Tuesday, August 11, 2026
Homeಕ್ರೈಂ ಸುದ್ದಿಗಳುಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ; ಸ್ನೇಹಿತನ ಜೊತೆ ಸೇರಿ ವ್ಯಕ್ತಿಯನ್ನೇ ಮುಗಿಸಿದ ಪತಿ!

ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ; ಸ್ನೇಹಿತನ ಜೊತೆ ಸೇರಿ ವ್ಯಕ್ತಿಯನ್ನೇ ಮುಗಿಸಿದ ಪತಿ!

ಅನೈತಿಕ ಸಂಬಂಧದ ವಿಚಾರವಾಗಿ ಉಂಟಾದ ವೈಮನಸ್ಸು ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಟ್ಟಣದಲ್ಲಿ ನಡೆದಿದೆ.

ಸಂಕೇಶ್ವರ ನಿವಾಸಿ ಬಾಬು ಭೂಸಗೋಳ (35) ಕೊಲೆಯಾದ ವ್ಯಕ್ತಿ. ಮೃತ ವ್ಯಕ್ತಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಮಹಿಳೆಯ ಪತಿ ಹಾಗೂ ಆತನ ಸ್ನೇಹಿತ ಸೇರಿ ಹತ್ಯೆ ನಡೆಸಿರುವ ಆರೋಪ ಕೇಳಿಬಂದಿದೆ.

ಆರೋಪಿಗಳು ಬಾಬು ಮೇಲೆ ದಾಳಿ ನಡೆಸಿ, ತಲೆಗೆ ಕಲ್ಲಿನಿಂದ ಹೊಡೆದು ಬಳಿಕ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆಯ ಹಿಂದೆ ಅನೈತಿಕ ಸಂಬಂಧದ ಜೊತೆಗೆ ವೈಯಕ್ತಿಕ ದ್ವೇಷವೂ ಕಾರಣವಾಗಿರಬಹುದು ಎಂ
ದು ಪೊಲೀಸರು ಶಂಕಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಂಕೇಶ್ವರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹೆಚ್ಚಿನ ಸುದ್ದಿ