Thursday, March 26, 2026
Homeಜಿಲ್ಲಾ ಸುದ್ದಿಗಳುಶಿಗ್ಗಾಂವಿಯಲ್ಲಿ ಶಾರ್ಟ್ ಸರ್ಕ್ಯೂಟ್ ದುರಂತ: ಯುವರಾಜ್ ಬುಕ್ ಸ್ಟಾಲ್‌ಗೆ ₹10 ಲಕ್ಷ ನಷ್ಟ – ಪರಿಹಾರಕ್ಕೆ...

ಶಿಗ್ಗಾಂವಿಯಲ್ಲಿ ಶಾರ್ಟ್ ಸರ್ಕ್ಯೂಟ್ ದುರಂತ: ಯುವರಾಜ್ ಬುಕ್ ಸ್ಟಾಲ್‌ಗೆ ₹10 ಲಕ್ಷ ನಷ್ಟ – ಪರಿಹಾರಕ್ಕೆ ಮಾಲಕರ ಮನವಿ

ಶಿಗ್ಗಾಂವಿ: ನಗರದ ರಾಜಶ್ರೀ ಟಾಕೀಸ್ ಎದುರಿನಲ್ಲಿರುವ ಯುವರಾಜ್ ಬುಕ್ ಸ್ಟಾಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಅಗ್ನಿ ಅವಘಡ ಸಂಭವಿಸಿ ಸುಮಾರು ₹10 ಲಕ್ಷ ಮೌಲ್ಯದ ಆಸ್ತಿ ನಷ್ಟವಾಗಿದೆ.

ಅವಘಡದಲ್ಲಿ ಬುಕ್ ಸ್ಟಾಲ್‌ನಲ್ಲಿ ಇದ್ದ ಜೆರಾಕ್ಸ್ ಯಂತ್ರ, ಪ್ರಿಂಟರ್, ಲ್ಯಾಪ್‌ಟಾಪ್, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಕಾಲೇಜು ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು ಹಾಗೂ ವಿವಿಧ ಸ್ಟೇಷನರಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್‌ವೇ ಕಾರಣ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.

ಈ ಬುಕ್ ಸ್ಟಾಲ್‌ನ್ನು ಪ್ರಕಾಶ ಬಾರಿಗಿಡದ ಹಾಗೂ ಯುವರಾಜ್ ಕೆ.ಎಚ್. ಅವರು ಹಲವು ವರ್ಷಗಳಿಂದ ನಡೆಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಇದು ಪ್ರಮುಖ ಅಧ್ಯಯನ ಕೇಂದ್ರವಾಗಿತ್ತು.

ದುರಂತದಿಂದಾಗಿ ಮಾಲಕರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಘಟನೆ ಕುರಿತು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ವ್ಯಾಪಾರ ಸಂಪೂರ್ಣವಾಗಿ ನಾಶವಾಗಿದ್ದು, ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಮಾಲಕರು ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಸಹಾನುಭೂತಿ ವ್ಯಕ್ತಪಡಿಸಿದ್ದು, ಸರ್ಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮಾನವೀಯ ದೃಷ್ಟಿಯಿಂದ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ವರದಿ: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ