Friday, April 10, 2026
Homeಆಧ್ಯಾತ್ಮಚನ್ನಮ್ಮನ ಕಿತ್ತೂರಿನಲ್ಲಿ ಏಪ್ರಿಲ್ 20ರಂದು  ಬಸವಣ್ಣನವರ ಜಯಂತಿ ನಿಮಿತ್ತ ಭವ್ಯ ಮೆರವಣಿಗೆ ಹಾಗೂ ಹಲವಾರು ಕಾರ್ಯಕ್ರಮಗಳು...

ಚನ್ನಮ್ಮನ ಕಿತ್ತೂರಿನಲ್ಲಿ ಏಪ್ರಿಲ್ 20ರಂದು  ಬಸವಣ್ಣನವರ ಜಯಂತಿ ನಿಮಿತ್ತ ಭವ್ಯ ಮೆರವಣಿಗೆ ಹಾಗೂ ಹಲವಾರು ಕಾರ್ಯಕ್ರಮಗಳು ಜರುಗುವವು.

ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಬಸವ ದಳ ಎತ್ತಿನಕೇರಿ ಹಾಗೂ ಕಿತ್ತೂರು ತಾಲೂಕಾ ಘಟಕದ ವತಿಯಿಂದ ಜಗಜ್ಯೋತಿ ಬಸವಣ್ಣನವರ 893ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಹಾಗೂ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು

ಇದೇ ಏಪ್ರಿಲ್ 20, ಸೋಮವಾರದಂದು ಕಿತ್ತೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಅಂದು ಸಾಯಂಕಾಲ 04:00 ಗಂಟೆಗೆ ಪಟ್ಟಣದ ಅರಳಿಕಟ್ಟಿ ವೃತ್ತದಿಂದ ಮೆರವಣಿಗೆಯು ಚಾಲನೆ ಪಡೆಯಲಿದೆ. ಈ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸಾಗಿ ರಾಣಿ ಚನ್ನಮ್ಮ ವೃತ್ತವನ್ನು ತಲುಪಲಿದೆ.

​ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶರಣ ರಾಯಪ್ಪ ಚ. ಹಣಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಿತ್ತೂರು ಭಾಗದ ರಾಷ್ಟ್ರೀಯ ಬಸವದಳದ ಎಲ್ಲ ಶರಣರು ಹಾಗೂ ವಿವಿಧ ಬಸವ ಪರ ಸಂಘಟನೆಗಳು ಈ ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ.

ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ” ಎಂಬ ಸಂಕಲ್ಪದೊಂದಿಗೆ ನಡೆಯುತ್ತಿರುವ ಈ ಸಮಾರಂಭಕ್ಕೆ ಕಿತ್ತೂರು ತಾಲೂಕಿನ ಸಮಸ್ತ ಬಸವಾಭಿಮಾನಿಗಳು, ಶರಣ-ಶರಣೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಪಸರಿಸಲು ಸಹಕರಿಸಬೇಕೆಂದು ಬಸವ ಜಯಂತಿ ಉತ್ಸವ ಸಮಿತಿಯು ಪ್ರಕಟಣೆಯ ಮೂಲಕ ವಿನಂತಿಸಿದೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

ಹೆಚ್ಚಿನ ಸುದ್ದಿ