Tuesday, June 2, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡ*ಮುಂಡಗೋಡ ತಾಲೂಕ ಬ್ಲಾಕ್ ಕಾಂಗ್ರೆಸ ಸಮಿತಿ ವತಿಯಿಂದ  ಶಿವರಾಮ್ ಹೆಬ್ಬಾರ್ ಅವರು ಕಾರ್ಯಕರ್ತರ ಹಾಗೂ ಸಾರ್ವಜನಿಕರ...

*ಮುಂಡಗೋಡ ತಾಲೂಕ ಬ್ಲಾಕ್ ಕಾಂಗ್ರೆಸ ಸಮಿತಿ ವತಿಯಿಂದ  ಶಿವರಾಮ್ ಹೆಬ್ಬಾರ್ ಅವರು ಕಾರ್ಯಕರ್ತರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳಲು ಮುಂಡಗೋಡ ಐಬಿಗೆ  ಆಗಮಿಸುತ್ತಿದ್ದಾರೆ..

ಮುಂಡಗೋಡ: ಆತ್ಮೀಯ ಕಾಂಗ್ರೆಸ್ ಪಕ್ಷದ ಮುಖಂಡರೆ ಹಾಗೂ ಕಾರ್ಯಕರ್ತರೇ, ನಾಳೆ 1-06-2026 ರಂದು ಸೋಮವಾರ  ಬೆಳಿಗ್ಗೆ  11-00 ಗಂಟೆಯಿಂದ 1-00 ವರೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳಲು ಮುಂಡಗೋಡ ಐಬಿಗೆ  ಆಗಮಿಸುತ್ತಿದ್ದಾರೆ

ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಯನ್ನು ಶಾಸಕರ ಹತ್ತಿರ ಚರ್ಚಿಸಬಹುದು ಹಾಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಘಟಕದ ಅಧ್ಯಕ್ಷರು  ಕಾರ್ಯಕರ್ತರು ಅಭಿಮಾನಿಗಳು  ಆಗಮಿಸಬೇಕೆಂದು ಶ್ರೀ ಡಿಕೆ ನಡಗೇರ ಅಧ್ಯಕ್ಷರು ಹಾಗೂ ತಾಲೂಕ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ  ಮತ್ತು ಶ್ರೀ ಕೃಷ್ಣ ಎಚ್ ಹಿರೇಹಳ್ಳಿ ಅಧ್ಯಕ್ಷರು ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಂಡಗೋಡ ಇವರು ತಿಳಿಸಿದ್ದಾರೆ…

ವರದಿಗಾರರು: ಬಸಯ್ಯ ತೋಟಯ್ಯನವರ
ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ