Saturday, September 19, 2026
Homeಜಿಲ್ಲಾ ಸುದ್ದಿಗಳುಹಿಂದೂಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದಿಂದ ಪತ್ರಿಕಾ ದಿನಾಚರಣೆ, ಸನ್ಮಾನ ಮತ್ತು...

ಹಿಂದೂಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದಿಂದ ಪತ್ರಿಕಾ ದಿನಾಚರಣೆ, ಸನ್ಮಾನ ಮತ್ತು ನೂತನ ಅಧ್ಯಕ್ಷರ ಅಧಿಕಾರ ಹಸ್ತಾಂತರ ಸಮಾರಂಭ

ಕೆ.ಆರ್.ಪೇಟೆ.ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘ (ರಿ) ಕೆ.ಆರ್.ಪೇಟೆ ತಾಲ್ಲೂಕು ಘಟಕ ವತಿಯಿಂದ ದಿನಾಂಕ: 19-09-2026ನೇ ಶನಿವಾರ ಬೆಳಿಗ್ಗೆ 10 ಗಂಟೆಗೆ ಕೆ.ಆರ್.ಪೇಟೆ ಪಟ್ಟಣದ ಹೊರಹೊಲಯದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಪತ್ರಿಕಾ ವಿತರಕರಿಗೆ ಸನ್ಮಾನ ಹಾಗೂ ನಿಯೋಜಿತ ಅಧ್ಯಕ್ಷ ಗಂಜೀಗೆರೆ ಮಹೇಶ್ ಅವರ ಅಧಿಕಾರ ಹಸ್ತಾಂತರ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದ ನಿಕಟ ಪೂರ್ವಧ್ಯಕ್ಷರಾದ ಕೆ.ಆರ್ ನೀಲಕಂಠ ತಿಳಿಸಿದರು.

ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿಗಳಾದ ಡಾ. ಮಲ್ಲೇಶ್ ಗುರೂಜಿ ವಹಿಸಿಲಿದ್ದು,ಉದ್ಘಾಟನೆಯನ್ನ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಕೆ. ಶಿವಕುಮಾರ್,ಪತ್ರಿಕಾ ವಿತರಕರಿಗೆ ಸನ್ಮಾನವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು,ಮಾಜಿ ಸಚಿವರು ಡಾ. ಕೆ.ಸಿ. ನಾರಾಯಣಗೌಡ,ಪತ್ರಿಕಾ ವಿತರಕರಿಗೆ ಬ್ಯಾಗ್ ವಿತರಣೆಯನ್ನು ಸಮಾಜ ಸೇವಕರು ಹಾಗೂ ಆರ್.ಟಿ. ಓ ಅಧಿಕಾರಿಗಳ ಸಂಘದ ರಾಜ್ಯಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್‌,ಪತ್ರಕರ್ತರಿಗೆ ಗುರುತಿನ ಕಾರ್ಡ್ ವಿತರಣೆಯನ್ನ ಮನ್ಮುಲ್ ನಿರ್ದೇಶಕ ಡಾಲು ರವಿ ಮಂಡ್ಯ,ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್‌,ರಾಜ್ಯ ಕೈಗಾರಿಕಾ ಸರಬರಾಜು ಸಹಕಾರ ಮಂಡಳಿ ಅಧ್ಯಕ್ಷ ಕೆ.ಎಸ್. ಸಂತೋಷ್‌ಕುಮಾರ್‌, ಪತ್ರಕರ್ತರ ಜವಾಬ್ದಾರಿಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ,ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಸಿದ್ಧರಾಜುರವರು ,ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶ್ರೀ ಟಿ.ಕೆ. ಹರೀಶ್‌, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಬಿ. ರಾಜೇಶ್‌ ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ನಟರಾಜ್‌,ಹಿ.ವ.ಮಾ.ಪ. ಸಂಘ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಎಸ್ ಮಣಿ ಬೆಂಗಳೂರು,ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಕೆ.ಆರ್. ನೀಲಕಂಠ,ಕೆ.ಹೆಚ್.ಆರ್. ಚಂದ್ರಶೇಖರ್‌,ಶ್ರೀ ಚೌಡೇಶ್ವರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಸಂಘದ ನಿಯೋಜಿತ ತಾಲ್ಲೂಕು ಅಧ್ಯಕ್ಷ ಮಹೇಶ್ ಗಂಜಿಗೆರೆ ಪಾಲ್ಗೊಳ್ಳಲಿದ್ದು ತೆರೆಮರೆಯಲ್ಲಿ ಸಾಧನೆಗೈದ ಸಾಧಕರಾದ ಬಿಜಿಎಸ್ ಹೇಮಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಜಿ.ಎನ್. ರಾಮಕೃಷ್ಣೇಗೌಡ, ಉದ್ಯಮಿ ರೇವಣ್ಣ, ಬಿ.ಪಿ. ಪ್ರಕಾಶ್‌,ಚಲನ ಚಿತ್ರ ಕಲಾವಿದ ಬಿ. ಅರವಿಂದ್‌ರಾವ್‌ ಅವರಿಗೆಹಗಲಿರಳು ಪತ್ರಿಕೆ ವಿತರಿಸುವ ವಿತರಿಕರಿಗೂ ವಿಶೇಷ ಸನ್ಮಾನಿಸುವ ಗೌರವಿಸಲಾಗುವುದು ಹಾಗಾಗಿ ಈ ಸುಂದರ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆ ಹಾಗೂ ಪತ್ರಿಕಾ ಪ್ರೇಮಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಕೆ.ಕಾಳೇಗೌಡ,ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಬಿ ಮಂಜುನಾಥ್, ತಾ ಅಧ್ಯಕ್ಷ ಹೆಚ್.ಬಿ ರಾಜೇಶ್,ನಿಯೋಜಿತ ತಾಲ್ಲೂಕು ಅಧ್ಯಕ್ಷ ಗಂಜೀಗೆರೆ ಮಹೇಶ್,ನೂತನ ತಾ ಉಪಾಧ್ಯಕ್ಷ ಹೊಸಹೊಳಲು ರಘು,ಪ್ರಧಾನ ಕಾರ್ಯದರ್ಶಿ ಕಾಮನಹಳ್ಳಿ ಮಂಜುನಾಥ್,ಸಂಘಟನೆ ಕಾರ್ಯದರ್ಶಿ ಸಾಯಿ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.

ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ

ಹೆಚ್ಚಿನ ಸುದ್ದಿ