಕೋಟಿ, 1.40.000 ನೀಡಿದ್ದರು . ಅದನ್ನು ಎಫ್.ಎಂ 11 ಹೊಸಪೇಟೆ ತಂಡದ ಪ್ರಾಂಚೈಸಿ ಕ್ಯಾಪ್ಟನ್‌ ಗೆ ರನ್ನರ್ ಟ್ರೋಫಿ, ಹಾಗೂ ನಗದನ್ನು ಹಣ ವಿತರಿಸುವ ಮೂಲಕ ಉಭಯ ತಂಡಗಳಿಗೆ ಹಾರೈಸಿದರು.

ಇದೇ ವೇಳೆ ಟೂರ್ನಿಯ 3 4ನೇ ಸ್ಥಾನ ಗಳಿಸಿದ ತಂಡಗಳ ಪ್ರಾಂಚೈಸಿ ಗಳಿಗೆ ಟ್ರೋಫಿ ಹಾಗುವ ನಗದು ಹಣ ನೀಡಲಾಯಿತು. ಪಂದ್ಯ ಶೇಷ್ಠ ಸರಣಿ ಶೇಷ್ಯ, ಉತ್ತಮ ಬೌಲರ್, ಬ್ಯಾಟ್ಸ್‌ಮನ್, ಬೆಸ್ಟ್ ಫಿಲ್ಟರ್, ಹ್ಯಾಟ್ರಿಕ್ ವಿಕೆಟ್ ಸೇರಿ ಉತ್ತಮ ತಂಡಕ್ಕೆ ಆಯೋಜಕರು ಪ್ರಶಸ್ತಿ, ನಗದು ಬಹುಮಾನ ವಿತರಿಸಿದರು.

ಪಂದ್ಯದ ಸಾರಾಂಶ : ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಸಿಂಧನೂರು ತಂಡ ನಿಗದಿತ 16 ಓವರ್ನ ನಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಪ್ರೇರಿಸಿತು. ನಂತರ ಬ್ಯಾಟಿಂಗ್ ಇಳಿದ ಹೊಸಪೇಟ್ ತಂಡ 16 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 117 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡು ರನ್ನರ್ ಟ್ರೋಫಿಗೆ ತೃಪ್ತಿಪಟ್ಟಿತು. ಈ ಮೂಲಕ ” ಸತತ ಎರಡನೇ ಬಾರಿಯೂ ಸಿಂಧನೂರ ತಂಡ ಆರ್‌ಟಿಜೆ ಚಾಲೆಂ ಜರ್ಸ್ ವಿನ್ನರ್ಸ್ ಟ್ರೋಫಿ ಗೆದ್ದು ಕೊಂಡಂತಾಗಿದೆ.

ಗ್ರಾಮೀಣ ಭಾಗದಲ್ಲಿ ನಾರಾಯಣಪುರದ ಅಭಿಮಾನಿಗಳು ಯಶಸ್ವಿಯಾಗಿ ಆರ್‌ಟಿಜೆ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿರುವುದು ಶ್ಲಾಘನೀಯ. ಈ ಟೂರ್ನಿಯಲ್ಲಿ ದೇಶದ ವಿವಿಧ ರಾಜ್ಯಗಳ ರಾಷ್ಟ್ರಮಟ್ಟದಲ್ಲಿ ಮಿಂಚುವ ಸ್ಟಾರ್ ಕ್ರಿಕೇಟ್ ಆಟಗಾರರು ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ ಎಂದು ಮಾಜಿ ಸಚಿವರು ನರಸಿಂಹನಾಯಕ (ರಾಜುಗೌಡ) ಮಾತನಾದಿದರು ಜೊತ್ತೆಗೆ ಶ್ರೀ ನರಸಿಂಹ ನಾಯಕ ರಾಜುಗೌಡ ಅಭಿಮಾನಿಗಳ ಸಂಘದಿಂದ 2025ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮುಂಖಂಡರಾದ ರಾಜಾ ಹನುಮಂತನಾಯಕ, ಬಬ್ಲು ಗೌಡ, ರಾಜಾ ಕುಶಾಲನಾಯಕ ಜಹಾಗೀರದಾರ, ಸಿದ್ದನಗೌಡ ಕರಿಭಾವಿ, ಡಾ.ಬಿ.ಎಂ. ಅಳ್ಳಿಕೋಟಿ, ಬಿ. ಎನ್.ಪೊಲೀಸ್ ಪಾಟೀಲ್, ಮಲ್ಲು ನವಲಗುಡ್ಡ, ಸಂಗನಬಸ್ಸು ಚಟ್ಟೇರ್, ಆಂಜನೇಯ ದೊರೆ, ​ರಮೇಶ್ ಕೊಳೂರು, ಶಿವು ಬಿರಾದಾರ, ರಮೇಶ ಗೌಡರ, ಯಂಕಪ್ಪ ರೋಡಲಬಂಡಾ, ಮುತ್ತು ಕಬಡರ, ಗೌಡಪ್ಪ, ಹಾದಿಮನಿ, ನರಸಪ್ಪ, ಲಕ್ಷ್ಮಣ ನಾಯಕ, ಗೌಡಪ್ಪ ಗೌಡ, ಗೌಡಪ್ಪ ಗೌಡ, ಗೌಡಪ್ಪ ಗೌಡ, ಕ್ರಿಕೆಟ್ ಆಟಗಾರರು, ಕ್ರೀಡಾಭಿಮಾನಿಗಳು, ರಾಜುಗೌಡ ಅಭಿಮಾನಿಗಳು.

ಇದೇ ಸಂದರ್ಭದಲ್ಲಿ ಕಲಾವಿದ ಕರಿಬಸವ ಕನ್ನಡದ ಹಿಟ್ ಚಲನಚಿತ್ರ ಗೀತೆಗಳನ್ನು ಹಾಡಿ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿದರು.

ಜಿಲ್ಲಾ ವರದಿಗಾರರು : ಶಿವು ರಾಠೋಡ ಯಾದಗಿರಿ

ಹೆಚ್ಚಿನ ಸುದ್ದಿ