ಚಿತ್ರದುರ್ಗ: ಹಿಂದೂತ್ವದ ಫೈರ್ ಬ್ರ್ಯಾಂಡ್ ಅಂತಾನೇ ಕರೆಯಲ್ಪಡುವ ಬಿಜೆಪಿಯ ವಿವಾದಿತ ನಾಯಕ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ್
ರವಿಕುಮಾರ್ ಕಟುವಾಗಿ ಟೀಕಿಸಿದ್ದಾರೆ. ಚಿತ್ರದುರ್ಗದ ಕ್ರೀಡಾಭವನದಲ್ಲಿ ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ವೇದಿಕೆಯಿಂದ ಆಯೋಜಿಸಲಾಗಿದ್ದ ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಅನಂತ ಕುಮಾರ್ ಹೆಗಡೆ ಒಬ್ಬ ಹುಚ್ಚ” ಅಂತ ವಾಗ್ದಾಳಿ ನಡೆಸಿದ್ದಾರೆ.
ಅನಂತ ಕುಮಾರ್ ಹೆಗಡೆ ಒಬ್ಬ ಹುಚ್ಚ
ಸಂವಿಧಾನ ವಿರೋಧಿಸಿದ ಅನಂತ್ ಕುಮಾರ್ ಹೆಗಡೆ ಅವನೊಬ್ಬ ಹುಚ್ಚ ಅಂತ ಬಿಜೆಪಿ ಎಂಎಲ್ಸಿ ರವಿಕುಮಾರ್ ಟೀಕಿಸಿದ್ದಾರೆ. ಸಂವಿಧಾನ ಬದಲಿಸಲು ನಾವು ಬಂದಿದ್ದೇವೆ ಎಂದಿದ್ದ ಅವನು ಹುಚ್ಚ ಅಂತ ಅವರು ಗುಡುಗಿದ್ದಾರೆ.
ಸಂವಿಧಾನ ಬದಲಿಸುತ್ತೇವೆ ಅಂತ ಪ್ರಧಾನಿ ಹೇಳಿದ್ದಾರಾ?
ಸಂವಿಧಾನ ಬದಲಿಸುತ್ತೇವೆ ಅಂತ ದೇಶದ ಪ್ರಧಾನಿ ನರೇಂದ್ರ ಮೋದಿ, ಆರ ಎಸ ಎಸ ನ ಸರಸಂಘ ಚಾಲಕರು ಹೇಳಿದ್ದಾರಾ? ಅಂತ ರವಿಕುಮಾರ್ ಪ್ರಶ್ನಿಸಿದ್ರು. ಅವ್ರು ಮಾತಿನ ಭರದಲ್ಲಿ ಹೇಳಿದ್ದನ್ನು ನಾವು ಮೋಲ್ಡ್ ಮಾಡಿಕೊಳ್ತಿಲ್ಲ. ಸಂವಿಧಾನವನ್ನ ನಾವು ಹೆಚ್ಚು ಗೌರವಿಸುತ್ತೇವೆ. ದೇಶದ ಏಕೈಕ ಗ್ರಂಥ ಸಂವಿಧಾನ. ದೇಶ ಮೊದಲು ಎಂಬ ಸಿದ್ಧಾಂತ ಹೊಂದಿದ ಪಕ್ಷ ಬಿಜೆಪಿ ಅಂತ ರವಿಕುಮಾರ್ ಹೇಳಿದ್ರು.
ಮನುಸ್ಮೃತಿ ಕಾಂಗ್ರೆಸ್ಗೆ ಇರುವ ಗ್ರಂಥ
ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರ ವಿರುದ್ಧ ಎಂಎಲ್ ಸಿ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ರು. ಮನುಸ್ಮೃತಿ ಇದು ಕಾಂಗ್ರೆಸ್ಗೆ ಇರುವ ಗ್ರಂಥ. ಕಾಂಗ್ರೆಸ್ ಯಾವ ಶೃತಿ, ಸಂಗೀತ, ಹಿನ್ನೆಲೆ ಗಾಯನದಲ್ಲಿ ದೇಶ ನಡೆಸಿದೆ ಗೊತ್ತಿಲ್ವಾ? ಕಾಂಗ್ರೆಸ್ ನೆಹರೂ ಫ್ಯಾಮಿಲಿ ಹೇಳಿದಂತೆ ನಡೆಯುತ್ತೆ. ಸಂವಿಧಾನ ಪ್ರಕಾರ ನಡೆಯುತ್ತಾ ಎಂದು ರವಿಕುಮಾರ್ ಲೇವಡಿ ಮಾಡಿದ್ರು.
ಸಿದ್ದರಾಮಯ್ಯ ತಂದೆ ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ?
ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ನೀವೇನು ಸ್ವಾತಂತ್ರ್ಯ ಹೋರಾಟ ಮಾಡಿದ್ರಾ ಅಂತಾ ಕೇಳ್ತಾರೆ. ಆದರೆ ಸಿದ್ದರಾಮಯ್ಯ, ಅಥವಾ ಅವರ ತಂದೆ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ರಾ? ನಾವು ಆ ಸಮಯದಲ್ಲಿ ಇದ್ದಿದ್ರೆ ಭಾಗವಹಿಸುತ್ತಿದ್ವೋ ಏನೋ ಅಂತ ರವಿಕುಮಾರ್ ಹೇಳಿದ್ರು.
ಸಂವಿಧಾನ ಬದಿಗಿಟ್ಟು, ತುರ್ತು ಪರಿಸ್ಥಿತಿ ಹೇರಿದ್ರು
ಇಂದಿರಾ ಗಾಂಧಿ ದೇಶದಲ್ಲಿ ಸ್ವಾತಂತ್ರ್ಯವನ್ನು ತೆಗೆದೇ ಹಾಕಿದ್ರು. ದೇಶದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ರು. ಪ್ರಧಾನಮಂತ್ರಿಯ ಕುರ್ಚಿ ಬಿಡಬಾರದು ಅಂತ ತಾವು ತುರ್ತು ಪರಿಸ್ಥಿತಿ ಹೇರಿದ್ರು. ಈ ವೇಳೆ ಸಂವಿಧಾನ ಬದಿಗಿಟ್ರು, ದೇಶದಲ್ಲಿ ಸ್ವಾತಂತ್ರ್ಯ ಹರಣವಾಗಿತ್ತು ಅಂತ ರವಿಕುಮಾರ್ ಹೇಳಿದ್ರು.
ತುರ್ತು ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಯಾಕೆ ಹೋರಾಡಿಲ್ಲ?
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಯಾಕೆ ಸಿದ್ದರಾಮಯ್ಯ ಹೋರಾಟ ಮಾಡಲಿಲ್ಲ? ತುರ್ತು ಪರಿಸ್ಥಿತಿ ಹೇರಿದಾಗ ಸಿದ್ದರಾಮಯ್ಯಗೆ 20-25 ವರ್ಷ ಇರಬೇಕು. ಇದರ ವಿರುದ್ಧ ಯಾಕೆ ಸಿದ್ದರಾಮಯ್ಯ ಹೋರಾಟ ಮಾಡಲಿಲ್ಲ? ಅಂತ ರವಿಕುಮಾರ್ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ರು.
ಸಿದ್ದರಾಮಯ್ಯನವಿಗೆ ನೆಹರೂ ದೊಡ್ಡವರು
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇವೇಗೌಡ್ರು, ಯಡಿಯೂರಪ್ಪ, ಜಯ ಪ್ರಕಾಶ್ ನಾರಾಯಣ್ ಮೊದಲಾದವರು ಹೋರಾಟ ಮಾಡಿದ್ರು ಅಂತ ರವಿಕುಮಾರ್ ಸ್ಮರಿಸಿಕೊಂಡ್ರು. ಸಿದ್ದರಾಮಯ್ಯನವರಿಗೆ ಸಂವಿಧಾನಕ್ಕಿಂತ ದೊಡ್ಡವರು ನೆಹರೂ. ಹಾಗಾಗಿ ಅಂಜು ತುರ್ತು ಪರಿಸ್ಥಿತಿ ವಿರುದ್ಧ ಅವರು ಹೋರಾಟ ಮಾಡಲಿಲ್ಲ ಅಂತ ಆರೋಪಿಸಿದ್ರು.
ಸಂವಿಧಾನಕ್ಕಿಂತ ಇಂದಿರಾ ದೊಡ್ಡವರಾ?
ನೆಹರು, ಇಂದಿರಾಗಾಂಧಿ ಸಂವಿಧಾನಕ್ಕಿಂತ ದೊಡ್ಡವರಾ? ಅಂತ ಪ್ರಶ್ನಿಸಿದ ಅವರು, ಅಂದು ಪ್ರಧಾನಿ ಕುರ್ಚಿ ಬಿಟ್ಟುಕೊಡಬೇಕಾಗಿತ್ತು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇನ್ನು ಹಾಗೆ ನೋಡಿದ್ರೆ ಆರ್ ಎಸ ಎಸ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದೆ ಅಂತ ರವಿಕುಮಾರ್ ಹೇಳಿದ್ರು.