Tuesday, May 19, 2026
Homeಟಾಪ್ ನ್ಯೂಸ್ಶುದ್ಧಹಸ್ತ ರಾಜಕಾರಣಿ”ಗೆ ದೆಹಲಿ ಗೌರವ..! ಮೋದಿ ಸಮಿತಿಯಲ್ಲಿ ಪ್ರಮೋದ್ ಮಧ್ವರಾಜ್..!ಮುಂದಿನ ಚುನಾವಣೆಗೆ ಮಾಸ್ಟರ್ ಪ್ಲಾನ್..?

ಶುದ್ಧಹಸ್ತ ರಾಜಕಾರಣಿ”ಗೆ ದೆಹಲಿ ಗೌರವ..! ಮೋದಿ ಸಮಿತಿಯಲ್ಲಿ ಪ್ರಮೋದ್ ಮಧ್ವರಾಜ್..!ಮುಂದಿನ ಚುನಾವಣೆಗೆ ಮಾಸ್ಟರ್ ಪ್ಲಾನ್..?

ಉಡುಪಿ: ರಾಜಕೀಯದಲ್ಲಿ ಕೆಲ ಸುದ್ದಿಗಳು ಕೇವಲ ಸುದ್ದಿಗಳಾಗಿರುವುದಿಲ್ಲ… ಅವು ಭವಿಷ್ಯದ ದಿಕ್ಕನ್ನು ಸೂಚಿಸುವ “ಸಂಕೇತ”ಗಳಾಗಿರುತ್ತವೆ. ಇದೀಗ ಅಂತಹದ್ದೇ ಒಂದು ಬೆಳವಣಿಗೆ ಕರಾವಳಿಯ ರಾಜಕೀಯ ಅಂಗಳದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಸಮಾಜ ಸುಧಾರಕ ಜ್ಯೋತಿರಾವ್ ಗೋಪಾಲ್‌ರಾವ್ ಪುಲೆ ಅವರ 200ನೇ ಜನ್ಮ ವಾರ್ಷಿಕೋತ್ಸವವನ್ನು ದೇಶವ್ಯಾಪಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಕೇಂದ್ರ ಸರ್ಕಾರ ವಿಶೇಷ ರಾಷ್ಟ್ರೀಯ ಸಮಿತಿಯನ್ನು ರಚಿಸಿದೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯ ಈ ಪ್ರತಿಷ್ಠಿತ ಸಮಿತಿಯಲ್ಲಿ ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ನ್ಯಾಯಾಂಗದ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಸೇರಿಸಲಾಗಿದೆ.

ಈ ಮಹತ್ವದ ಪಟ್ಟಿಯಲ್ಲಿ ರಾಜ್ಯದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೆಸರು ಕಾಣಿಸಿಕೊಂಡಿರುವುದು ಕರಾವಳಿ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಸಚಿವರಾಗಿದ್ದ ಅವಧಿಯಲ್ಲಿ ಜನಪರ ಕೆಲಸ, ಅಭಿವೃದ್ಧಿ ದೃಷ್ಟಿಕೋನ ಹಾಗೂ “ಶುದ್ಧಹಸ್ತ ರಾಜಕಾರಣಿ” ಎಂಬ ಹೆಗ್ಗಳಿಕೆಯನ್ನು ಪಡೆದಿದ್ದ ಪ್ರಮೋದ್ ಮಧ್ವರಾಜ್, ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ರಾಷ್ಟ್ರೀಯ ಮಟ್ಟದಲ್ಲೂ ಪಕ್ಷಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಪಕ್ಷದಲ್ಲಿ ನಿರೀಕ್ಷಿತ ಮಟ್ಟದ ಜವಾಬ್ದಾರಿ ಸಿಕ್ಕಿಲ್ಲ ಎಂಬ ಅಸಮಾಧಾನ ಅಭಿಮಾನಿಗಳಲ್ಲಿತ್ತು.

ಆದರೆ ಈಗ ಮೋದಿ ನೇತೃತ್ವದ ಸಮಿತಿಯಲ್ಲಿನ ಈ ಸ್ಥಾನ, “ಕೇಂದ್ರ ನಾಯಕತ್ವದ ವಿಶೇಷ ಗಮನ” ಎಂಬ ಸಂದೇಶವನ್ನೇ ರವಾನಿಸುತ್ತಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕೇರಳ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಪ್ರಮೋದ್ ಮಧ್ವರಾಜ್ ಅವರ ಸಂಘಟನೆ ಸಾಮರ್ಥ್ಯವನ್ನು ಬಿಜೆಪಿ ಹೈಕಮಾಂಡ್ ಗುರುತಿಸಿದೆ ಎನ್ನಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯ ಅಥವಾ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಜವಾಬ್ದಾರಿ ಸಿಗಬಹುದೇ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಇನ್ನೊಂದೆಡೆ, ಉಡುಪಿ ಕೃಷ್ಣಮಠದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದ ವೇಳೆ ಪ್ರಮೋದ್ ಮಧ್ವರಾಜ್ ಅವರಿಗೆ ಸಮರ್ಪಕ ಪ್ರಾಮುಖ್ಯತೆ ಸಿಗಲಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿತ್ತು. ಈಗ ಅದೇ ಮೋದಿ ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಸ್ಥಾನ ದೊರೆತಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
“ಇದು ಕೇವಲ ಸಮಿತಿಯ ಸದಸ್ಯತ್ವವಲ್ಲ…
ಕರಾವಳಿ ರಾಜಕೀಯದ ಮುಂದಿನ ಅಧ್ಯಾಯದ ಮುನ್ನುಡಿ!” ಎಂಬ ಮಾತು ಇದೀಗ ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ.

ಹೆಚ್ಚಿನ ಸುದ್ದಿ