
ಲಿಂಗಸುಗೂರು ಜ26 – ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳ ಕುರಿತು ಶಾಲಾ ಕಾಲೇಜುಗಳ ಮಕ್ಕಳಿಗೆ, ಸಾರ್ವಜನಿಕರಿಗೆ ತಿಳಿಹೇಳಿ, ಪಾಲಿಸುವಂತೆ ಜಾಗೃತಿ ಮೂಡಿಸುವ ಅಗತ್ಯವಿದೆ.
ಸಂವಿಧಾನ ದೇಶದ ಹೆಮ್ಮೆಯ ವಿಷಯ. ಸಂವಿಧಾನದ ಕಲಂ 51.A. ಮೂಲಭೂತ ಕರ್ತವ್ಯಗಳ ಪಾಲನೆ ಮಾಡುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಜವಾಬ್ದಾರಿ ಯಾಗಿದೆ.
14 ರಿಂದ 32 ರವರೆಗೆ ಮೂಲಭೂತ ಹಕ್ಕುಗಳ ಪ್ರತಿಪಾದನೆ ಮಾಡಲಾಗಿದೆ. ಮೂಲಭೂತ ಹಕ್ಕುಗಳು ಪ್ರತಿಯೊಬ್ಬ ನಾಗರಿಕನ ಬೆಳವಣಿಗೆಗೆ ಪೂರಕವಾಗಿವೆ. ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪಾಲಿಸಿದ್ದಲ್ಲಿ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ದೇಶ ಮುನ್ನಡೆಸಲು ಸಂವಿಧಾನವೇ ಮಾರ್ಗದರ್ಶಿಯಾಗಿದೆ
ಎಂದು ಲಿಂಗಸೂಗೂರು ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು. ನಂತರ
ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 76 ನೇ ಗಣರಾಜ್ಯತ್ಸೋವ ಅಂಗವಾಗಿ ನಾಡಿನ ಎಲ್ಲಾ ಜನರಿಗೆ ಶುಭಾಶಯಗಳು ಹೇಳಿದರು.
ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಎಪಿಎಂಸಿ ಅಧ್ಯಕ್ಷ ಅಮರೇಶ ದೊಡ್ಡಪ್ಪ, ತಹಶೀಲ್ದಾರ್ ಎನ್. ಶಂಶಾಲಂ, ಪೋಲಿಸ್ ಉಪವಿಭಾಗಾಧಿಕಾರಿ ದತ್ತಾತ್ರೇಯ ಕರ್ನಾಡ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ, ಸಿಪಿಐ ಪುಂಡಲೀಕ ಪಟ್ಟೇದಾರ್, ಗೃಹ ರಕ್ಷಕ ದಳದ ಘಟಕಾಧಿಕಾರಿ ತಿಮ್ಮನಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪೋಲಿಸ್ ಇಲಾಖೆ, ಗೃಹ ರಕ್ಷಕ ದಳ, ಸ್ಕೌಟ್ಸ್ & ಗೈಡ್ಸ್ ಮತ್ತು ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಜರುಗಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಕಾಳಪ್ಪ ಬಡಿಗೇರ್, ಪತ್ರಕರ್ತ ಸಿದ್ದನಗೌಡ ಪಾಟೀಲ ಹಟ್ಟಿ ಸೇರಿದಂತೆ ಹಲವು ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು. ಕೊನೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
