ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರು ಹಾಗೂ ಸಹಾಯಕ ಪ್ರಾಧ್ಯಾಪಕರು, ಅಧಿಕಾರಿಗಳ ಮೂಲಕ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದರು*
ಶಿಗ್ಗಾವಿ (ಹಾವೇರಿ ಜಿಲ್ಲೆ): ‘ತಾಲ್ಲೂಕಿನಗೊಟಗೋಡಿ ಜಾನಪದ ವಿಶ್ವ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ನಮಗೆ 11 ತಿಂಗಳಿನಿಂದ ವೇತನ ಬರುತ್ತಿಲ್ಲ’ ಎಂದು ವಿಶ್ವವಿದ್ಯಾಲಯದ ಹೊರ ಗುತ್ತಿಗೆದಾರ ನೌಕರರು ಮತ್ತು ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಹೊರಗುತ್ತಿಗೆ ನೌಕರರಾದ ನಿಂಗವ್ವ ಹರಿಜನ ‘15 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. 11 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಹುಬ್ಬಳ್ಳಿಯ ಬಿ.ಕೆ. ಸರ್ವೀಸ್ ಟೆಂಡರ್ ಮೂಲಕ 20 ಜನರು ಕೆಲಸ ಮಾಡುತ್ತಿದ್ದಾರೆ. ವೇತನ ಸಿಗದೇ ಬದುಕು ನಡೆಸುವುದು ಕಷ್ಟಕರವಾಗಿದೆ’ ಎಂದರು.
‘ವೇತನ ಬಾರದೆ ತೊಂದರೆ ಆಗಿದೆ. ಅಧಿಕಾರಿಗಳು ಸುಳ್ಳು ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ನಮಗೆ ವೇತನ ಕೊಡಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ’ ಎಂದು ದೂರಿದರು.
ಸಹಾಯಕ ಪ್ರಾಧ್ಯಾಪಕ ಉತ್ತಮ ಮೋದಿ, ‘ಒಂದೂವರೆ ವರ್ಷದಿಂದ ವೇತನ ನೀಡಿಲ್ಲ. ಪ್ರತಿ ಸಿಂಡಿಕೇಟ್ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯು ತ್ತದೆ. ಪರಿಹಾರ ಸಿಕ್ಕಿಲ್ಲ’ ಎಂದರು.
‘ಹಲವು ಬಾರಿ ಲಿಖಿತ ದೂರು ನೀಡಿ ದ್ದೇವೆ. ಪ್ರಯೋಜನವಾಗಿಲ್ಲ. ಸಾಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದರು.
ಸಹಾಯಕ ಪ್ರಾಧ್ಯಾಪಕರಾದ ಎಚ್.ಎಚ್. ನದಾಫ್, ಶಿವಾನಂದ ದೊಡ್ಡಮನಿ, ಸುವರ್ಣ ಜೆ.ಎಸ್., ಸೈಯಿದಾ ಖಾದ್ರಿ, ಆನಂದಪೊ ಜೋಗಿ, ಪ್ರವೀಣ ಕರೆಪ್ಪನವರ ಮತ್ತು ಹೊರಗುತ್ತಿಗೆದಾರರಾದ ಬಸವರಾಜ ಬಳಿಗಾರ, ರಾಜು ಕುರಗೋಡಿ, ಮಹೇಶ ಯಮೋಜಿಮ, ಮಂಜುಳಾ ಇಂಗಳಗಿ, ರತ್ನವ್ವ ವಾಲಿಕಾರ, ಶಿಲ್ಪ ಹರಿಜನ, ರಾಜೇಶ್ವಿ ಸಿಂಧೆ, ಸುರೇಶ ಲಮಾಣಿ, ಸುರೇಶ ಬಂಡಿವಡ್ಡರ ಇದ್ದರು. ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಮತ್ತು ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಿದರು.
