
ಅಕ್ಷಯ ತೃತೀಯ ಹಾಗೂ ಜಗದ್ಗುರು ಶ್ರೀ ಬಸವೇಶ್ವರ ರವರ ಜನ್ಮದಿನವನ್ನು ಕುನ್ನೂರ ಗ್ರಾಮ (ಶಿಗ್ಗಾಂವ ತಾಲೂಕು), ಹಾವೇರಿ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿದ್ದು, ಬಸವ ತತ್ತ್ವವನ್ನು ಸಾರುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಜಾತಿ-ಬೇದವಿಲ್ಲದೆ ಎಲ್ಲಾ ಸಮುದಾಯದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಮೆರವಣಿಗೆಯಲ್ಲಿ ಎತ್ತುಗಳ ವಿಶೇಷ ಮೆರವಣಿಗೆ ಗಮನ ಸೆಳೆದಿದ್ದು, ಬಸವ ತತ್ವದ ಘೋಷಣೆಗಳೊಂದಿಗೆ ಡಿಜೆ ಮ್ಯೂಸಿಕ್ಗೆ ಯುವಜನರು ನೃತ್ಯ ಮಾಡುತ್ತಾ ಸಂಭ್ರಮದಿಂದ ಸಾಗಿದರು.
ಕುನ್ನೂರ ಗ್ರಾಮದಲ್ಲಿ ನಡೆದ ಈ ಆಚರಣೆ ಜನರಲ್ಲಿ ಏಕತೆ, ಸಹೋದರತ್ವ ಮತ್ತು ಬಸವೇಶ್ವರರ ಸಂದೇಶವನ್ನು ಮತ್ತಷ್ಟು ಗಟ್ಟಿಯಾಗಿ ಪ್ರತಿಬಿಂಬಿಸಿತು.
