ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ನಗರದ ಕುಂಬಾರಪೇಟ ಹೊರವಲಯದ ಹತ್ತಿರವಿರುವ ಪುರಾತನ ಕಾಲದ ಹೂಳು ತುಂಬಿ ತ್ಯಾಜ್ಯವಸ್ತುಗಳಿಂದ ತುಂಬಿಕೊಂಡ ಬಾವಿಯನ್ನು ಸುರಪುರ ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಅವರ ಪತಿ ಬೆಳ್ಳಂ ಬೆಳಿಗ್ಗೆ ವೀಕ್ಷಣೆ ಮಾಡಲು ಬಂದಂತ ಸಂದರ್ಭದಲ್ಲಿ ಕುಂಬಾರಪೇಟ ಪಟ್ಟಣದ ನಾಗರಿಕರು ಹಾಗೂ ಸಾರ್ವಜನಿಕರು ಹೂಳು ತುಂಬಿ ಗಬ್ಬೆದ್ದು ನಾರುತ್ತಿರುವುದರಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿರುವುದರಿಂದ ಕೂಡಲೇ ಜಲಾಲ್ ಬಾವಿಯಲ್ಲಿರು ಹೂಳು ಮತ್ತು ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿ ಕುಂಬಾರಪೇಟ ಪಟ್ಟಣದ ಸಾರ್ವಜನಿಕರಿಗೆ ಕುಡಿಯಲು ,ಬಳಕೆ ಮಾಡಲು ಅನುಕೂಲ ಮಾಡಿ ಬಾವಿಯ ಸುತ್ತಲು ಕಾಂಪೌಂಡ್ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ನಾಸೀರ್ ಸಾಬ್ ಕುಂಡಾಲಿ,ದಾವೂದ್ ಮೆಡಿಕಲ್ ಕುಂಬಾರಪೇಟ,ಮಲ್ಲಣ್ಣ ಹುಬ್ಬಳ್ಳಿ, ಹನುಮಂತ್ರಾಯ ಭಜಂತ್ರಿ,ವಿಜಯಕುಮಾರ್ ತಳವಾರ್, ಹಾಗೂ ಕುಂಬಾರಪೇಟ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
*ವರದಿ : ಮೌನೇಶ ಆರ್ ಭೋಯಿ*


