Tuesday, May 26, 2026
Homeಕ್ರೈಂ ಸುದ್ದಿಗಳುಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್! ಹೆತ್ತವರಿಗೆ ಸುಳ್ಳು...

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್! ಹೆತ್ತವರಿಗೆ ಸುಳ್ಳು ಹೇಳಿದ್ದ ಕಾಲಿವುಡ್ ಕಥೆ

​ಕಲಬುರಗಿ: ನೀಟ್ (NEET) ಪರೀಕ್ಷೆ ಬರೆದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಕಲಬುರಗಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಪ್ರಕರಣದಲ್ಲಿ ಇದೀಗ ಯಾರಿಗೂ ಊಹಿಸಲಾಗದ ಆಘಾತಕಾರಿ ಸತ್ಯವೊಂದು ಬೆಳಕಿಗೆ ಬಂದಿದೆ. ವೈದ್ಯೆಯಾಗುವ ಕನಸು ಹೊತ್ತಿದ್ದ ಆಕೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೇ ಫೇಲ್ ಆಗಿದ್ದ ಬಿಗ್ ಟ್ವಿಸ್ಟ್ ಇದೀಗ ತನಿಖೆಯಲ್ಲಿ ಬಹಿರಂಗಗೊಂಡಿದೆ.

​ಮನೆಯವರಿಗೆ ಹೇಳಿದ್ದು 92% ಅಂಕ, ಆದ್ರೆ ಆಗಿದ್ದೇ ಬೇರೆ!
​ಹೆತ್ತವರ ನಂಬಿಸಿದ ಸುಳ್ಳು: ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ವಿದ್ಯಾರ್ಥಿನಿ ಭಾಗ್ಯಶ್ರೀ ತನಗೆ ಶೇ. 92 ರಷ್ಟು ಭರ್ಜರಿ ಅಂಕಗಳು ಬಂದಿವೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದಳು. ಮಗಳ ಮಾತನ್ನು ನಂಬಿದ ಹೆತ್ತವರು ಆಕೆಗೆ ನೀಟ್ ಪರೀಕ್ಷೆ ಬರೆಯಲು ಸಂಪೂರ್ಣ ಬೆಂಬಲ ನೀಡಿ ಕೋಚಿಂಗ್ ಕೊಡಿಸಿದ್ದರು. ಆಕೆ ಇತ್ತೀಚೆಗಷ್ಟೇ ನೀಟ್ ಪರೀಕ್ಷೆಯನ್ನು ಬರೆದಿದ್ದಳು.

​ಅಂಕಪಟ್ಟಿಯಲ್ಲಿ ಬಯಲಾಯ್ತು ಅಸಲಿ ಸತ್ಯ: ಆದರೆ ಪೊಲೀಸರ ತನಿಖೆ ವೇಳೆ ಸಿಕ್ಕ ಮಾರ್ಕ್ಸ್‌ಕಾರ್ಡ್ ನೋಡಿ ಪೋಷಕರು ಹಾಗೂ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಭಾಗ್ಯಶ್ರೀ ದ್ವಿತೀಯ ಪಿಯುಸಿಯ ಗಣಿತ (Mathematics) ಮತ್ತು ಭೌತಶಾಸ್ತ್ರ (Physics) ಪರೀಕ್ಷೆಯಲ್ಲಿ ಫೇಲ್ ಆಗಿದ್ದಳು!
​ಸಪ್ಲಿಮೆಂಟರಿಯಲ್ಲೂ ಸಿಗದ ಅದೃಷ್ಟ:
​ಫೇಲ್ ಆದ ಬಳಿಕ ಆಕೆ ಪಿಯುಸಿ ಪರೀಕ್ಷೆ-2 (ಮರು ಪರೀಕ್ಷೆ) ಬರೆದಿದ್ದಳು. ಭೌತಶಾಸ್ತ್ರದಲ್ಲಿ 51 ಅಂಕ ಪಡೆದು ಪಾಸ್ ಆಗಿದ್ದರೂ, ಗಣಿತದಲ್ಲಿ ಕಾಲೇಜಿನ 20 ಇಂಟರ್ನಲ್ ಅಂಕಗಳನ್ನು ಸೇರಿಸಿಯೂ ಕೇವಲ 24 ಅಂಕ ಪಡೆದು ಮತ್ತೆ ಅನುತ್ತೀರ್ಣಗೊಂಡಿದ್ದಳು.

​ಮೇ 21 ರಂದು ಈ ಮರು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ತಾನು ಫೇಲ್ ಆಗಿರುವ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ, ಅವರ ನಿರೀಕ್ಷೆ ಸುಳ್ಳಾಯಿತಲ್ಲ ಎಂಬ ತೀವ್ರ ಭಯ ಹಾಗೂ ಮುಖಭಂಗದಿಂದಲೇ ಮನನೊಂದು ಭಾಗ್ಯಶ್ರೀ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಳೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

​ಪೊಲೀಸ್ ತನಿಖೆ:
“ಮಗಳು ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಯಾರ ಮೇಲೂ ದೂರು ಇಲ್ಲ” ಎಂದು ಯುವತಿಯ ತಂದೆ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ವಿದ್ಯಾರ್ಥಿನಿಯ ಅಂಕಪಟ್ಟಿ ಕೈಸೇರುತ್ತಿದ್ದಂತೆ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದ್ದು, ಪರೀಕ್ಷೆಯ ಭಯದ ಕೋನದಲ್ಲೇ ತನಿಖೆ ಮುಂದುವರಿಸಿದ್ದಾರೆ.

​ವಿದ್ಯಾರ್ಥಿಗಳೇ ಗಮನಿಸಿ – ಪಿಯುಸಿ & ನೀಟ್ ನಿಯಮ ಏನ ಹೇಳುತ್ತೆ?
​ಮೆಡಿಕಲ್ ಸೀಟು ಪಡೆಯಲು ನೀಟ್ ರ‍್ಯಾಂಕ್ ಮುಖ್ಯ ನಿಜ. ಆದರೆ ನೀಟ್‌ನಲ್ಲಿ ಎಷ್ಟು ಅಂಕ ಪಡೆದರೂ ಪಿಯುಸಿ ಬೋರ್ಡ್ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಅಂಕಗಳನ್ನು ಪಡೆದು ಉತ್ತೀರ್ಣರಾಗುವುದು ಕಡ್ಡಾಯ (ಜನರಲ್ ಕೆಟಗರಿಗೆ 50%, ಎಸ್‌ಸಿ/ಎಸ್‌ಟಿ/ಒಬಿಸಿಗೆ 40%).

​ನಮ್ಮ ಮನವಿ: ಪರೀಕ್ಷೆಗಳು ಜೀವನದ ಒಂದು ಭಾಗವಷ್ಟೇ, ಇಡೀ ಜೀವನವೇ ಅಲ್ಲ. ಪೋಷಕರು ಕೂಡ ಮಕ್ಕಳ ಮೇಲೆ ಅತಿಯಾದ ಮಾರ್ಕ್ಸ್ ಒತ್ತಡ ಹೇರಬೇಡಿ, ಅವರೊಂದಿಗೆ ಮುಕ್ತವಾಗಿ ಮಾತನಾಡಿ.

ಹೆಚ್ಚಿನ ಸುದ್ದಿ