Tuesday, April 7, 2026
HomeUncategorizedಡಾ. ಬಾಬು ಜಗಜೀವನರಾಮ್ ಅವರ ಸಮಾನತೆಯ ಸಂದೇಶ ಪಾಲಿಸಲಿ: ಡಾ. ದಿಲೀಷ್ ಶಶಿ

ಡಾ. ಬಾಬು ಜಗಜೀವನರಾಮ್ ಅವರ ಸಮಾನತೆಯ ಸಂದೇಶ ಪಾಲಿಸಲಿ: ಡಾ. ದಿಲೀಷ್ ಶಶಿ

ಕಾರವಾರ, ಏ.05 – ದೇಶ ಕಂಡ ಹೋರಾಟದಲ್ಲಿ ಹಲವಾರು ಸೂಪರ್ ಹೀರೋ ಕಾಣುತ್ತೇವೆ ಅದರಲ್ಲಿ ಒಬ್ಬರ ಬಾಬು ಜಗಜೀವನರಾಮ್ ಅವರ ಜೀವನ ಸಂದೇಶ ಸಾಧನೆ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಧಿಕಾರಿ ದಿಲೀಪ್ ಶಶಿ ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟೊಂದು ಅಸಮಾನತೆಗಳ ವಿರುದ್ಧ ಹೋರಾಟ ಮಾಡಿ ಉಪ ಪ್ರಧಾನೀ ಸ್ಥಾನದವರೆಗೂ ಮುನ್ನೆಡೆದವರು. ಸಮಾಜದಕ್ಕೆ ಅವರ ಅಧಿಕಾರಾವಧಿಯಲ್ಲಿ ಮಾಡಿದ ಹಕ್ಕು ಸೌಲಭ್ಯಗಳು ಇನ್ನೂವರೆಗೂ ಮುಂದುವರೆಯುತ್ತಿದೆ. ಅಧಿಕಾರಿಗಳು ಸಹ ಇದನ್ನು ಮುನ್ನಡೆಸಿಕೊಂಡು ಕಾನೂನಾತ್ಮಕವಾಗಿ ಸಮಾನತೆ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಬಾಬು ಜಗಜೀವನರಾಮ್ ಅವರ ಕುರಿತು ಉಪನ್ಯಾಸ ನೀಡಿದ ನಿವೃತ್ತಿ ಪ್ರಾಚಾರ್ಯ ಮನೋಜ್ ಬಾಬು ಜಗಜೀವನರಾಮ್ ಅವರು ಸ್ವಾತಂತ್ರ್ಯ ಹೋರಾಟ ದಿಂದ ಹಿಡಿದು ಕೊನೆಯ ಉಸಿರಿನ ವರೆಗೂ ಭಾರತಕ್ಕಾಗಿ ಸಮಾಜ ಉದ್ಧಾರಕ್ಕಾಗಿ ಶ್ರಮಿಸಿದವರು. ದೇಶ ಕಂಡ ಗಣ್ಯಾತಿ ಗಣ್ಯ ರಲ್ಲಿ ಒಬ್ಬರಾದವರು. ತಮ್ಮ ಜೀವನದ ಕಹಿ ನೇರಳೆ ಅವರನ್ನ ಉಪ ಪ್ರಧಾನಿ ಸ್ಥಾನದ ವರೆಗೂ ಮುಂದುವರೆಸಿಕೊಂಡು ಹೊಯಿತು ಎಂದರು.

ಉನ್ನತ ಶಿಕ್ಷಣಕ್ಕಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಹೋದಾಗ ಅಲ್ಲಿ ಅವರ ಮೇಲೆ ನಡೆದ ಕಹಿ ಘಟನೆ,ತಾರತಮ್ಯ, ಜಾತಿ ಬೇದಭಾವ, ಕೌರ್ಯ ಅನುಭವವೇ ಅವರನ್ನ ಸ್ವತಂತ್ರ ಹೋರಾಟ ಹಾಗೂ ಸಮಾಜ ಸುಧಾರಣೆಯತ್ತ ಸಾಗುವಂತ್ತಾಯಿತು.

ದೇಶದ ಪ್ರಗತಿಯೇ ನಮ್ಮ ಪ್ರಗತಿ, ದೇಶದ ಉದ್ಧಾರವೇ ನಮ್ಮ ಉದ್ಧಾರ, ದೇಶದ ವಿಮೋಚನವೇ ನಮ್ಮ ವಿಮೋಚನೆ ಎಂದವರೇ ಬಾಬು ಜಗಜೀವನರಾಮರು.

ಈ ದೇಶ ಅಭಿವೃದ್ಧಿಗೆ ಹೋರಾಟದಲ್ಲಿ ಬಾಬುಜೀ ಒಬ್ಬರು. ತಮ್ಮ ಹೋರಾಟ ಹಾಗೂ ವ್ಯಕ್ತಿತ್ವದಿಂದ 50 ವರ್ಷಗಳ ಕಾಲ ಜನರ ಮನದಲ್ಲಿ ಅಚ್ಚೆಯ ಹಾಗೆ ಉಳಿದವರೇ ಬಾಬು ಜಗಜೀವನರಾಮ್ 21 ನೇ ಶತಮಾನದ 20 ವರ್ಷದ ಈಚೆಗೆ ನೋಡಿದ್ರೆ ಭಾರತ ದೇಶ ಸಾಮಾಜಿಕತೆ, ಧಾರ್ಮಿಕ ಪರಿವರ್ತನೆಗೊಂಡ ದೇಶವಾಗಿದೆ. ಜಗಜೀವನರಾಮ್ ಎಂದ್ರೆನೇ ಒಂದು ಶಕ್ತಿ ಹೋರಾಟ ದೇಶದ ಅಭಿರುದ್ಧಿ ಪಡಿಸಿದ ಮಂತ್ರಿ ಸಂಸದ ಹಾಗೂ ರಾಷ್ಟೀಯ ವ್ಯಕ್ತಿ. 119 ವರ್ಷಗಳ ಕಾಲ ಅವರನ್ನ ನೆನಪಿಸಿಕೊಳ್ಳುತ್ತಿದ್ದೇವೆ. ದೇಶ ಕಂಡ ಒಬ್ಬ ಮಹಾನ್ ಪುರುಷರು ಎಂದರು.

ದಲಿತ ಸಂಘಟನೆ ಮುಖಂಡ ದೀಪಕ್ ಕುಡಾಳಕರ್, ಬಿಹಾರದ ಚಮ್ಮಾರ ಜಾತಿಯಲ್ಲಿ 1908 ಜನಿಸಿದ ಡಾ. ಬಾಬಾ ಜಗಜೀವನರಾಮ್. ಕೀಳುತನ ಅಸ್ಪೃಶ್ಯತೆಯಿಂದ ಉನ್ನತ ಶಿಕ್ಷಣ ಪಡೆದು ರಾಷ್ಟ್ರೀಯ ನಾಯಕ, ಮಂತ್ರಿ, ಹಾಗೂ ಹಸಿರು ಹರಿಕಾರದ ನಾಯಕ ಹಾಗೇ ಮುನುಷ್ಯನ ಎರಡು ಕಣ್ಣಿನಲ್ಲಿ ಒಬ್ಬರು ಅಂಬೇಡ್ಕರ್ ಆದ್ರೆ ಇನ್ನೊಂದು ಬಾಬು ಜಗಜೀವನರಾಮ್ ಎಂಬ ಮಾತನ್ನು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಅಲ್ಲಾ ಭಕಷ್ ಮಾತನಾಡಿ ಬಾಬು ಜಗಜೀವನರಾಮ್ ಅವರು ಚಿಕ್ಕವಯಸ್ಸಿನಿಂದಲೂ ಕ್ರಾಂತಿಕಾರಿಯಾದವರು. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮೌಲ್ಯ ಬರುತ್ತದೆ ಎಂದರು.
1956 ರಲ್ಲಿ ಕಾರ್ಮಿಕರ ಕಾಯ್ದೆ ಜಾರಿ ಹಾಗೂ ಹಸಿರು ಕ್ರಾಂತಿ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಿಸಿದರು.
ಏಷ್ಯಾ ಖಂಡದ ಹಾಗೂ ಭಾರತದ ದೇಶದ ಕಾರ್ಮಿಕ ಸಂಘಟನೆ ಮೊದಲ ಅಧ್ಯಕ್ಷರಾಗಿದ್ದರು. ರೈಲ್ವೆ ಇಲಾಖೆಯ ಎಸ್ಸಿ ಎಸ್ಟಿ ಜನಾಂಗಕ್ಕೆ ಪ್ರಮೋಷನ್ ನೀಡುವಂತೆ ಮಾಡಿದವರು ಬಾಬುಜೀ ಎಂಬ ಮಾತನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ. ಕೆ. ಉಮೇಶ್, ನಾಗರಾಜ್ ತಳವಾರ್ ಜಿಲ್ಲೆಯ ಪರಿಶಿಷ್ಟ ಜಾತಿ ಪಂಗಡ ಸಂಘಟನೆಗಳ ಸದಸ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಮತ್ತಿತರರು ಇದ್ದರು, ಸಮಾಜ ಕಲ್ಯಾಣ ಇಲಾಖೆಯ ನಳಿನಿ ಪಟಗಾರ ಸ್ವಾಗತಿಸಿದರು, ಪತ್ರಾಂಕಿತ ವ್ಯವಸ್ಥಾಪಕ ನಾಗರಾಜ್ ನಾಯಕ ವಂದಿಸಿದರು.

ವರದಿಗಾರರು: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ