ಪಾದಯಾತ್ರೆ ಕರಪತ್ರಗಳನ್ನು ಬಿಡುಗಡೆ ಮಾಡಿದ ದಲಿತ ಮುಖಂಡರು
ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ
ಇದೇ ತಿಂಗಳು 15 ನೇ ತಾರಿಖಿನಿಂದ 24-01-2024 ರವರೆಗೆ
ಸನ್ನತಿ ಯಿಂದ ಬೆಂಗಳೂರಿನ ವಿಧಾನಸೌಧದ ವರೆಗು ಪಾದಯಾತ್ರೆ ಹಮ್ಮಿಕೊಂಡ ವಿವಿಧ ದಲಿತಪರ ಸಂಘಟನೆಗಳ ಮುಖಂಡರು.
ಸನ್ನತಿ ಪಂಚಶೀಲ ಪಾದಯಾತ್ರೆಯು ನಾಡಿನ ಬಿಕ್ಕು ಸಂಘ ಮತ್ತು ದಲಿತಪರ ಸಂಘ ಸಂಸ್ಥೆಗಳು ಹಾಗೂ ಬೌದ್ಧ ಸಂಘ ಸಂಸ್ಥೆಗಳ ಸಂಯುಕ್ತಶ್ರಯದಲ್ಲಿ
ಹಮ್ಮಿಕೊಂಡಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು
ಸುರಪುರ ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಕರೆಯಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ದಲಿತ ಮುಖಂಡ ರಾಹುಲ್ ಹುಲಿಮನಿ ಅವರು ಮಾಧ್ಯಮ ಹೇಳಿಕೆ ನೀಡುತ್ತಾ ವಿಶ್ವ ಶಾಂತಿಗಾಗಿ ಹಾಗೂ ಸನ್ನತಿ ಸಮಗ್ರ ಅಭಿವೃದ್ಧಿ ಹಮ್ಮಿಕೊಂಡಿರುವ ಬಿಕ್ಕು ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ನ ಅಧ್ಯಕ್ಷ ವೆಂಕಟೇಶ ಹೊಸಮನಿ, ದಲಿತ ಮುಖಂಡರಾದ ಭೀಮರಾಯ ಸಿಂಧಿಗೇರಿ,ವೆಂಕಟೇಶ್ವರ, ಶರ್ಮಿಳಾ ಕರಡಕಲ್, ಶ್ರೀನಿವಾಸ ಮಾಳಪ್ಪ ಕಿರದಹಳ್ಳಿ,ಶಿವಶರಣ ವಾಡಿ, ಬಸವರಾಜ ಮಾಳಳ್ಳಿಕರ್, ತಿಪ್ಪಣ್ಣ ಶೆಳ್ಳಗಿ,ಶರಣಪ್ಪ ತಳವಾರಗೇರಿ,ಶೇಖರ್ ಮಂಗಳೂರು,ಪರಶುರಾಮ, ಪ್ರಕಾಶ ಕಟ್ಟಿಮನಿ,ಮಲ್ಲು ಕಟ್ಟಿಮನಿ,ಭೀಮಾಶಂಕರ ಚಂದಲಾಪುರ, ಅವಿನಾಶ ಹೊಸಮನಿ, ಇತರರು ಉಪಸ್ಥಿತರಿದ್ದರು.
ವರದಿ :ಮೌನೇಶ ಆರ್ ಭೋಯಿ


