Monday, May 25, 2026
Homeಪರಿಸರಮಳೆಗಾಲದ ಸಮಯದಲ್ಲಿ  ಸಾರ್ವಜನಿಕರು ಇರುವ ಸ್ಥಳದಲ್ಲಿ ಹಾವುಗಳು ಕಂಡರೆ ಹೊಡೆಯಬೇಡಿ,ಈ ಕ್ರಮಗಳನ್ನು ಅನುಸರಿಸಿ

ಮಳೆಗಾಲದ ಸಮಯದಲ್ಲಿ  ಸಾರ್ವಜನಿಕರು ಇರುವ ಸ್ಥಳದಲ್ಲಿ ಹಾವುಗಳು ಕಂಡರೆ ಹೊಡೆಯಬೇಡಿ,ಈ ಕ್ರಮಗಳನ್ನು ಅನುಸರಿಸಿ

ಜನವಸತಿ ಪ್ರದೇಶದಲ್ಲಿ ಹಾವುಗಳು ಬಂದರೆ ಅದನ್ನು ಹೊಡೆದು ಬಡೆದು ಸಾ.ಯಿಸದೇ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ…

​ಮಳೆಗಾಲದ ಸಮಯದಲ್ಲಿ ನಾಗರಹಾವು (Cobra) ಮತ್ತು ಕೊಳಕುಮಂಡಲ (Russell’s Viper) ಹಾವುಗಳ ಮರಿಗಳು ಹೆಚ್ಚಾಗಿ ಜನವಸತಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳ ಬಗ್ಗೆ ಅಸಡ್ಡೆ ಬೇಡ, ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ಅಂಶಗಳನ್ನು ಗಮನಿಸಿ:

ನೆನಪಿರಲಿ:
​ರಾತ್ರಿ ಸಮಯದಲ್ಲಿ ಮನೆಯ ಹೊರಗೆ ಸಂಚರಿಸುವಾಗ ಕಡ್ಡಾಯವಾಗಿ ಟಾರ್ಚ್ ಲೈಟ್ ಬಳಸಿ.
​ಹೊಲಗದ್ದೆಗಳಲ್ಲಿ ಅಥವಾ ತೋಟಗಳಲ್ಲಿ ಕೆಲಸ ಮಾಡುವಾಗ ನಿಮ್ಮ ಸುರಕ್ಷತೆಗಾಗಿ ಬೂಟುಗಳನ್ನು (Gum Boots) ಧರಿಸಿ.
​ಹಾವುಗಳನ್ನು ಕಂಡಾಗ ಗಾಬರಿಯಾಗಬೇಡಿ ಅಥವಾ ಅವುಗಳನ್ನು ಹಿಂಸಿಸಿ ಕೊಲ್ಲಬೇಡಿ. ಹಾವುಗಳನ್ನು ಕೊಲ್ಲುವುದು ವನ್ಯಜೀವಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ.

ತುರ್ತು ಸಹಾಯಕ್ಕಾಗಿ:
ಒಂದು ವೇಳೆ ಹಾವು ಕಚ್ಚಿದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಯಾವುದೇ ನಾಟಿ ಮದ್ದು ಅಥವಾ ಮೂಢನಂಬಿಕೆಗೆ ಒಳಗಾಗಬೇಡಿ.

ಹಾವುಗಳ ರಕ್ಷಣೆಗಾಗಿ ಸಂಪರ್ಕಿಸಿ:


ನಿಮ್ಮ ಸುತ್ತಮುತ್ತ ಹಾವುಗಳು ಕಾಣಿಸಿಕೊಂಡರೆ ಅವುಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ಸಂಪರ್ಕಿಸಿ:
📞 ಮುತ್ತುರಾಜ ಹಳ್ಳಿ: 9740656919 (ಅರಣ್ಯ ಇಲಾಖೆ)​

ಪರಿಸರ ಉಳಿಸಿ – ಜೀವ ಉಳಿಸಿ.

ವರದಿಗಾರರು: ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ