ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಮ್ಮ ಕರ್ನಾಟಕ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಸವರಾಜ್ ಎಮ್ ಪಡುಕೋಟೆ ಅವರ ಮಾರ್ಗದರ್ಶನದ ಮೇರೆಗೆ ಸುರಪುರ ತಾಲೂಕು ಅಧ್ಯಕ್ಷ ವೆಂಕಟೇಶ ಪ್ಯಾಪ್ಲಿ ನೇತೃತ್ವದಲ್ಲಿ ನಮ್ಮ ಕರ್ನಾಟಕ ಸೇನೆಯ ಸುರಪುರ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷ – ನಾಗರಾಜ್ ಯಾದವ್
ಅಧ್ಯಕ್ಷ. – ರಾಕೇಶ್ ಉಪ್ಪಾರ
ಉಪಾಧ್ಯಕ್ಷ -ವೇಣುಗೋಪಾಲ ಪ್ಯಾಪ್ಲಿ
ಪ್ರಧಾನ ಕಾರ್ಯದರ್ಶಿ – ಶ್ರೇಯಸ್
ಸಹ ಕಾರ್ಯದರ್ಶಿ – ಸಿದ್ದು ನಾಯ್ಕೋಡಿ
ಸಂಘಟನಾ ಕಾರ್ಯದರ್ಶಿ – ಶಂಕರ್ ಪ್ಯಾಪ್ಲಿ
ಖಜಾಂಚಿ – ದೇವಪ್ಪ ಸಿದ್ಧಾಪುರ
ಸದಸ್ಯರಾಗಿ – ಬಾಲರಾಜ್ ಬೋಸ್ಗಿ
ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನಾ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸೇನೆಯ ತಾಲೂಕು ಅಧ್ಯಕ್ಷ ವೆಂಕಟೇಶ ಪ್ಯಾಪ್ಲಿ ಆಯ್ಕೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಕರ್ನಾಟಕ ಸೇನೆಯ ತತ್ವ ಸಿದ್ಧಾಂತಗಳಿಗೆ ಬದ್ದರಾಗಿರ ಬೇಕು, ನಾಡು ನುಡಿ,ನೆಲ,ಜಲ,ರೈತಪರ,
ವಿದ್ಯಾರ್ಥಿಪರ, ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡಲು ತಾವೆಲ್ಲರೂ ಸಿದ್ದರಾಗಿರ ಬೇಕು ಎಂದರು
ನೂತನ ಪದಾಧಿಕಾರಿಗಳಿಗೆ ಶಾಲು,ಹಾರ ಹಾಕಿ ಸನ್ಮಾನ ಮಾಡಿದರು.
*ವರದಿ : ಮೌನೇಶ ಆರ್ ಭೋಯಿ*

