
ಗುರುಮಠಕಲ್: ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನವನ್ನು ನೀಡಬೇಕೆಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ಪೂಜಾರಿ ಎಂಪಡ್ ಅವರು ಆಗ್ರಹಿಸಿದ್ದಾರೆ.
ಸಮರ್ಥ ಆಡಳಿತ:ಸಚಿವರಾಗಿ ತಮಗೆ ವಹಿಸಿದ ಖಾತೆಗಳನ್ನು ಪ್ರಿಯಾಂಕ್ ಖರ್ಗೆ ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರತಿಪಕ್ಷಗಳಿಗೆ ಉತ್ತರ: ಸದನದಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಅಂಕಿಸಂಖ್ಯೆಗಳೊಂದಿಗೆ ಸೂಕ್ತ ಉತ್ತರ ನೀಡುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಚುನಾವಣಾ ಪಾತ್ರ:2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಆನಂದ ಪೂಜಾರಿ ತಿಳಿಸಿದ್ದಾರೆ.
ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ:
ಇದೇ ವೇಳೆ ಮಾತನಾಡಿದ ಒಬಿಸಿ ಬ್ಲಾಕ್ ಅಧ್ಯಕ್ಷ ಚನ್ನಬಸಪ್ಪ ಗಂಜರಕೋಟೆ, ಸ್ಥಳೀಯ ಶಾಸಕರ ವರ್ತನೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಮುತುವರ್ಜಿ ಮತ್ತು ಶ್ರಮದಿಂದ ಮಂಜೂರಾದ ‘ಹತ್ತಿಕುಣಿ ಅಭಿವೃದ್ಧಿ ಕಾಮಗಾರಿ’ಯನ್ನು ತಾವೇ ಮಾಡಿಸಿದ್ದಾಗಿ ಸ್ಥಳೀಯ ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶರಣಪ್ಪ ತಾತಳಗೇರಾ, ನರೇಶ ಮುದಿರಾಜ್, ನಾಗಪ್ಪ ಕೆ. ವಸಲಿ, ಹುಸೇನಪ್ಪ ಪುಲಿ ನಜರಾಪುರ, ಭೀಮಶಪ್ಪ ಶನಿವಾರಂ, ಕೃಷ್ಣಯ್ಯ, ಮಲ್ಲಿಕಾರ್ಜುನ ಮತ್ತು ಭೀಮಾಶಂಕರ್ ತಾತಳಗೇರ ಸೈಯದ ಕರಿಮ್,ಚನ್ನ ಬಸಪ್ಪ ಗಾಜರಕೋಟ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
