Tuesday, August 25, 2026
Homeಆಧ್ಯಾತ್ಮತೋಟದ ಹುನಗುಂದದಲ್ಲಿ ಬಸವಣ್ಣದೇವರ ನೂತನ ಕಳಸಾರೋಹಣ ಪ್ರತಿಷ್ಠಾಪನೆ……

ತೋಟದ ಹುನಗುಂದದಲ್ಲಿ ಬಸವಣ್ಣದೇವರ ನೂತನ ಕಳಸಾರೋಹಣ ಪ್ರತಿಷ್ಠಾಪನೆ……

ಶಿಗ್ಗಾಂವಿ: ತಾಲೂಕಿನ ತೋಟದ ಹುನಗುಂದ ಗ್ರಾಮದಲ್ಲಿ ಶ್ರೀ ಬಸವಣ್ಣದೇವರ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಆ.25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆ ಸಲಾಯಿತು.
ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀ ಬಸವಣ್ಣದೇವರ ದೇವಸ್ಥಾನದ ಕಳಸಾರೋಹಣ ಶ್ರೀ ಮ ಘ ಚ್ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಂದ ನೆರವೇರಿತು. ಶ್ರೀ ವೀರಭದ್ರದೇವರ ಗಗ್ಗಳಕಾರ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಠಾಧೀಶರು, ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿಗಾರರು: ಮಹೇಶ ಗಂಟೆಪ್ಪನವರ

ಹೆಚ್ಚಿನ ಸುದ್ದಿ