Monday, June 8, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಅಡಿಕೆ ತೋಟದ ಬೆಳೆಗಾರರಿಗೆ ಮುಂಗಾರು ಪೂರ್ವ ಸಿದ್ಧತೆಗಳು: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮುಂಡಗೋಡ...

ಅಡಿಕೆ ತೋಟದ ಬೆಳೆಗಾರರಿಗೆ ಮುಂಗಾರು ಪೂರ್ವ ಸಿದ್ಧತೆಗಳು: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮುಂಡಗೋಡ ವತಿಯಿಂದ ಪೂರ್ವ ಸಿದ್ಧತೆ ಕ್ರಮಗಳ ಮತ್ತು ತಿಳುವಳಿಕೆ,ಅರಿವು…

1. ತೋಟದ ಸ್ವಚ್ಛತೆ

ಅಡಿಕೆ ತೋಟದ ಮುಂಗಾರು ಪೂರ್ವ ಸಿದ್ಧತೆಗಳು

ಮಳೆಗಾಲದಲ್ಲಿ ರೋಗ, ನೀರು ನಿಲ್ಲುವುದು ತಪ್ಪಿಸಲು ಮೇ-ಜೂನ್ ತಿಂಗಳಲ್ಲಿ ಈ ಕೆಲಸಗಳನ್ನು ಮಾಡಿ ಮುಗಿಸಬೇಕೆಂದು ರೈತರಲ್ಲಿ ವಿನಂತಿಸಲಾಗಿದೆ.

  • ಒಣಗಿದ, ರೋಗ ತಗುಲಿದ ಗರಿಗಳು, ಕಾಯಿಗಳನ್ನು ಕಿತ್ತು ಸುಟ್ಟುಹಾಕಿ.
  • ಬುಡದ ಸುತ್ತ 2-3 ಅಡಿ ವರೆಗೆ ಕಳೆ ತೆಗೆದು ಮಣ್ಣು ಸಡಿಲಗೊಳಿಸಿ.
  • ಕಳೆದ ವರ್ಷದ ಎಲ್ಲ ಸೊಪ್ಪು-ಕಸವನ್ನು ಆಚೆ ಹಾಕಿ. ಇದು ಕೊಳೆ ರೋಗಕ್ಕೆ ಆಹಾರ ಆಗುತ್ತದೆ.

2. ಬೇಸಾಯ ಮತ್ತು ಗೊಬ್ಬರ

  • ಬುಡಕ್ಕೆ ಮಣ್ಣು ಏರಿಸಿ ದಿಂಡು ಮಾಡಿ. ಇದರಿಂದ ಬೇರಿಗೆ ಗಾಳಿ ಸಿಗುತ್ತದೆ ಮತ್ತು ನೀರು ನಿಲ್ಲುವುದಿಲ್ಲ.
  • ಪ್ರತಿ ಮರಕ್ಕೆ 10-15 ಕೆಜಿ ಕೊಟ್ಟಿಗೆ ಗೊಬ್ಬರ + 250 ಗ್ರಾಂ ಬೇವು ಹಿಂಡಿ + 1 ಕೆಜಿ ಸುಣ್ಣ ಹಾಕಿ ಮಣ್ಣು ಮುಚ್ಚಿ.
  • ರಾಸಾಯನಿಕ ಗೊಬ್ಬರ ಕೊಡುವುದಾದರೆ: 100:40:140 ಗ್ರಾಂ NPK/ಮರಕ್ಕೆ ಮೇ ತಿಂಗಳಲ್ಲಿ ಹಾಕಿ.

3. ರೋಗ-ಕೀಟ ನಿಯಂತ್ರಣ

  • ಕೊಳೆ ರೋಗ/ಮಹಾಳಿ: 1% ಬೋರ್ಡೋ ದ್ರಾವಣ ಅಥವಾ Metalaxyl MZ 2 ಗ್ರಾಂ/ಲೀಟರ್ ನೀರಿನಲ್ಲಿ ಕಲಸಿ ಸುಳಿಗೆ ಮತ್ತು ಕಾಯಿಗಳಿಗೆ ಸಿಂಪಡಿಸಿ. ಮೊದಲ ಸಿಂಪರಣೆ ಮೇ ಕೊನೆಗೆ, ಎರಡನೆಯದು ಜೂನ್-ಜುಲೈನಲ್ಲಿ.
  • ಬುಡ ಕೊಳೆತ: ಬುಡಕ್ಕೆ 1% ಬೋರ್ಡೋ ಲೇಪನ ಮಾಡಿ.
  • ಹಳದಿ ಎಲೆ ರೋಗ ಇದ್ದರೆ ಬೇರಿನಿಂದ 1 ಮೀಟರ್ ದೂರ 30 ಸೆಂ.ಮೀ ಆಳದ ಕಾಲುವೆ ತೆಗೆದು Trichoderma 50 ಗ್ರಾಂ + 5 ಕೆಜಿ ಸಗಣಿ ಮಿಶ್ರಣ ಹಾಕಿ.

4. ನೀರು ಬಸಿ ವ್ಯವಸ್ಥೆ

  • ತೋಟದಲ್ಲಿ ನೀರು ನಿಲ್ಲದಂತೆ 2-3 ಅಡಿ ಆಳದ ಬಸಿ ಕಾಲುವೆಗಳನ್ನು ತೆಗೆಯಿರಿ.
  • ಮುಖ್ಯ ಕಾಲುವೆಗೆ ಎಲ್ಲ ಉಪ-ಕಾಲುವೆಗಳನ್ನು ಜೋಡಿಸಿ ನೀರು ಹೊರಗೆ ಹೋಗುವಂತೆ ಮಾಡಿ.

ಕೊನೆಯ 2 ವಾರದಲ್ಲಿ ಮಾಡಬೇಕಾದ್ದು: ಹವಾಮಾನ ವರದಿ ನೋಡಿಕೊಂಡು, ಮೊದಲ ಮಳೆಗೆ ಮುನ್ನವೇ ಎಲ್ಲ ಸಿಂಪರಣೆ ಮುಗಿಸಿರಿ…

ಶ್ರೀ ಕೃಷ್ಣಾ ಟಿ ಕುಳ್ಳೂರ

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮುಂಡಗೋಡ

ಹೆಚ್ಚಿನ ಸುದ್ದಿ