Sunday, July 26, 2026
Homeಕ್ರೈಂ ಸುದ್ದಿಗಳುಪೂಂಪುಹಾರ್‌ನ ಮತಗಟ್ಟೆಯಲ್ಲಿ ಹೆಡ್ ಕಾನ್‌ಸ್ಟೆಬಲ್‌ಗೆ ಚಾಕು ಇರಿತ, ಮಾಜಿ ಸೈನಿಕನ ಬಂಧನ

ಪೂಂಪುಹಾರ್‌ನ ಮತಗಟ್ಟೆಯಲ್ಲಿ ಹೆಡ್ ಕಾನ್‌ಸ್ಟೆಬಲ್‌ಗೆ ಚಾಕು ಇರಿತ, ಮಾಜಿ ಸೈನಿಕನ ಬಂಧನ

ಮೈಲಾದುತುರೈ ಜಿಲ್ಲೆಯ ಪೂಂಪುಹಾರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಳಗೆ ಚುನಾವಣಾ ಭದ್ರತಾ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್‌ ಮೇಲೆ ನಿವೃತ್ತ ಸೈನಿಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.

ಮೈಲಾದುತುರೈ: ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಭಾರತದ ನಂತರ ಇದೇ ಮೊದಲ ಬಾರಿಗೆ ಶೇ. 84.51 ರಷ್ಟು ದಾಖಲೆ ಮಟ್ಟದ ಮತದಾನವಾಗಿದೆ. ಈ ಮಧ್ಯೆ ರಾಜ್ಯದ ಹಲವಡೆ ಕೆಲ ಅಹಿತಕರ ಘಟನೆ ವರದಿಯಾಗಿದೆ.

ಮೈಲಾದುತುರೈ ಜಿಲ್ಲೆಯ ಪೂಂಪುಹಾರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಳಗೆ ಚುನಾವಣಾ ಭದ್ರತಾ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್‌ ಮೇಲೆ ನಿವೃತ್ತ ಸೈನಿಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.

ಪೊರಾಯರ್‌ನ ಜಮಾಲಿಯಾ ಅನುದಾನಿತ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 324 ರಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಕಟ್ಟುಚೇರಿಯ ನಿವೃತ್ತ ಸೇನಾ ಸಿಬ್ಬಂದಿ ಪ್ರಭಾಕರನ್ ಎಂದು ಗುರುತಿಸಲಾಗಿದೆ. ಈತ ಕುತಾಲಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿರುವ ವಿಘ್ನೇಶ್‌ಗೆ ಚಾಕುವಿನಿಂದ ಇರಿದಿದ್ದಾನೆ.

ವಿಘ್ನೇಶ್ ಮತಗಟ್ಟೆಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದಾಗ ಪ್ರಭಾಕರನ್ ತನ್ನೊಂದಿಗೆ ತಂದಿದ್ದ ಸ್ಕ್ರೂ ಡ್ರೈವರ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ವಿಘ್ನೇಶ್ ಅವರ ಕುತ್ತಿಗೆ ಮತ್ತು ಎರಡೂ ಕೈಗಳಿಗೆ ಗಾಯಗಳಾಗಿವೆ.

ಕೂಡಲೇ ಅವರನ್ನು ಪೊರಾಯರ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರ ಆರೋಗ್ಯ ಪರಿಸ್ಥಿತಿ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊರಾಯರ್ ಪೊಲೀಸರು ಪ್ರಭಾಕರನ್ ಅವರನ್ನು ಬಂಧಿಸಿದ್ದು ತನಿಖೆಯನ್ನು ಆರಂಭಿಸಿದ್ದಾರೆ. ಆರೋಪಿ ಪೊಲೀಸ್ ಸಿಬ್ಬಂದಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಈ ಹಿಂದೆಯೂ ಇದೇ ರೀತಿಯ ಘಟನೆಯಲ್ಲಿ ಭಾಗಿಯಾಗಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ.

ಹೆಚ್ಚಿನ ಸುದ್ದಿ