Wednesday, June 3, 2026
Homeಜಿಲ್ಲಾ ಸುದ್ದಿಗಳುಹೊಸತಾರೆಗಳು ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಹೊಸತಾರೆಗಳು ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಶಿಗ್ಗಾವ: ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ IQAC ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಸಂಘ ಏರ್ಪಡಿಸಿದ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಲಿಂಗಯ್ಯ ಎ ಹಿರೇಮಠ ಅಧ್ಯಕ್ಷತೆ ವಹಿಸಿ ಹೊಸತಾರೆಗಳು – 2026 ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು.

ಯುವ ಮನಸುಗಳು ಸಮಾಜವನ್ನು ಸನ್ಮಾರ್ಗದ ಕಡೆಗೆ ತೆಗೆದುಕೊಂಡು ಹೋಗಲು ಇಂತಹ ಕವಿಗೋಷ್ಠಿಗಳು ಅತ್ಯಂತ ಹೆಚ್ಚು ಪ್ರಯೋಜನ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ,ಬಿ ವೈ, ತೊಂಡಿಹಾಳ್ ಕನ್ನಡ ಭಾಷೆಯ ಗಟ್ಟಿತನಕ್ಕೆ ಈ ತರದ ಕವಿಗೋಷ್ಠಿ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು.

ಇನ್ನೊರ್ವ ಅತಿಥಿಗಳಾಗಿ ಭಾಗವಹಿಸಿದ ಮನು ಗುರುಸ್ವಾಮಿ ಮಾತನಾಡಿ ಯುವ ಕವಿಗಳಿಗೆ ಈ ವೇದಿಕೆ ಮುಂದೆ ದೊಡ್ಡ ದೊಡ್ಡ ವೇದಿಕೆಗಳಿಗೆ ಹೋಗಲು ರಂಭಾಪುರಿ ಕಾಲೇಜು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ IQAC ಸಂಯೋಜನಾಧಿಕಾರಿ ಡಾ. ಎಚ್. ಕೆ. ವಿನಯ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ, ಆರ್, ಸಿ ದಾದುಗೌಡರ್. ಕವನಗಳ ಪುಸ್ತಕದ ಕುರಿತು ಅವಲೋಕನೆ ಮಾಡಿ ಮಾತನಾಡಿದ ಶ್ರೀ ರಂಭಾಪುರಿ ಪದವಿಪೂರ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಸಿದ್ದಲಿಂಗಸ್ವಾಮಿ ಕುಲಕರ್ಣಿ. ಭಾರತೀಯ ಸೇನೆ ಯೋಧ ಹನುಮಂತು, ಶಿವಯೋಗಿ. ಸಂಘಟನಾ ಕಾರ್ಯದರ್ಶಿ ಸುರೇಶ ಹರಿಜನ್. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕ್ಕೆತರ ಸಿಬ್ಬಂದಿಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅನೇಕ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ತಮ್ಮ ಕವನವನ್ನು ವಾಚಿಸಿದರು. ಭರತನಾಟ್ಯ ಕಲಾವಿದೆಯಿಂದ ಸಾಂಸ್ಕೃತಿಕ ಚಟುವಟಿಕೆಗಳು ಏರ್ಪಡಿಸಲಾಯಿತು. ಎಲ್ಲರಿಗೂ ಪ್ರಶಸ್ತಿ ಪತ್ರ ಮತ್ತು ಹೊಸ ತಾರೆಗಳು ಎಂಬ ಪುಸ್ತಕವನ್ನು ವಿತರಿಸಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ಡಾ, ಎಚ್ ಕೆ ವಿನಯ್ ನಿರ್ವಹಿಸಿದರು, ವಂದನಾರ್ಪಣೆ ಕುಮಾರಿ ಅಂಜಲಿ ಡವಗಿ ನಿರ್ವಹಿಸಿದರು, ನಿರೂಪಣೆಯನ್ನು ಉಪನ್ಯಾಸಕಿ ಚಾಂದ್ ಬಿಬಿ ನದಾಫ್ ನಿರ್ವಹಿಸಿದರು.

ವರದಿಗಾರ: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ