
ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತಿ ಆದ್ದೋರಿ ಆಚರಣೆ ತಾಲೂಕು ಆಡಳಿತ ಹಾಗೂ ಬಂಜಾರ ಸಮಾಜದ ಮುಖಂಡರ ಜೋತೆಗೆ ಪ್ರವಾಸಿ ಮಂದಿರ ಎದುರುಗಡೆ ಸೇವಾಲಾಲ್ ಮಹಾರಾಜರ ವೃತ್ತಕ್ಕೆ ಪೂಜೆ ಮಾಡಿ ಎಲ್ಲರೂ ಸಿಹಿ ಹಂಚಿ ಸಂಭ್ರಮಿಸಿವರು. ನಂತರ ತಹಶೀಲ್ದಾರರ ಕಾರ್ಯಲಯ ಲಿಂಗಸಗೂರ ನಲ್ಲಿ ಉಪ ತಹಶೀಲ್ದಾರರಾದ ಬಸವರಾಜ ಝಳಕಿಮಠ ಇವರ ನೇತೃತ್ವದಲ್ಲಿ ಹಾಗೂ ಸಮಾಜದ ಮುಖಂಡರ ಜೋತೆಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಶ್ಪಾರ್ಚಣೆ ಮಾಡಿ ಜಯಂತಿಯನ್ನು ಆಚರಿಸಲಾಯಿತು.
ಸಮಾಜದ ಅಧ್ಯಕ್ಷರಾದ ಲಾಲಾಪ್ಪ ರಾಠೋಡ್, ಮಾತನಾಡಿ ಸತ್ಯ ಸೇವಾಲಾಲ್ ಮಹಾರಾಜರು ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ 1739 ಫೆಬ್ರವರಿ 15 ರಂದು ಧರ್ಮಣಿಬಾಯಿ ಭೀಮಾನಾಯಕ್ ಇವರ ಊದರದಲ್ಲಿ ಜನಿಸಿದರು. ಮಹಾರಾಜರು ಬಾಲ್ಯದಲ್ಲಿ ತಮ್ಮ ದನಗಳನ್ನು ಕಾಯುತ್ತಿದ್ದ ಸಂದರ್ಭದಲ್ಲಿ ನದಿಯ ದಡದಲ್ಲಿ ಇದ್ದ ಮಣ್ಣಿನಿಂದ ಸಿಹಿ ಪಾಯಸ ಮಾಡಿ ದೇವರಿಗೆ ನೈವೇದ್ಯ ಮಾಡಿ ಎಲ್ಲಾ ಸ್ನೇಹಿತರಿಗೆ ಉಣಬಡಿಸಿದರು.ಮಹಾರಾಷ್ಟ್ರದ ಸಮೂದ್ರದ ಸ್ಮೀತ್ ಬಾವೂಚ್ ಸ್ಥಳದಲ್ಲಿ ಪೋರ್ಚುಗೀಸರ ವಜ್ರ,ಮುತ್ತು,ವೈಡೂರ್ಯ ಸಂಪತ್ತುಗಳಿಂದ ತುಂಬಿದ ಹಡಗವು ಸಮುದ್ರದ ಸುಳಿಯಲ್ಲಿ ಮುಳುಗುತ್ತಿದ್ದುದನ್ನು ರಕ್ಷಣೆ ಮಾಡಿದರು. ಆದ್ದರಿಂದ ಸೇವಾಲಾಲ್ ರನ್ನು ಮೋತಿವಾಳೊ ಎಂದು ಕರೆಯುತ್ತಾರೆ.
ನರನಿಗೆ ನಾರಿ ಮಾಡಿ ಏಳು ಮಕ್ಕಳು ಹುಟ್ಟುತ್ತವೆ ಎಂದು ಹೇಳಿ ಕಳಿಸಿದರು ಅದೆ ರೀತಿಯಾಗಿ ಏಳು ಮಕ್ಕಳಾದರು. ಈ ರೀತಿಯಾಗಿ ಅನೇಕ ಪವಾಡಗಳನ್ನು ಮಾಡುತ್ತಾ ಕೊನೆಗೆ ಮಹಾರಾಷ್ಟ್ರ ದ ಪೋಹರಾಗಡ ಎಂಬ ಸ್ಥಳದಲ್ಲಿ ಕ್ರಿ, ಶ 1806 ಡಿಸೆಂಬರ್ 4 ರಂದು ದೈವಾಧೀನರಾದರು. ಸರ್ವ ಸಮಾಜದ ಹಾಗೂ ಹುಟ್ಟಿದ ಸಕಲ ಜೀವರಾಶಿಗಳ, ಮತ್ತು ಪ್ರಕೃತಿಯ ಲೇಸನ್ನು ಬಯಸಿದರು ಎಂದು ಹೇಳಿದರು . ಈ ಸಂದರ್ಭದಲ್ಲಿ ಸಮಾಜದ, ದೆವಪ್ಪ ರಾಠೋಡ್, ನಾಗರೆಡ್ಡಿ ರಾಠೋಡ್. ರಾಜು ಚವ್ಹಾಣ್, ಶಂಕರ್ ಪವಾರ್, ನಿಲೇಶ ಪವಾರ್, ವೆಂಕಟೇಶ ರಾಠೋಡ್, ಗೋಪಾಲ ರಾಠೋಡ್, ರಾಮು ರಾಠೋಡ್,ಶರಣಪ್ಪ ಜಾಧವ್,ಹಾಗೂ ಸಮಾಜದ ಹಿರಿಯ ಮುಖಂಡರು ಭಾಗವಹಿಸಿದ್ದರು
