Friday, April 10, 2026
Homeಜಿಲ್ಲಾ ಸುದ್ದಿಗಳುಕಲಬುರ್ಗಿಮೆಟ್ರಿಕ್ ನಂತರದ ಡಾ ಬಿ.ಆರ್ .ಅಂಬೇಡ್ಕರ್ ಬಾಲಕ ಹಾಗೂ ಬಾಲಕಿಯರ ಹಾಸ್ಟೆಲ್ ಸಚಿವ ಪ್ರಿಯಾಂಕ್ ಖರ್ಗೆ...

ಮೆಟ್ರಿಕ್ ನಂತರದ ಡಾ ಬಿ.ಆರ್ .ಅಂಬೇಡ್ಕರ್ ಬಾಲಕ ಹಾಗೂ ಬಾಲಕಿಯರ ಹಾಸ್ಟೆಲ್ ಸಚಿವ ಪ್ರಿಯಾಂಕ್ ಖರ್ಗೆ ಯಿಂದ ಲೋಕಾರ್ಪಣೆ

ಕಲಬುರ್ಗಿ :: ನಗರದಲ್ಲಿ ರೂ 11.86 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಟ್ರಿಕ್ ನಂತರದ ಡಾ ಬಿ.ಆರ್ .ಅಂಬೇಡ್ಕರ್ ಬಾಲಕ ಹಾಗೂ ಬಾಲಕಿಯರ ಹಾಸ್ಟೆಲ್ ನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಿದರು.

ತಲಾ ನೂರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ವಸತಿ‌ ಸೌಲಭ್ಯ ಕಲ್ಪಿಸುವ ಹಾಸ್ಟೆಲ್ ನಿರ್ಮಾಣವನ್ನು ಎಸ್ ಸಿ ಪಿ‌ 2023-24 ರ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡಲಾಗಿದೆ.

ಒಟ್ಟಾರೆ ಒಂದು ಎಕರೆ ಪ್ರದೇಶದಲ್ಲಿ‌ ನಿರ್ಮಾಣ ಮಾಡಲಾಗಿರಿವ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕೆ ರೂ 5.36 ಕೋಟಿ ಹಾಗೂ ಬಾಲಕಿಯರ ಹಾಸ್ಟೆಲ್ ಗೆ ರೂ 6.50 ಕೋಟಿ ವೆಚ್ಚ ಮಾಡಲಾಗಿದೆ.

ಪ್ರತ್ಯೇಕ ಕೋಣೆಗಳು, ಸ್ನಾನದ ಕೋಣೆಗಳು, ಶೌಚಾಲಯ, ಡೈನಿಂಗ್ ಹಾಲ್, ಚಿಕ್ಕದಾದ ಆರೋಗ್ಯ ಕೇಂದ್ರ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹಾಸ್ಟೆಲ್ ಹೊಂದಿದೆ.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಈ ಹಾಸ್ಟೆಲ್ ನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಹೆಚ್ಚಿನ ಸುದ್ದಿ