Monday, September 14, 2026
Homeಕ್ರೈಂ ಸುದ್ದಿಗಳುಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಹ*ತ್ಯೆ ಮಾಡಿದ ಲವರ್!

ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಹ*ತ್ಯೆ ಮಾಡಿದ ಲವರ್!

ಗದಗ ಜಿಲ್ಲೆ ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕನೋರ್ವನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಯ ಜಾಡು ಹಿಡಿದು ಬೆನ್ನತ್ತಿದ ಪೊಲೀಸರಿಗೆ ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 25 ವರ್ಷದ ಫಾರೂಕ್ ಸನದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಗೆ ಕಾರಣ ನಿಶ್ಚಿತಾರ್ಥ ಎಂದು ತಿಳಿದುಬಂದಿದೆ. ಫಾರೂಕ್ ಮೂರು ತಿಂಗಳ ಹಿಂದೆ ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಇದೇ ಕಾರಣಕ್ಕೆ ಫಾರೂಕ್ ನನ್ನು ಯುವತಿಯ ಪ್ರಿಯಕರ ದಾವಲಸಾಬ್ ತನ್ನ ಸ್ನೇಹಿತ ಮಕ್ಕಬೂಲ್ ಸಾಬ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾನೆ. ತನ್ನ ಪ್ರೇಯಸಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಷಯ ತಿಳಿದ ದಾವಲಸಾಬ್, ಮಾತನಾಡಬೇಕೆಂದು ಶಿಗ್ಲಿ ಗ್ರಾಮದ ಫಾರೂಕ್ ನನ್ನು ಜಮೀನಿಗೆ ಕರೆಯಿಸಿಕೊಂಡಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಕೋಪದಲ್ಲಿ ದಾವಲಸಾಬ್ ಕೊಡಲಿಯಿಂದ ಫಾರೂಕ್ ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. #gadag #Lakshmeshwar #viral #highlighteveryone #ಗದಗ #ಲಕ್ಷ್ಮೇಶ್ವರ #lovemarriage

ಹೆಚ್ಚಿನ ಸುದ್ದಿ