ಬೆಂಗಳೂರು: ಒಕ್ಕಲಿಗ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಸಾಫ್ಟ್ವೇರ್ ಎಂಜಿನಿಯರ್ ಯುವತಿಗೆ, ವ್ಯಕ್ತಿಯೊಬ್ಬ ಮದುವೆ ಹೆಸರಲ್ಲಿ ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ್ದಾನೆ.
ಈ ಘಟನೆಯು ಮುಖ್ಯ ಆರೋಪಿ ಬೆಂಗಳೂರಿನ ಕೆಂಗೇರಿ ಮೂಲದ ವಿಜಯ್ ರಾಜ್ ಗೌಡ ಎಂಬಾತನೇ ವಂಚನೆ ಎಸಗಿದ ಆಸಾಮಿ..
ಈತನು ತನ್ನ ಪರಿಚಯವನ್ನು ಈ ರೀತಿ ಹೇಳಿಕೊಂಡಿದ್ದ ನಾನು ವಿಜಯ್ ರಾಜ್ ಗೌಡ ತಾನೊಬ್ಬ ಕೋಟ್ಯಾಧೀಶ, 715 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಪರಿಚಯಿಸಿಕೊಂಡಿದ್ದ. ಇಬ್ಬರು ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಎಂದು ನಂಬಿಸಿ ಯುವತಿ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿದ್ದ. ಮದುವೆ ಮಾತುಕತೆ ಎಂದು ಸಂತ್ರಸ್ತೆ ಯುವತಿಯನ್ನು ಕೆಂಗೇರಿಗೆ ಕರೆಸಿದ್ದ ಆಸಾಮಿ,
ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ. ತಂದೆ ತಹಶೀಲ್ದಾರ್ ಎಂದಿದ್ದ. ಇಷ್ಟೆಲ್ಲಾ ಕಥೆ ಕಟ್ಟಿ ಕೋರ್ಟ್ ಕೇಸ್ ಇದೆ ಎಂದು ಮತ್ತಷ್ಟು ಹಣ ವಸೂಲಿ ಮಾಡಿದ್ದ ಎಂಬ ಆರೋಪ ಇದೆ.. ಯುವತಿ ನೆಂಟರು, ಸ್ನೇಹಿತರು ಸೇರಿ ಹಲವರಿಂದ 1.72 ಕೋಟಿ ರೂ. ಹಣ ಪಡೆದಿದು ವಂಚಿಸಿದ್ದಾನೆ ಅಂತ ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ…
