ಹಾವೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ರಾಜಕೀಯ ಕೆಸರಾಟದಲ್ಲಿ ನಿರತರಾಗಿ ದೇಶದ ಅನ್ನದಾತರ ಬಗ್ಗೆ ಗಮನಹರಿಸುತ್ತಿಲ್ಲ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಸರಿಯಾಗಿ ಸಿಗುತ್ತಿಲ್ಲ ದೇಶಕ್ಕೆ ಅನ್ನ ಕೊಡುವ ರೈತರು ರೈತ ಸಂಪರ್ಕ ಕೇಂದ್ರದ ಎದುರು ಬೀಜಕ್ಕಾಗಿ ಬಂದು ಬೀದಿಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿದೆ. ರಸಗೊಬ್ಬರದ ಬೆಲೆ ಏರಿಕೆಯಾಗಿದ್ದರು ಅಗತ್ಯ ಪ್ರಮಾಣದಲ್ಲಿ ರೈತರಿಗೆ ರಸಗೊಬ್ಬರ ದೊರಕುತ್ತಿಲ್ಲ ಈ ವಿಷಯದಲ್ಲಿ ಸರ್ಕಾರಗಳು ನಾಟಕವಾಡುತ್ತಿವೆ ಸರ್ಕಾರಗಳಿಗೆ ಆಹಾರ ಉತ್ಪಾದನೆ ಹೆಚ್ಚಿಸುವ ಇಚ್ಛಾಶಕ್ತಿ ಇದ್ದರೆ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ರೈತರಿಗೆ ಒದಗಿಸುವಲ್ಲಿ ಮುಂದಾಗಲಿ. ಬರೀ ಹೆಸರಿಗೆ ರಾಸಾಯನಿಕ ಮುಕ್ತ ಕೃಷಿ ಮಾಡಿ ಎಂದರೆ ಸಾಲದು ಅದಕ್ಕೆ ಪೂರಕವಾದ ವ್ಯವಸ್ಥೆ ಮತ್ತು ಜ್ಞಾನವನ್ನು ಸರ್ಕಾರಗಳು ಮೊದಲು ನೀಡಬೇಕು ಎಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ
