Wednesday, April 1, 2026
Homeಜಿಲ್ಲಾ ಸುದ್ದಿಗಳು*ಗ್ರಾಮಾಭಿವೃದ್ಧಿ ಸಮಿತಿಗಳ ಬಲವರ್ಧನೆ ಕಾರ್ಯಗಾರ ಹಾಗೂ ಆರ್ಟಿಸನ್ ಐಡೆಂಟಿಟಿ ಕಾರ್ಡ್ ವಿತರಣೆ*

*ಗ್ರಾಮಾಭಿವೃದ್ಧಿ ಸಮಿತಿಗಳ ಬಲವರ್ಧನೆ ಕಾರ್ಯಗಾರ ಹಾಗೂ ಆರ್ಟಿಸನ್ ಐಡೆಂಟಿಟಿ ಕಾರ್ಡ್ ವಿತರಣೆ*

ಮುಂಡಗೋಡ: ಮಾರ್ಚ್ 30- ರಂದು ಮುಂಡಗೋಡ ತಾಲೂಕಿನ ಗ್ರಾಮ ಪಂಚಾಯತಿ ಮೈನಳ್ಳಿಯಲ್ಲಿ ಗ್ರಾಮಾಭಿವೃದ್ಧಿ ಸಮಿತಿಗಳ ಬಲವರ್ಧನೆ ಕಾರ್ಯಗಾರ ಹಾಗೂ ಆರ್ಟಿಸನ್ ಐಡೆಂಟಿಟಿ ಕಾರ್ಡ್ (ಕರಕುಶಲ ಕಾರ್ಮಿಕರ ಕಾರ್ಡ್) ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ತಾಲೂಕ ಸಂಯೋಜಕರು ಹಾಗೂ ಮಹತ್ವಾಂಕ್ಷಿ ತಾಲೂಕ ಕಾರ್ಯಕ್ರಮ ಮುಂಡಗೋಡದ ಶ್ರೀಮತಿ ನಕ್ಲುಬಾಯಿ ಬಾಬು ಕೋಕರೆಯವರು, ಮೈನಳ್ಳಿ ಸಿದ್ದಿ ಸಮುದಾಯದ ಬುದ್ಧಿವಂತರು ಶ್ರೀ ಪ್ರಾನ್ಸಿಸ್ ಸಾಲು ಸಿದ್ದಿಯವರು, ಶ್ರಮಜೀವಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಶ್ರೀ ಶರೀಫಸಾಬ ಮುಜಾವರು, ಗ್ರಾಮಾಭಿವೃದ್ಧಿ ಸಮಿತಿ ಸದಸ್ಯರು ಶ್ರೀಮತಿ ಶಂಕುತಲಾಬಾಯಿ ಮಾದೇವ ಶಿಂದೆಯವರು, ಹಾಗೂ ಲೊಯೋಲ ವಿಕಾಸ ಕೇಂದ್ರದ ಸಂಯೋಜಕಿಯರಾದ ಶ್ರೀಮತಿ ಮಲ್ಲಮ್ಮ ನೀರಲಗಿಯವರು ಉದ್ಘಾಟಿಸಿದರು.ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀಮತಿ ನಕ್ಲುಬಾಯಿ ಬಾಬು ಕೋಕರೆಯವರು, ಹೋಲಿಕ್ರಾಸ್ ಸಂಸ್ಥೆಯು ಸಮುದಾಯದ ಜನರಿಗೆ ಉತ್ತಮ ಶಿಕ್ಷಣ ಹಾಗೂ ಸ್ವಾವಲಂಬನೆಗೆ ನೆರವಾಗಿದ್ದು, ಸ್ವ-ಸಹಾಯ ಸಂಘಗಳ ಮೂಲಕ ಜನರು ಆರ್ಥಿಕವಾಗಿ ಬಲಿಷ್ಠರಾಗಲು ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಜೊತೆಗೆ ಆರ್ಟಿಸನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ, ಮುದ್ರಾ ಸಾಲ, ಬ್ಯಾಂಕ್ ಸಾಲ, ಸಬ್ಸಿಡಿ, ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ, ಮಾರುಕಟ್ಟೆ ವ್ಯವಸ್ಥೆ ಹಾಗೂ ಕೈಮಗ್ಗ–ಹಸ್ತಕಲಾ ವಸ್ತುಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಿ ಸಮುದಾಯದ ಬುದ್ಧಿವಂತರು ಶ್ರೀ ಪ್ರಾನ್ಸಿಸ್ ಸಾಲು ಸಿದ್ದಿಯವರು, ಆರ್ಟಿಸನ್ ಕಾರ್ಡ್ ಪಡೆದವರು ಅದರ ಸದುಪಯೋಗ ಪಡೆದು ತಮ್ಮ ಕಲೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಸ್ವ ಉದ್ಯೋಗ ಆರಂಭಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಲೊಯೋಲ ವಿಕಾಸ ಕೇಂದ್ರದ ಸಂಯೋಜಕಿಯರಾದ ಶ್ರೀಮತಿ ಮಲ್ಲಮ್ಮ ನೀರಲಗಿಯವರು, ಗ್ರಾಮಾಭಿವೃದ್ಧಿ ಸಮಿತಿಗಳ ಬಲವರ್ಧನೆಯ ಕುರಿತು ತರಬೇತಿ ನೀಡಿದರು. ಹಳ್ಳಿಗಳ ಅಭಿವೃದ್ಧಿಗೆ ಸ್ಥಳೀಯ ಜನರು ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು. ಕುದುರೆನಾಳ, ಮೈನಳ್ಳಿ ಕಾಲೋನಿ, ದುರ್ಗಾ ಕಾಲೋನಿ, ಕಳಕಿಕಾರೆ, ಗೌಳಿ ಓಣಿ, ಬೆಳ್ಳಿಬೆಳಕು, ಲಕ್ಷ್ಮಿ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳ ಸಮಸ್ಯೆಗಳನ್ನು ಗುರುತಿಸಿ ಒಂದು ವರ್ಷದ ಕ್ರಿಯಾ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಜಯಶ್ರೀರವರು ನಿರ್ವಹಿಸಿದರು. ವಂದನಾರ್ಪಣೆಯನ್ನು ಜನವೇದಿಕೆ ನಾಯಕಿಯಾದ ಶ್ರೀಮತಿ ಕನ್ನುಬಾಯಿ ದೊಂಡು ಎಡಗೆಯವರು ಸಲ್ಲಿಸಿದರು. ಬಳಿಕ ಊಟ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಹೆಚ್ಚಿನ ಸುದ್ದಿ