
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕ ಹಾಗೂ ಸುರಪುರ ತಾಲೂಕಿನಲ್ಲಿ ಬರುವ ಒಟ್ಟು 52 ತಾಂಡಗಳ ನಾಯಕ ಕಾರಬಾರಿ, ಹಾಗೂ ಎಲ್ಲಾ ಬಂಜಾರ ಸಮಾಜ ಬಾಂಧವರು ಹುಣಸಗಿ ತಾಂಡದಲ್ಲಿರುವ ಶ್ರೀ ಸಂತ ಸೇವಾಲಾಲ
ಜಗದಂಬ ದೇವಸ್ಥಾನದಲ್ಲಿ ಸಭೆಸೆರಲಾಯಿತು.
ಸಮುದಾಯದಲ್ಲಿ ವರದಕ್ಷಿಣೆ ಹಾವಳಿ ಅತಿ ಹೆಚ್ಚಾಗಿ ವರದಕ್ಷ ತೊಗೊಳೋದು ಮತ್ತು ಕೊಡುವುದು ಕಂಡು ಬರುತ್ತಿರುವದರಿಂದ ನಮ್ಮ ಸಮಾಜದ ಬಡ ಕುಟುಂಬದವರಿಗೆ ಹೆಚ್ಚಿನ ತೊಂದರೆ ಮತ್ತು ಜಮೀನು ಮಾರುವ ಪರಸ್ಥಿತಿ ಕಂಡು ಬರುತಿದ್ದು ಇದು ಒಂದು ಅಪರಾಧ ಎಂದು
ಬಂಜಾರ ಸಮಾಜದ ಮುಖಂಡರು ಹುಣಸಗಿ ತಾಂಡದಲ್ಲಿ ಸಭೆ ಸೇರಿದರು
ವರದಕ್ಷಿಣೆ ಕೊಡುವುದಾಗಲಿ ತೊಗೊಳೋದಾಗ್ಲಿ ಒಂದು ವೇಳೆ ಕಂಡು ಬಂದಲ್ಲಿ ಅಂತವರ ವಿರುದ್ಧ ನಮ್ಮ ಸಮಾಜ ಮತ್ತು ಊರಿನ ನಾಯಕರು ಸೇರಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಸಲ್ಲಿಸುವದಾಗಿ ಖಡಕ್ ಎಚ್ಚರಿಕೆ ನೀಡಿದರು.
ಇದೆ ವಿಚಾರಕ್ಕೆ ಬಹಳಷ್ಟು ಜನರು ವರದಕ್ಷಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕಂಡು ಬರುತ್ತದೆ.
ಇನ್ನು ಮುಂದೆ ಯಾವುದೇ ಅನಾಹುತ ಆಗದಂತೆ ಎಚ್ಚರವಹಿಸಿಕೊಂಡು
ಯಾರಾದರೂ ವರದಕ್ಷಣೆ ಕೇಳುವುದಾಗಲಿ ಕೊಡುವುದಾಗಲಿ
ಕಂಡು ಬಂದಲ್ಲಿ ಅಂತವರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ನಾಯಕರು ನಿರ್ಧಾರ ತಗೆದುಕೊಂಡರು.

ವಿಠಲ ಮಾಹಾರಜ ಲಾಲಗಡ ವಾಜಲ್ ತಾಂಡಾ, ಬಂಜಾರ ಸಂಘದ ಹುಣಸಗಿ ಅಧ್ಯಕ್ಷ ಶೇಖರ ನಾಯಕ, ಮಾಜಿ ಎಂ.ಎಲ್.ಸಿ ಮೋತಿಲಾಲ್, ಕೃಷ್ಣ ಜಾದವ, ಸೀತಾರಾಮ, ಚಂದು, ಬಾಬು ಚವ್ಹಾಣ, ವೆಂಕಟೇಶ್ ಸಾಹುಕಾರ, ಗುಂಡು, ಅಪ್ಪು ನಾಯಕ್, ಟೋಪಾ ನಾಯಕ ಬಸರಗಿದ ತಾಂಡಾ, ನಿಲ್ಲಾ ನಾಯಕ್ ಚಾಪಿತಾಂಡ, ತಿರುಪತಿ ಚವ್ಹಾಣ, ವಿಠಲ ಹುಣಸಗಿ ತಾಂಡಾ, ಬಾಲಚಂದ್ರ ಗಡ್ಡದ ತಾಂಡ, ಅಪ್ಪು ನಾಯಕ ಮಾವಿನಗಿದ ತಾಂಡಾ, ಬಾಬು ನಾಯಕ್ ರಾಜನಕೊಳೂರ ನಾಯಕ್, ಲಕ್ಷ್ಮಣ ಸಾಹುಕಾರ, ತಿರುಪತಿ ಮಾರನಾಳ ತಾಂಡಾ, ಜಯರಾಮ ಸುನಿಲ ಜಾದವ, ಸತೀಶ ಬಸರಗಿಡ ತಾಂಡಾ, ಗುಂಡು ರಾಜವಾಳ, ತಾರುಸಿಂಗ, ಹುಣಸಗಿ , ಕೃಷ್ಣ ಸೊನ್ನಾಪುರ, ಹಾಗೂ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಒಟ್ಟು 52 ತಾಂಡಗಳ, ನಾಯಕರು ಉಪಸ್ಥಿತರಿದ್ದರು,

ವರದಿ : ಶಿವು ರಾಠೋಡ.
