Monday, February 9, 2026
HomeUncategorizedಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ & ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ

ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ & ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಹರಲಾಲ್ ನೆಹರು ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳ ದಿನಾಚರಣೆಯನ್ನು ಉದ್ದೇಶಿಸಿ ಪುರಸಭೆ ಮಾಜಿ ಸದಸ್ಯ ಶರಣು ಸೊಲ್ಲಾಪುರ ಮಾತನಾಡುತ್ತಾ ಮೊದಲನೆಯದಾಗಿ ಎಲ್ಲಾ ನನ್ನ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಷಯಗಳನ್ನು ಕೋರುತ್ತಾ
ಇಂದು ದೇಶದೆಲೆಡೆ ಸಡಗರ ಸಂಭ್ರಮದಿಂದ
ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇಂದಿನ ಮಕ್ಕಳೇ! ನಮ್ಮ ದೇಶದ ನಾಳೆಯ ಪ್ರಜೆಗಳು,
1951 ರಲ್ಲಿ ವಿಶ್ವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದ್ದ ವಿ.ಎನ್.ಕುಲಕರ್ಣಿ ಅವರು ಭಾರತದ ಮಕ್ಕಳ ಸ್ಥಿತಿಗತಿ ಹಾಗೂ ಭವಿಷ್ಯದ ಹಿತ ದೃಷ್ಟಿಯಿಂದ ಅವರು ಕಂಡ ಕನಸ್ಸಿನಂತೆ,
ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ರವರ ಜನ್ಮ ದಿನದಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತೆ.
ಈ ಶುಭ ಸಂದರ್ಭದಲ್ಲಿ ಮಕ್ಕಳಲ್ಲಿ ನನ್ನ ವಿಶೇಷ ವಿನಂತಿ ಏನೆಂದರೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಪಡದೆ ದೇಶೀಯ ಸಂಸ್ಕೃತಿಯನ್ನು ಅನುಸರಿಸಿ ಬೆಳೆಯ ಬೇಕು ಜೊತೆ ಜೊತೆಯಲ್ಲೆ ದುಷ್ಚಟಗಳಿಂದ ದೂರವಿದ್ದು ಆಟ,ಪಾಠ,ಸಂಗೀತಗಳ ಕಡೆಗೆ ಹೆಚ್ಚಿನ ಒಲವನ್ನು ತೋರಿಸ ಬೇಕು ಎಂದರು.
ದೇಶದ ಭವಿಷ್ಯದ ಆಸ್ತಿಯಾಗಿರುವ ಮಕ್ಕಳು ದೇಶದ ಬಗ್ಗೆ ಸದಾ ಭಕ್ತಿ, ಭಾವನೆಯನ್ನು ಹೊಂದಿ ಉತ್ತಮ ಪ್ರಜೆಗಳಾಗಲಿ ಎಂದು ಈ ಶುಭ ದಿನದಂದು ಶುಭ ಹಾರೈಸುತ್ತಾ, ದೇಶದ ಎಲ್ಲಾ ಮಕ್ಕಳಿಗೆ ಮತ್ತೊಮ್ಮೆ ಮಕ್ಕಳ ದಿನಾಚರಣೆಯ ಶುಭಾಷಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಮನಗೌಡ,ಉಪಾಧ್ಯಕ್ಷೆ ಸಂಗೀತ,ಸದಸ್ಯರಾದ ಆನಂದ ಭೋಯಿ,ಶರಣು ಕುಮಾರ್ ಸೊಲ್ಲಾಪುರ, ಅಣ್ಣಪ್ಪ ಪಂಡ್ರಿ,ರಾಜು ಬಳಿಚಕ್ರ,ಪುರಸಭೆ ಸದಸ್ಯ ಪರಶುರಾಮ ಗೋವಿಂದರ್,ಪ್ರಜಾವಾಣಿ ವರದಿಗಾರ ಮಹಾಂತೇಶ್ ಒಗರಿ, ಶಾಲೆಯ ಪ್ರಧಾನ ಗುರು ರಂಜಾನ್ ಲೋನಿ,ಗೌರವ ಶಿಕ್ಷಕೀಯರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ವರದಿ : ಬಸವರಾಜ ಹೊಸಮನಿ ಕಕ್ಕೇರಾ

ಹೆಚ್ಚಿನ ಸುದ್ದಿ