Thursday, March 26, 2026
Homeಟಾಪ್ ನ್ಯೂಸ್ಪಡಿತರ ವಿತರಣೆಯ ಸಂದರ್ಭದಲ್ಲಿ ಲೋಪವಾದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ವಹಿಸಲಾಗುವುದು:- ಆಹಾರ...

ಪಡಿತರ ವಿತರಣೆಯ ಸಂದರ್ಭದಲ್ಲಿ ಲೋಪವಾದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ವಹಿಸಲಾಗುವುದು:- ಆಹಾರ ಸಚಿವ ಕೆಹೆಚ್. ಮುನಿಯಪ್ಪ

ವಿಧಾನ ಸೌಧ: ಜ. 07 : ರಾಜ್ಯ ಮಟ್ಟದ ಜಾಗೃತಿ ಸಮಿತಿಯ ಎರಡನೇ ಸಭೆಯನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ನಡೆಯಿತು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಯಾದ ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗೆ ಅನುಕೂಲಕರವಾಗಿದ್ದು ಯಾವಬ್ಬ ವ್ಯಕ್ತಿಯು ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಅನುಷ್ಠಾನ ವಾಗಿದೆ.

ಇದರ ದುರುಪಯೋಗವನ್ನು ಸರಿಪಡಿಸಲು ರಾಜ್ಯ ಮಟ್ಟದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ರಡಿ 4 ಹಂತಗಳಲ್ಲಿ ಜಾಗೃತಿ ಸಮಿತಿ ರಚಿಸಿದ್ದು ರಾಜ್ಯ ಮಟ್ಟದ ಜಾಗೃತಿ ಸಮಿತಿ ,ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ತಾಲ್ಲೂಕು‌ಮಟ್ಟದ ಜಾಗೃತಿ ಸಮಿತಿ ,ಹಾಗೂ ನ್ಯಾಯ ಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿ ರಚಿಸಿದ್ದು ಇಂದು ನಡೆದ ಸಭೆಯಲ್ಲಿ

ರಾಜ್ಯ ಮಟ್ಟದ ಜಾಗೃತಿ ಸಮಿತಿಯಲ್ಲಿ ಹಿರಿಯ ಅಧಿಕಾರಿಗಳು ತಜ್ಞರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಸದಸ್ಯರಾಗಿದ್ದು
ಆಹಾರ ಧಾನ್ಯಗಳ ಖರೀದಿ ಸಂಗ್ರಹವಿತರಣಾ ಪ್ರಕ್ರಿಯೆ, ಗೊದಾಮು ,ನ್ಯಾಯಬೆಲೆ ಅಂಗಡಿಗಳ ಪರಿಶೀಲನೆ ಇ ಪೋಸ್ ಯಂತ್ರಗಳ ಬಳಕೆ,ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪಡಿತರ ವಿತರಣೆ ಬಗ್ಗೆ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಒಗ್ಗೂಡಿ ಸರ್ಕಾರಕ್ಕೆ ಉತ್ತಮ ಹೆಸರು ತರವಲ್ಲಿ ಕಾರ್ಯನಿರ್ವಹಿಸಲು ಸಚಿವರು ಸೂಚಿಸಿದರು

ಸಭೆಯಲ್ಲಿ ಸಮಿತಿ ಸದಸ್ಯರಾದ ಶಾಸಕ ಇಕ್ಬಾಲ್ ಹುಸೇನ್, ಬಸವಣ್ಣ ಗೌಡ ಬಾದರ್ಲಿ, ನಾರಾಯಣ ಸ್ವಾಮಿ, ಭೀಮಣ್ಣ ತಂದೆ ಮಹಾದೇವಪ್ಪ,ಮೋಹನ್ ಕುಮಾರ್ ದಾನಪ್ಪ, ಪುಷ್ಪ,ವಾಣಿ ಸಗರ್ ಕರ್, ಆಯುಕ್ತರಾದ ರವಿಕುಮಾರ್, ನಿಗಮ ನಿರ್ದೇಶಕರಾದ ಜಗದೀಶ್,ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸಮಣಿ,ಸಚಿವರ ಕಾರ್ಯದರ್ಶಿ ಡಾ.ಹೆಚ್.ನಟರಾಜ್,ಕಾನೂನು ಮಾಪನ ನಿಯಂತ್ರಕರಾದ ಎಂ.ಎಸ್.ಎನ್ ಬಾಬು,ಆಹಾರ ಆಯೋಗದ ಅಧ್ಯಕ್ಷರಾದ ಡಾ.ಕೃಷ್ಣ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ