Sunday, August 16, 2026
HomeUncategorizedಮಾಲಗತ್ತಿಯಲ್ಲಿ ಸಡಗರ-ಸಂಭ್ರಮದಿಂದ ಜರುಗಿದ 80ನೇ ಸ್ವಾತಂತ್ರ್ಯ ದಿನಾಚರಣೆ: "ಇಂದಿನ ಮಕ್ಕಳೇ ಋನಾಳಿನ ದೇಶದ ಪ್ರಜೆಗಳು" -...

ಮಾಲಗತ್ತಿಯಲ್ಲಿ ಸಡಗರ-ಸಂಭ್ರಮದಿಂದ ಜರುಗಿದ 80ನೇ ಸ್ವಾತಂತ್ರ್ಯ ದಿನಾಚರಣೆ: “ಇಂದಿನ ಮಕ್ಕಳೇ ಋನಾಳಿನ ದೇಶದ ಪ್ರಜೆಗಳು” – ಭೀಮರಾವ್ ನಾಟೇಕರ್

ಕೆಂಬಾವಿ :: ಸ್ಥಳೀಯ ಸಿದ್ದಾರ್ಥ ಪದವಿ ಪೂರ್ವ ಕಾಲೇಜು ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಮತ್ತು ದೇಶಭಕ್ತಿಯ ಸಂಭ್ರಮದೊಂದಿಗೆ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಭೀಮರಾವ್ ನಾಟೇಕರ್ ಅವರು ಧ್ವಜಾರೋಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಣೆ:

ಈ ವಿಶೇಷ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಪಟೇಲ್, ಪಾಲಕ-ಪೋಷಕ ಪ್ರತಿನಿಧಿಗಳಾದ ಶಹಬೂದಿನ್ ಗುತ್ತೇದಾರ್ ಹಾಗೂ ಇತಿಹಾಸ ಉಪನ್ಯಾಸಕರಾದ ಬಸವರಾಜ ಕಾರನೂರ್ ಅವರು ಉಪಸ್ಥಿತರಿದ್ದು ಮಾತನಾಡಿದರು.

“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬಂತೆ, ದೇಶವನ್ನು ಹೆತ್ತ ತಾಯಿಗಿಂತ ಹೆಚ್ಚಾಗಿ ಪ್ರೀತಿಸಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳ ಆದರ್ಶಗಳು ನಮಗೆಲ್ಲರಿಗೂ ಸದಾ ಸ್ಪೂರ್ತಿಯಾಗಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ದೇಶದ ಭವಿಷ್ಯ ಸಂಪೂರ್ಣವಾಗಿ ಇವರ ಕೈಯಲ್ಲಿದೆ,” ಎಂದು ಮಹತ್ವದ ಸಂದೇಶ ನೀಡಿದರು.

ಸಾಂಸ್ಕೃತಿಕ ವೈಭವ ಮತ್ತು ಮಕ್ಕಳ ಪ್ರತಿಭೆ:

ಧ್ವಜಾರೋಣದ ಬಳಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು, ಸ್ಪೂರ್ತಿದಾಯಕ ಭಾಷಣಗಳು ಹಾಗೂ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳ ಉತ್ಸಾಹ ಹಾಗೂ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.

ಕಾರ್ಯಕ್ರಮದ ನಿರ್ವಹಣೆ:

  • ಸ್ವಾಗತ: ಶ್ರೀಶೈಲ್ ಮ್ಯಾಗೇರಿ (ಶಿಕ್ಷಕರು)
  • ನಿರೂಪಣೆ: ರಾಜೇಶ್ವರಿ ಚೆನ್ನೂರ್
  • ವಂದನಾರ್ಪಣೆ: ಮುಬೀನಾ ಹಟ್ಟಿ

ಈ ಮಹತ್ವದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರುದ್ರಪ್ಪ ಕೆಂಭಾವಿ, ಜ್ಯೋತಿ ದೇವರ ಗೋನಾಲ, ಶಿಕ್ಷಕರಾದ ಶ್ರೀಶೈಲ್ ಮ್ಯಾಗೇರಿ, ಹುಲಗಮ್ಮ ಧೋದೆಕೊಂಡ, ನಿರ್ಮಲಾ ವನದುರ್ಗ, ಅಕ್ಷತಾ ವನದುರ್ಗ ಹಾಗೂ ಕಾಲೇಜು ಮತ್ತು ಶಾಲೆಯ ಸಮಸ್ತ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಪೋಷಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

– ವರದಿ, ಬಸವರಾಜ

ಹೆಚ್ಚಿನ ಸುದ್ದಿ