
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅದ್ಯೆಕ್ಷರಾದ ಜಿಲಾನಿ ಪಾಶ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿದೆ. ಪಕ್ಕದ ಜಿಲ್ಲೆಯ ಸುರುಪುರ, ಹುಣಸಗಿ, ಮಸ್ಕಿ, ತಾಲ್ಲೂಕುಗಳಿಂದ ನೂರಾರು ರೋಗಿಗಳು ದಿನಪ್ರತಿ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯನ್ನೆ ನೆಚ್ಚಿಕೊಂಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರಾದ ಹೃದಯರೋಗ ತಜ್ಞರು, ಚರ್ಮರೋಗ ತಜ್ಞರು ಹಾಗೂ ಇನ್ನೊಬ್ಬ ಸ್ತ್ರೀರೋಗ ತಜ್ಞರ ಅವಶ್ಯಕತೆ ಹೆಚ್ಚಾಗಿದೆ.
ಈ ವಿಭಾಗದಲ್ಲಿ ತಜ್ಞ ವೈದ್ಯರ ಅನುಪಸ್ಥಿತಿ ಅಥವಾ ಕೊರತೆಯು ರೋಗಿಗಳಿಗೆ ಗಮನಾರ್ಹ ತೊಂದರೆಗಳನ್ನು ಉಂಟುಮಾಡುತ್ತಿದೆ. ಇದು ಚಿಕಿತ್ಸೆಯಲ್ಲಿ ವಿಳಂಭ ಮತ್ತು ಇತರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲು ಕಾರಣವಾಗುತ್ತದೆ, ಇದು ಆರೋಗ್ಯ ವ್ಯವಸ್ಥೆಗೆ ಮತ್ತಷ್ಟು ಹೊರೆಯಾಗಿದೆ. ಅನೇಕ ರೋಗಿಗಳು. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಂದ ಬಂದವರು, ಖಾಸಗಿ ಆರೋಗ್ಯ ಸೇವೆಯನ್ನು ಪಡೆಯಲು ಅಸಮರ್ಥರಾಗಿದ್ದಾರೆ ಮತ್ತು ವಿಶೇಷ ಚಿಕಿತ್ಸೆಗಾಗಿ ಸಂಪೂರ್ಣವಾಗಿ ಸರ್ಕಾರಿ ವೈದ್ಯಕೀಯ ಸೌಲಭ್ಯಗಳನ್ನು ಅವಲಂಬಿಸಿದ್ದಾರೆ. ಅಲ್ಲದೇ ಹೃದಯಾಘತ ಸಂಭವಿಸಿದಲ್ಲಿ ದೂರದ ರಾಯಚೂರು ಬಾಗಲಕೋಟೆಗೆ ಹೋಗಬೇಕಾದ ಸಂಧರ್ಬದಲ್ಲಿ ಮರಣಹೊಂದಿದ ಉದಾಹರಣೆಗಳು ಇವೆ.
ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೃದಯರೋಗ ತಜ್ಞರು, ಚರ್ಮರೋಗ ತಜ್ಞರು ಹಾಗೂ ಇನ್ನೊಬ್ಬ ಸ್ತ್ರೀರೋಗ ತಜ್ಞರ ನೇಮಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಇದು ಸ್ಥಳೀಯ ಸಮುದಾಯಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಮತ್ತು ಆಸ್ಪತ್ರೆಯು ಒದಗಿಸುವ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸುತ್ತದೆ. ಈ ವಿಷಯದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ತ್ವರಿತ ಕ್ರಮಕ್ಕಾಗಿ ನಮ್ಮ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಕರವೇ ಕಾರ್ಯ ಕರ್ತರು ಉಪಸ್ಥಿತರಿದ್ದರು.
