
ಬೈಲಹೊಂಗಲ: ಎಪ್ರಿಲ್ 10-ಬೈಲಹೊಂಗಲ ಶ್ರೀ ಬಸವೇಶ್ವರ ಆಶ್ರಯ ನಗರದ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ಮತ್ತು ನಗರ ಸಭೆಯ ಮಾಲಿಕತ್ವ ಹೊರತುಪಡಿಸಿ (Slum Board) ಕೊಳಚೆ ನಿರ್ಮುಲನಾ ಇಲಾಖೆಯಿಂದ ಕಂಪ್ಯೂಟರ್ (RTC) ಉತಾರ ನೀಡುವ ಕುರಿತು ಇವತ್ತಿನ ದಿನ ಮಾನ್ಯ ಶಾಸಕರಿಗೆ ಆಶ್ರಯ ನಗರದ ಎಲ್ಲ ನಿವಾಸಿಗಳ ಪರವಾಗಿ ಮನವಿ ಪತ್ರ ಸಲ್ಲಿಸಲಾಯಿತು ಹಾಗೂ ಆದಷ್ಟು ಬೇಗ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ತಿಳಿಸಲಾಯಿತು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಲಾಯಿತು. 15 ದಿನಗಳ ಗಡುವು ನೀಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಯಲ್ಲಪ್ಪ ತಿಮ್ಮಾಪೂರ ಮತ್ತು ಮಲ್ಲಿಕಾರ್ಜುನ ಬಾಜಿ, ಶಿವಾನಂದ ಆನಿಗೋಳ, ಮಹಾಂತೇಶ ಹಂಪಣ್ಣವರ, ಉಮೇಶ ಬಾಗೋಜಿ, ಬಸವರಾಜ ಅಂಕಲಗಿ, ಕುಮಾರ ಬಿರ್ಜಿ, ರಮೇಶ್ ಪತ್ತಾರ ಸೇರಿದಂತೆ ಬಸವೇಶ್ವರ ಆಶ್ರಯ ನಗರದ ನಿವಾಸಿಗಳು ಉಪಸ್ಥಿತರಿದ್ದರು.
ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆಯೇ,
ನಮ್ಮ ಪತ್ರಿಕೆ ವರದಿಗಾರರು ಆಗಬೇಕೆ
ನಮ್ಮನ್ನು ಸಂಪರ್ಕಿಸಿ -9035262956
