Thursday, April 16, 2026
Homeಅಂತರರಾಜ್ಯತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಳo ಪೊಲೀಸ್ ಠಾಣೆ ಲಾಕಪ್ ಡೆತ್ ಪ್ರಕರಣದಲ್ಲಿ ಒಂಬತ್ತು  ಪೊಲೀಸರನ್ನು ಗಲ್ಲಿಗೇರಿಸಲು...

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಳo ಪೊಲೀಸ್ ಠಾಣೆ ಲಾಕಪ್ ಡೆತ್ ಪ್ರಕರಣದಲ್ಲಿ ಒಂಬತ್ತು  ಪೊಲೀಸರನ್ನು ಗಲ್ಲಿಗೇರಿಸಲು ಕಾರಣರಾದ ಪ್ರಮುಖ ಸಾಕ್ಷಿ ಹೆಡ್ ಕಾನ್ಸ್ಟೇಬಲ್ ರೇವತಿ ….!

ಮಧುರೈ: ಒಂದು ಪ್ರಕರಣದಲ್ಲಿ ಸಾಕ್ಷಿಯೊಬ್ಬರು ವ್ಯವಸ್ಥೆಗಿಂತ ಹೇಗೆ ದೊಡ್ಡವರಾಗಬಹುದು ಎಂಬುದಕ್ಕೆ ಅದ್ಭುತ ಉದಾಹರಣೆ, ತಮಿಳುನಾಡಿನಲ್ಲಿ ನಡೆದ ಲಾಕಪ್ ಡೆತ್  ದೇಶವನ್ನೇ ಬೆಚ್ಚಿಬೀಳಿಸಿತ್ತು. ಆದರೆ ಈ ದೌರ್ಜನ್ಯ ಬೆಳಕಿಗೆ ಬರಲು ಕಾರಣ ಮಹಿಳಾ ಆರಕ್ಷಕರಾದ ರೇವತಿಯವರು.

ಘಟನೆಯ ನಂತರ ಠಾಣೆಯಲ್ಲಿ ನಡೆದ ಪರಿಸ್ಥಿತಿಯೆಂದರೆ, ನಡೆದ ಘಟನೆ ಹೊರಬರದಂತೆ ನೋಡಿಕೊಳ್ಳಲು ಹೆಚ್ಚು ಒತ್ತಡವಿತ್ತು. ಸಾಕ್ಷ್ಯಗಳನ್ನು ಅಳಿಸಬೇಕು, ಸಂಪೂರ್ಣ ಕಥೆಯನ್ನು ಬದಲಾಯಿಸಬೇಕು ಎಂಬುದು ಇವು ಮುಖ್ಯ ಗುರಿಗಳಾದವು. ಇಂತಹ ಸಮಯದಲ್ಲಿ,  ಬಹುತೇಕ ಪೊಲೀಸ್ ಅಧಿಕಾರಿಗಳು ಮೌನವಾಗಿರುವುದು ಸುರಕ್ಷಿತವೆಂದು ಪರಿಗಣಿಸುತ್ತಾರೆ. 

ಆದರೇ ರೇವತಿ ಆ ಆಯ್ಕೆಯನ್ನು ತೆಗೆದುಕೊಳ್ಳಲಿಲ್ಲ.  ಆಕೆಗೆ ಅದು ಕೇವಲ ಕರ್ತವ್ಯದ ವಿಷಯವಾಗಿರಲಿಲ್ಲ . ತನ್ನ ಕಣ್ಣೆದುರೇ ನಡೆದ ದೌರ್ಜನ್ಯಕ್ಕೆ ಪ್ರತಿಭಟಿಸುವ ಧೈರ್ಯ ಇತ್ತು. ಒಂದು ಕಡೆ ಸಹ ಸಿಬ್ಬಂದಿ ಮತ್ತೊಂದೆಡೆ ಉನ್ನತ ಅಧಿಕಾರಿಗಳ ಒತ್ತಡ ಅಂತಹ ಪರಿಸ್ಥಿತಿಯಲ್ಲಿ ವ್ಯವಸ್ಥೆಯ ವಿರುದ್ಧ ನಿಲ್ಲುವುದು ಸಣ್ಣ ವಿಷಯವಲ್ಲ, ಆದರೂ ಆಕೆ ಹಿಂದೆ ಸರಿಯಲಿಲ್ಲ. ನ್ಯಾಯಧೀಶರ ಮುಂದೆ ಆಕೆಯ ಹೇಳಿಕೆ ಎಲ್ಲವೂ ಆ ಪ್ರಕರಣದ ದಿಕ್ಕನ್ನು ಬದಲಾಯಿಸಿತು. ಅದು ಕೇವಲ ಹೇಳಿಕೆಯಾಗಿರಲಿಲ್ಲ… ಆ ಕರಾಳ ರಾತ್ರಿ ನಡೆದ ಭಯಾನಕ ಕೃತ್ಯದ  ಸ್ಪಷ್ಟ ಚಿತ್ರಣವಾಗಿತ್ತು.

ಪೊಲೀಸರು ಠಾಣೆಯನ್ನು ಸ್ವಚ್ಛಗೊಳಿಸಿ ಸಾಕ್ಷ್ಯಗಳನ್ನು ಅಳಿಸಿ ಹಾಕಿದ್ದರೂ, ಗೋಡೆಗಳ ಮೂಲೆಗಳಲ್ಲಿ ಮತ್ತು ಮೇಜುಗಳ ಕೆಳಗೆ ಉಳಿದಿದ್ದ ರಕ್ತದ ಕಲೆಗಳನ್ನು ಆಕೆ ಚತುರತೆಯಿಂದ ಗುರುತಿಸಿ ನ್ಯಾಯಧೀಶರಿಗೆ ತೋರಿಸಿದ್ದು. ಆ ರಕ್ತದ ಕಲೆಗಳು ಆರೋಪಿಗಳ ಅಪರಾಧವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಸಿಸಿಟಿವಿ ದೃಶ್ಯಾವಳಿಗಳು ನಾಶಮಾಡಿದ್ದರೂ, ಆಕೆಗೆ ನೆನಪಿರುವ  ಘಟನೆಗಳ ಸಮಯವನ್ನು ಒಟ್ಟುಗೂಡಿಸಿ, ತನಿಖೆಗೆ ದಿಕ್ಸೂಚಿಯಾಗಿದ್ದು. ಇದು ಸಾಮಾನ್ಯ ವಿಷಯವಲ್ಲ. ಒಂದೇ ಇಲಾಖೆಯ ತನ್ನ ಸಹ ಉದ್ಯೋಗಿಗಳ  ವಿರುದ್ಧ ಸತ್ಯವನ್ನು ಹೇಳುವುದು ಬಹಳ ದೊಡ್ಡ ನಿರ್ಧಾರವಾಗಿತ್ತು. ಆದರೆ ಆಕೆ ಹಿಂದೆ ಸರಿಯಲಿಲ್ಲ.ರೇವತಿ ಹೇಳಿದ ಮಾತಿನ ಆಧಾರದ ಮೇಲೆ ಪ್ರಕರಣವನ್ನು ಬಲಪಡಿಸಲಾಯಿತು. ನ್ಯಾಯಾಲಯವು ಆಕೆಯ ಸುರಕ್ಷತೆಯ ಮೇಲೆಯೂ ಗಮನಹರಿಸಿ ವಿಶೇಷ ರಕ್ಷಣೆ ನೀಡಿತು.

ಸಾತoಕುಳo ಪ್ರಕರಣದಲ್ಲಿ ನ್ಯಾಯ ಸಿಗಲು ಹಲವು ಕಾರಣಗಳಿರಬಹುದು.ಆದರೆ ಸತ್ಯ ಹೊರಬರಲು ಕಾರಣವಾದ ಒಂದೇ ಒಂದು ಹೆಸರು  – ರೇವತಿ.
ಬಹುಶಃ ಭಾರತದ ಇತಿಹಾಸದಲ್ಲಿ ಇಷ್ಟೊಂದು ಪೊಲೀಸರಿಗೆ ಮರಣದಂಡನೆ ವಿಧಿಸಲಾಗಿರುವ ವಿಶೇಷ ಪ್ರಕರಣ ಇದು! ವಿಶ್ವದಲ್ಲೇ ಮೊದಲನೆಯದು ಎಂಬುದು ಆಶ್ಚರ್ಯವೇನಿಲ್ಲ.

ಬಡವರಿಗೆ ಬದುಕುವ ಹಕ್ಕಿಲ್ಲ ಎಂಬಂತೆ ವರ್ತಿಸುವ ಪೊಲೀಸರಿಗೆ  ಇದು ಒಂದು ದೊಡ್ಡ ಎಚ್ಚರಿಕೆ ಗಂಟೆ.
ಮಧುರೈ ಸೆಷನ್ಸ್ ನ್ಯಾಯಾಲಯದ ತೀರ್ಪು ಮರುಭೂಮಿಯಲ್ಲಿ ಒಂದು ಓಯಸಿಸ್ ಆಗಿದೆ. ಉನ್ನತ ನ್ಯಾಯಾಲಯಗಳು ಸಹ ಈ ತೀರ್ಪನ್ನು ಬಲಪಡಿಸಲಿ…

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)


ನಮ್ಮ ಸುದ್ದಿ ಚಾನಲ್ ಗೆ ವರದಿಗಾರರು ಬೇಕಾಗಿದ್ದಾರೆ, ಆಸಕ್ತಿ ಇರುವವರು ನಮ್ಮನ್ನು ಸಂಪರ್ಕಿಸಿ ಮೊಬೈಲ್ ನಂಬರ್ -9035262956

ಹೆಚ್ಚಿನ ಸುದ್ದಿ