ಅಮರೇಶ ಹಾವಿನ್ ಅವರಿಗೆ ವಿಶೇಷವಾಗಿ ಮಕ್ಕಳ ಸಂರಕ್ಷಣೆ ಮತ್ತು ಹಕ್ಕುಗಳ ರಕ್ಷಣೆಗೆ ತಮ್ಮನ್ನು ತಾವು ಅರ್ಪಿಸಿಕೊಂಡು ಅಹೋರಾತ್ರಿ ಶ್ರಮಿಸಿದ ಸೇವೆಯನ್ನು ಗೌರವಿಸಿ, ಬೆಳಕು ಸಂಸ್ಥೆಯ 120ನೇ ಸಮ್ಮೇಳನದಲ್ಲಿ ರಾಜ್ಯ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಪ್ರಶಸ್ತಿಯ ಮೂಲಕ, ಸಮಾಜದಲ್ಲಿ ಹಿಂದುಳಿದ ಹಾಗೂ ಅನಾಥ ಮಕ್ಕಳಿಗೆ ಭರವಸೆಯ ಬೆಳಕಾಗಿ ನಿಂತ ಕಾರ್ಯವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಲಾಗಿದ್ದು, ಸೇವಾ ಮನೋಭಾವದಿಂದ ಶ್ರಮಿಸುತ್ತಿರುವವರಿಗೆ ಇದು ಮತ್ತಷ್ಟು ಪ್ರೇರಣೆಯಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು,
“ಮಕ್ಕಳ ಭವಿಷ್ಯವನ್ನು ರಕ್ಷಿಸುವುದು ಅಂದರೆ ಸಮಾಜದ ಭವಿಷ್ಯವನ್ನು ಕಾಪಾಡಿದಂತೆ. ಇಂತಹ ನಿಸ್ವಾರ್ಥ ಸೇವಕರು ಸಮಾಜಕ್ಕೆ ದಾರಿದೀಪರಾಗುತ್ತಾರೆ” ಎಂದು ಪ್ರಶಂಸಿಸಿದರು.
ಸಮ್ಮೇಳನದಲ್ಲಿ ಬೆಳಕು ಸಂಸ್ಥೆಯ ಅಧ್ಯಕ್ಷರು, ಗಣ್ಯ ಅತಿಥಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸೇವಾಭಿಮಾನಿಗಳು ಪಾಲ್ಗೊಂಡು ಪ್ರಶಸ್ತಿ ವಿಜೇತರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು.
ಮಕ್ಕಳ ನಗು – ಸಮಾಜದ ನಿಜವಾದ ಸಂಪತ್ತು.
ವರದಿ-ಆಂಜನಯ. ಮಟ್ಟೂರ
